ನವದೆಹಲಿ: ಕಳೆದೊಂದು ವರ್ಷದಿಂದ ನಡೆಸುತ್ತಿದ್ದ ರೈತರ ಹೋರಾಟಕ್ಕೆ (farmers fight) ಕೊನೆಗೂ ಕೇಂದ್ರ ಸರ್ಕಾರ ಮಣಿದಿದ್ದು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ(three controversial farm laws repealed) .
ಇಂದು ಗುರುನಾನಕ್ ದಿನಾಚರಣೆ (guru nanak jayanti) ನಿಮಿತ್ತ ದೇಶವನ್ನುದ್ದೇಶಿಸಿ ಮಾತನಾಡಿದ ಪಿಎಂ ಮೋದಿ (Modi repeals controversial farm laws ), "ಇಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ, ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಈ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಕೃಷಿ ಕಾನೂನುಗಳನ್ನ ಹಿಂಪಡೆಯುವ ಪ್ರಕ್ರಿಯೆಯನ್ನ ಪೂರ್ಣಗೊಳಿಸುತ್ತೇವೆ. ಹೋರಾಟ ಮಾಡುತ್ತಿರುವ ಎಲ್ಲ ರೈತರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿ ಹೊಸ ಜೀವನ ಆರಂಭಿಸಲು ಒತ್ತಾಯಿಸುತ್ತೇನೆ" ಎಂದು ಇದೇ ವೇಳೆ ರೈತರಲ್ಲಿ ಪ್ರಧಾನಿ ಮನವಿ ಮಾಡಿಕೊಂಡರು.
"ನಾನೇನೇ ಮಾಡಿದ್ದರೂ ಅದು ರೈತರಿಗಾಗಿ ಮಾಡಿದ್ದೇನೆ. ನಾನು ಮಾಡುತ್ತಿರುವುದು ನಿಮಗಾಗಿ ಮತ್ತು ದೇಶಕ್ಕಾಗಿ. ನಿಮ್ಮ ಆಶೀರ್ವಾದದಿಂದ ನನ್ನ ಶ್ರಮದಲ್ಲಿ ನಾನು ಏನನ್ನೂ ಬಿಡಲಿಲ್ಲ. ಇನ್ಮುಂದೆಯೂ ಮತ್ತಷ್ಟು ಶ್ರಮದೊಂದಿಗೆ ಕೆಲಸ ಮಾಡುವೆ. ಈ ಮೂಲಕ ನಿಮ್ಮ ಕನಸುಗಳು, ರಾಷ್ಟ್ರದ ಕನಸುಗಳು ನನಸಾಗಬಹುದು ಎಂದು ಪ್ರಧಾನಿ ಮೋದಿ ಇದೇ ವೇಳೆ, ಭರವಸೆ ನೀಡಿದರು.
2020ರ ನವೆಂಬರ್ನಿಂದ ಮೋದಿ ಸರ್ಕಾರದ ನೂತನ ಕೃಷಿ ಕಾಯ್ದೆಗಳಾದ
1. ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರವರ್ತನೆ ಮತ್ತು ಅನುಕೂಲ) ಕಾಯ್ದೆ
2.ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ
3.ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ
ಈ ಮೂರು ಕಾಯ್ದೆಗಳ ವಿರುದ್ಧ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಸಾವಿರಾರು ರೈತರು ದೆಹಲಿಯ ಗಡಿಭಾಗಗಳಲ್ಲಿ ಶಿಬಿರಗಳನ್ನು ಮಾಡಿಕೊಂಡು ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಾ ಧರಣಿ, ಪ್ರತಿಭಟನೆ, ಬಂದ್ ನಡೆಸುತ್ತಾ ಬಂದಿದ್ದರು(farmers fight against three farm laws ). ಈ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಅಸು ನೀಗಿದ್ದರು.
-
#WATCH | We have decided to repeal all 3 farm laws, will begin the procedure at the Parliament session that begins this month. I urge farmers to return home to their families and let's start afresh: PM Narendra Modi pic.twitter.com/0irwGpna2N
— ANI (@ANI) November 19, 2021 " class="align-text-top noRightClick twitterSection" data="
">#WATCH | We have decided to repeal all 3 farm laws, will begin the procedure at the Parliament session that begins this month. I urge farmers to return home to their families and let's start afresh: PM Narendra Modi pic.twitter.com/0irwGpna2N
— ANI (@ANI) November 19, 2021#WATCH | We have decided to repeal all 3 farm laws, will begin the procedure at the Parliament session that begins this month. I urge farmers to return home to their families and let's start afresh: PM Narendra Modi pic.twitter.com/0irwGpna2N
— ANI (@ANI) November 19, 2021
ಮೋದಿಯ ಈ ಮಹತ್ತರ ನಿರ್ಧಾರವನ್ನು ರೈತ ಸಂಘಟನೆಗಳು ಸ್ವಾಗತಿಸಿದ್ದು, ವಿಜಯವನ್ನು ಸಂಭ್ರಮಿಸುತ್ತಿದ್ದಾರೆ.
-
And its a WIN, after long 1 year!!
— Kisan Ekta Morcha (@Kisanektamorcha) November 19, 2021 " class="align-text-top noRightClick twitterSection" data="
Modi Govt decides to REPEAL ALL 3 FARM LAWS- says PM Modi
Unity & Justice Is On Its Way to Success#VictoryForFarmers #FarmersProtest #KisanMajdoorEktaZindabaad
">And its a WIN, after long 1 year!!
— Kisan Ekta Morcha (@Kisanektamorcha) November 19, 2021
Modi Govt decides to REPEAL ALL 3 FARM LAWS- says PM Modi
Unity & Justice Is On Its Way to Success#VictoryForFarmers #FarmersProtest #KisanMajdoorEktaZindabaadAnd its a WIN, after long 1 year!!
— Kisan Ekta Morcha (@Kisanektamorcha) November 19, 2021
Modi Govt decides to REPEAL ALL 3 FARM LAWS- says PM Modi
Unity & Justice Is On Its Way to Success#VictoryForFarmers #FarmersProtest #KisanMajdoorEktaZindabaad