ನವದೆಹಲಿ/ಗಾಜಿಯಾಬಾದ್: ಬಾಲಕಿಯೊಬ್ಬಳನ್ನು ಬೀದಿ ನಾಯಿಗಳು ಬೆನ್ನಟ್ಟಿ ಕಚ್ಚಿ ಗಾಯಗೊಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ನಾಯಿಗಳ ದಾಳಿಯಿಂದ ಬಾಲಕಿ ಭಯದಿಂದ ಓಡಿ ಮನೆಯೊಳಗೆ ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ರಾಷ್ಟ್ರ ರಾಜಧಾನಿ ದೆಹಲಿ ಸಮೀಪದಲ್ಲೇ ಗಾಜಿಯಾಬಾದ್ನಲ್ಲಿ ಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಪ್ರತಿಷ್ಠಿತ ಕಾಲೋನಿಗಳಲ್ಲೂ ಬೀದಿ ನಾಯಿಗಳು ಲಗ್ಗೆ ಇಡುತ್ತಿವೆ. ಇಲ್ಲಿನ ವೈಶಾಲಿ ಸೊಸೈಟಿಯ ನಿವಾಸಿ 11 ವರ್ಷದ ಬಾಲಕಿಯ ಹೊರ ಹೋಗುತ್ತಿದ್ದಾಗ ನಾಲ್ಕೈದು ನಾಯಿಗಳು ಬೆನ್ನಟ್ಟಿ ಬಂದಿವೆ. ಇದರಿಂದ ಭಯಭೀತಗೊಂಡ ಬಾಲಕಿ ಸೊಸೈಟಿಯ ಗೇಟ್ ಮೂಲಕ ಓಡಿ ಬಂದಿದ್ದಾಳೆ. ಆದರೂ, ನಾಯಿಗಳು ಒಳಗಡೆ ನುಗ್ಗಿವೆ ಬಂದಿವೆ.
ಈ ನಾಯಿಗಳು ಬಾಲಕಿಯನ್ನು ಬೆನ್ನಟ್ಟಿದಾಗ ಗೇಟ್ ಬಳಿ ಭದ್ರತಾ ಸಿಬ್ಬಂದಿ ಕೂಡ ಇದ್ದರು. ಆದರೆ, ಏಕಾಏಕಿ ನುಗ್ಗಿ ಬಂದ ನಾಯಿಗಳನ್ನು ಭದ್ರತಾ ಸಿಬ್ಬಂದಿ ಕೂಡ ಆತಂಕಗೊಂಡಿದ್ದಾರೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ನಾಯಿಗಳ ದಾಳಿಯಲ್ಲಿ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾಲಕಿ ಕಾಲಿಗೂ ನಾಯಿವೊಂದು ಕಚ್ಚಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ನೌಕಾಪಡೆಯ ಮಾಜಿ ನೌಕರನ ಕೊಲೆ.. ಶವ 6 ತುಂಡುಗಳಾಗಿ ಕತ್ತರಿಸಿ ಎಸೆದಿದ್ದ ಪತ್ನಿ ಮತ್ತು ಮಗ