ಕನ್ಯಾಕುಮಾರಿ (ತಮಿಳುನಾಡು): ತಮಿಳುನಾಡಿನ ಕನ್ಯಾಕುಮಾರಿಯ ಕೊಡಾಯರ್ ನದಿ ಮತ್ತು ತಿರುಪರಪ್ಪು ಜಲಪಾತ ಬಳಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆ ತಿರುಪರಪ್ಪು ಜಲಪಾತದಲ್ಲಿ ನೀರು ಅಧಿಕವಾಗಿದ್ದು, ಜಲಪಾತ ಉಕ್ಕಿ ಹರಿಯುತ್ತಿದೆ.
ಜಿಲ್ಲೆಯ ನೀರಿನ ಜಲಾಶಯಗಳು ವೇಗವಾಗಿ ಭರ್ತಿಯಾಗುತ್ತಿರುವುದರಿಂದ, ಪೆಚಿಪರೈ ಅಣೆಕಟ್ಟಿನಿಂದ 8,000 ಕ್ಯೂಸೆಕ್ ನೀರನ್ನು ಮತ್ತು ಚಿತ್ತಾರ್ ಅಣೆಕಟ್ಟಿನಿಂದ 2,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.