ETV Bharat / bharat

ಭಾರತದ ಜೊತೆಗಿನ ಸಂಬಂಧ ಉಳಿಸಿಕೊಳ್ಳಲು ಬಯಸುತ್ತೇವೆ: ತಾಲಿಬಾನ್

ತಾಲಿಬಾನ್​ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜೈ ಭಾರತದ ಬಗ್ಗೆ ಮಾತನಾಡಿ, ಭಾರತ ಪ್ರಮುಖ ರಾಷ್ಟ್ರ. ಅದರ ಜೊತೆ ನಾವು ಸಂಬಂಧಗಳನ್ನು ಉಳಿಸಿಕೊಳ್ಳಲು ಮುಂದಾಗುತ್ತೇವೆ ಎಂದು ಹೇಳಿದ್ದಾನೆ.

ತಾಲಿಬಾನ್​
ಅಲ್ಲಿನ ಪರಿಸ್ಥಿತಿ
author img

By

Published : Aug 30, 2021, 8:41 AM IST

ನವದೆಹಲಿ: ತಾಲಿಬಾನ್​ ಪಡೆ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದು, ಸರ್ಕಾರ ರಚನೆಯ ಕಸರತ್ತು ಮುಂದುವರೆಸಿದೆ. ಈ ಸಂದರ್ಭದಲ್ಲಿ ಭಾರತದ ಜೊತೆಗಿನ ಸಂಬಂಧಗಳ ಬಗ್ಗೆ ಪ್ರತಿಕ್ರಿಯೆ ನೀಡಿದೆ.

ಭಾರತದ ಜೊತೆ ಅಫ್ಘಾನಿಸ್ತಾನವು ಆರ್ಥಿಕ, ರಾಜಕೀಯ ಸಂಬಂಧಗಳನ್ನು ಕಾಯ್ದುಕೊಳ್ಳಲು ತಾಲಿಬಾನ್ ಬಯಸುತ್ತದೆ ಎಂದು ಸಂಘಟನೆಯ ಹಿರಿಯ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜೈ ಹೇಳಿಕೆ ನೀಡಿದ್ದಾನೆ.

ತಾಲಿಬಾನ್​
ತಾಲಿಬಾನ್​ ಉಗ್ರರು

ಪಾಷ್ಟೋದಲ್ಲಿ ವರ್ಚುವಲ್ ಭಾಷಣದಲ್ಲಿ ಈ ಬಗ್ಗೆ ಮಾತನಾಡಿದ್ದು, ವಿವಿಧ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆ ನಡೆಸಿ ಕಾಬೂಲ್‌ನಲ್ಲಿ ಸರ್ಕಾರ ರಚಿಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾನೆ.

ತಾಲಿಬಾನಿಗಳು
ಶಸ್ತ್ರಸಜ್ಜಿತ ತಾಲಿಬಾನ್ ಉಗ್ರರು

'ಭಾರತ ಪ್ರಮುಖ ರಾಷ್ಟ್ರ':

ನಾವು ಭಾರತದೊಂದಿಗಿನ ವ್ಯಾಪಾರ, ಆರ್ಥಿಕ ಮತ್ತು ರಾಜಕೀಯ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತೇವೆ. ಆ ದೇಶದ ಜೊತೆ ಸಂಬಂಧವನ್ನು ಉಳಿಸಿಕೊಳ್ಳಲು ಬಯಸುತ್ತೇವೆ ಎಂದು ಸ್ಟಾನೆಕ್‌ಜೈ ಹೇಳಿದ್ದಾನೆ.

ಭಾರತ ಮತ್ತು ಅಫ್ಘಾನಿಸ್ತಾನದ ನಡುವಿನ ಏರ್ ಕಾರಿಡಾರ್ ಅನ್ನು ಉಲ್ಲೇಖಿಸಿದ ತಾಲಿಬಾನ್​ ನಾಯಕ, ಪಾಕಿಸ್ತಾನದ ಮೂಲಕ ಭಾರತದೊಂದಿಗೆ ಅಫ್ಘಾನಿಸ್ತಾನದ ವ್ಯಾಪಾರವು ಬಹಳ ಮುಖ್ಯ. ಜೊತೆಗೆ, ಭಾರತವನ್ನು 'ಪ್ರಮುಖ ದೇಶ' ಎಂದು ವಿವರಿಸಿದ್ದಾನೆ. ತಮ್ಮ ಭಾಷಣದಲ್ಲಿ ಪಾಕಿಸ್ತಾನ, ಚೀನಾ ಮತ್ತು ರಷ್ಯಾ ಜೊತೆಗಿನ ಅಫ್ಘಾನಿಸ್ತಾನದ ಸಂಬಂಧವನ್ನೂ ಉಲ್ಲೇಖಿಸಿದ್ದಾನೆ.

ತಾಲಿಬಾನಿಗಳು
ಕಾಬೂಲ್‌ನಲ್ಲಿ ಶಸ್ತ್ರಸಜ್ಜಿತ ತಾಲಿಬಾನಿಗಳು

ತಾಲಿಬಾನ್ ನಾಯಕತ್ವವು ಅಲ್ಲಿನ ವಿಭಿನ್ನ ಜನಾಂಗೀಯ ಗುಂಪುಗಳು, ರಾಜಕೀಯ ಪಕ್ಷಗಳಿರುವ ಇಸ್ಲಾಮಿಕ್ ಎಮಿರೇಟ್‌ ಸರ್ಕಾರವನ್ನು ರಚಿಸುವ ಬಗ್ಗೆ ಸಮಾಲೋಚಿಸುತ್ತಿದೆ. ಹಾಗೆಯೇ ಅದನ್ನು ಅಫ್ಘಾನಿಸ್ತಾನದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರುವ ನಾಯಕತ್ವದ ಸರ್ಕಾರವನ್ನು ದೇಶದೊಳಗೆ ಮತ್ತು ಹೊರಜಗತ್ತು ಒಪ್ಪಿಕೊಳ್ಳಬೇಕು ಮತ್ತು ಮಾನ್ಯತೆ ನೀಡಬೇಕು ಎಂಬ ಯೋಜನೆಯಲ್ಲಿ ಕಾರ್ಯಪ್ರವೃತ್ತವಾಗಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡ ನಂತರ, ಭಾರತವು ತನ್ನ ನಾಗರಿಕರನ್ನು ಸ್ಥಳಾಂತರಿಸುವತ್ತ ಗಮನಹರಿಸಿದೆ. ಹಾಗೆಯೇ ಕಾಬೂಲ್‌ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡುತ್ತಿದೆ. ಅಲ್ಲಿನ ಸದ್ಯದ ಪರಿಸ್ಥಿತಿ ಅನಿಶ್ಚಿತವಾಗಿದೆ. ಪ್ರಧಾನ ಕಾಳಜಿ ಜನರ ರಕ್ಷಣೆ ಮತ್ತು ಸುರಕ್ಷತೆಯಾಗಿದೆ. ಕಾಬೂಲ್‌ನಲ್ಲಿ ಸರ್ಕಾರ ರಚಿಸುವ ಯಾವುದೇ ಸಂಸ್ಥೆಯ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅರಿಂದಮ್ ಬಾಗ್ಚಿ ಪ್ರತಿಕ್ರಿಯಿಸಿದ್ದಾರೆ.

ವಿಮಾನ ನಿಲ್ದಾಣ
ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗ

ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಅವರು ವಿವಿಧ ರಾಜಕೀಯ ಪಕ್ಷಗಳ ನಾಯಕರ ಜೊತೆ ಮಾತನಾಡಿ, ಅಫ್ಘನ್ ಬಿಕ್ಕಟ್ಟಿನ ಪ್ರಮುಖ ಪಾಲುದಾರರು ಮತ್ತು ಪ್ರಾದೇಶಿಕ ರಾಷ್ಟ್ರಗಳೊಂದಿಗೆ ಭಾರತ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ.

ಭಾರತದ ಕಾದು ನೋಡುವ ತಂತ್ರ:

ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆ ಸಂಬಂಧ ಭಾರತವು 'ಕಾದು ನೋಡುವ' ವಿಧಾನ ಅಳವಡಿಸಿಕೊಳ್ಳುತ್ತಿದೆ. ಅಪ್ಘನ್​ನಲ್ಲಿ ತಾಲಿಬಾನ್ ಸರ್ಕಾರವೇ ರಚನೆ ಆಗುತ್ತಾ? ಅಥವಾ ಇತರ ಅಫ್ಘನ್ ನಾಯಕರೊಂದಿಗೆ ಅಧಿಕಾರ ಹಂಚಿಕೆ ಆಗುತ್ತಾ? ಎಂಬುದನ್ನು ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ.

ಭಾರತವು ಅಫ್ಘಾನಿಸ್ತಾನದ ಅಭಿವೃದ್ಧಿ ಕೆಲಸಗಳಲ್ಲಿ ಪ್ರಮುಖ ಪಾಲುದಾರನಾಗಿದ್ದು, ದೇಶಾದ್ಯಂತ ಸುಮಾರು 500 ಯೋಜನೆಗಳನ್ನು ಕೈಗೊಳ್ಳಲು 3 ಬಿಲಿಯನ್ ಯುಎಸ್ ಡಾಲರ್‌ಗೂ ಹೆಚ್ಚು ಹೂಡಿಕೆ ಮಾಡಿದೆ.

1980ರ ದಶಕದ ಆರಂಭದಲ್ಲಿ ಡೆಹ್ರಾಡೂನ್‌ನ ಪ್ರತಿಷ್ಠಿತ ಭಾರತೀಯ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿದೇಶಿ ಕೆಡೆಟ್‌ಗಳ ಗುಂಪಿನಲ್ಲಿ ಸ್ಟಾನೆಕ್‌ ಕೂಡ ಇಬ್ಬ. ನಂತರ ಈತ ಅಫ್ಘನ್ ಸೇನೆ ತೊರೆದಿದ್ದ ಅನ್ನೋದು ಇಲ್ಲಿ ಗಮನಾರ್ಹ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.