ETV Bharat / bharat

ಚೆಲ್ಸೀ ತಂಡದ ಪ್ರದರ್ಶನ ಉತ್ತಮವಾಗಿದೆ: ಫ್ರಾಂಕ್ ಲ್ಯಾಂಪಾರ್ಡ್ ಸಂತಸ

author img

By

Published : Nov 23, 2020, 7:09 PM IST

Updated : Nov 24, 2020, 12:04 AM IST

ಚೆಲ್​ಸೀ ತಂಡವು ಪ್ರಸ್ತುತ ಫುಟ್​​ಬಾಲ್​ ಪ್ರೀಮಿಯರ್ ಲೀಗ್ ಟೇಬಲ್‌ನಲ್ಲಿ ಒಂಬತ್ತು ಪಂದ್ಯಗಳಿಂದ 18 ಅಂಕ ಪಡೆದುಕೊಂಡಿದೆ. ಈ ಮೂಲಕ ಮೂರನೇ ಸ್ಥಾನದಲ್ಲಿದೆ..

ಚೆಲ್​ಸೀ ವ್ಯವಸ್ಥಾಪಕ ಫ್ರಾಂಕ್ ಲ್ಯಾಂಪಾರ್ಡ್
ಚೆಲ್​ಸೀ ವ್ಯವಸ್ಥಾಪಕ ಫ್ರಾಂಕ್ ಲ್ಯಾಂಪಾರ್ಡ್

ಲಂಡನ್: ಚೆಲ್ಸೀ ವ್ಯವಸ್ಥಾಪಕ ಫ್ರಾಂಕ್ ಲ್ಯಾಂಪಾರ್ಡ್ ಅವರು ಪ್ರೀಮಿಯರ್ ಲೀಗ್​ನಲ್ಲಿ ತಮ್ಮ ತಂಡವು ನೀಡಿದ ಪ್ರದರ್ಶನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಪ್ರೀಮಿಯರ್ ಲೀಗ್ ಟೇಬಲ್‌ನಲ್ಲಿ ಚೆಲ್ಸೀ ತಂಡವು ಒಂಬತ್ತು ಪಂದ್ಯಗಳಿಂದ 18 ಅಂಕ ಪಡೆದು ಮೂರನೇ ಸ್ಥಾನದಲ್ಲಿದೆ.

"ಮ್ಯಾಂಚೆಸ್ಟರ್ ಸಿಟಿ ಮತ್ತು ಲಿವರ್‌ಪೂಲ್ ಸದ್ಯ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದು, ಅವುಗಳನ್ನು ಹಿಮ್ಮೆಟ್ಟಿಸುವುದು ಮತ್ತು ಬಳಿಕ ವಿವಿಧ ಹಂತದ ಸ್ಥಿರತೆಯನ್ನು ಕಾಪಾಡುವುದು ನಮ್ಮ ಗುರಿ" ಎಂದು ಕ್ಲಬ್‌ನ ಅಧಿಕೃತ ವೆಬ್‌ಸೈಟ್ ಲ್ಯಾಂಪಾರ್ಡ್ ಉಲ್ಲೇಖಿಸಿದೆ.

"ನಾವು ಸುಧಾರಿಸುತ್ತಿದ್ದೇವೆ. ಆದರೆ, ಈ ಆರಂಭಿಕ ಹಂತದಲ್ಲಿ ಅವೆಲ್ಲ ಸಾಧ್ಯವಿಲ್ಲ. ನಾವು ಆ ಮಟ್ಟದ ಸ್ಥಿರತೆಯನ್ನು ತಲುಪಲು ಪ್ರಯತ್ನಿಸಬೇಕು. ಆದರೆ, ಈಗಿನ ದಾಖಲೆ ಬಗ್ಗೆ ನನಗೆ ಸಂತೋಷವಾಗಿದೆ" ಎಂದು ಹೇಳಿದರು.

ಶನಿವಾರ ನಡೆದ ಪಂದ್ಯದಲ್ಲಿ ಚೆಲ್ಸೀ ತಂಡವು ನ್ಯೂಕ್ಯಾಸಲ್ ಯುನೈಟೆಡ್ ವಿರುದ್ಧ 2-0 ಗೋಲುಗಳಿಂದ ಜಯ ಸಾಧಿಸಿತು. ಈ ಮೂಲಕ ಮೂರನೇ ಸ್ಥಾನಕ್ಕೇರಿದೆ.

Last Updated : Nov 24, 2020, 12:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.