ಉಜ್ಜಯಿನಿ (ಮಧ್ಯಪ್ರದೇಶ): ಕಳ್ಳನೊಬ್ಬ ಮಾಲೀಕನ ಗಮನಕ್ಕೆ ಬರದಂತೆ ಚಾಲಾಕಿತನದಿಂದ ಮೊಬೈಲ್ ಕದ್ದಿರುವ ದೃಶ್ಯದ ಸಿಸಿಟಿವಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಮಹಿದ್‌ಪುರ ಪಟ್ಟಣದ ಮೆಡಿಕಲ್ ಶಾಪ್‌ನಲ್ಲಿ ನಡೆದ ಘಟನೆ ಇದಾಗಿದೆ.
ಮೆಡಿಕಲ್ ಶಾಪ್‌ನಲ್ಲಿ ಏನನ್ನೋ ಖರೀದಿಸುತ್ತಿದ್ದ ವ್ಯಕ್ತಿಯೊಬ್ಬ ಮೊಬೈಲ್ ಅನ್ನು ತನ್ನ ಶರ್ಟ್ ಮುಂಭಾಗದ ಜೇಬಿನಲ್ಲಿ ಇಟ್ಟುಕೊಂಡಿರುತ್ತಾರೆ. ಇದನ್ನು ಕಂಡ ಕಳ್ಳ ತಾನೂ ಕೂಡ ಏನನ್ನೋ ಖರೀದಿಸುವ ನೆಪದಲ್ಲಿ ಶಾಪ್ಗೆ ಬಂದು ಪಕ್ಕದಲ್ಲಿದ್ದ ಆ ವ್ಯಕ್ತಿಯ ಜೇಬಿನಿಂದ ಜಾಣತನ ಪ್ರದರ್ಶಿಸಿ ಮೊಬೈಲ್ ಕದ್ದಿದ್ದಾನೆ. ಆದರೆ ಮೊಬೈಲ್ ಮಾಲೀಕನ ಗಮನಕ್ಕೆ ಇದು ಬಾರದೇ ಇರುವುದು ವಿಪರ್ಯಾಸ.
ಇದನ್ನೂ ಓದಿ: ಸಿನಿಮೀಯ ಸ್ಟೈಲ್ನಲ್ಲಿ ಚೇಸಿಂಗ್.. ಮಂಗಳೂರಲ್ಲಿ ಕಳ್ಳರ ಹಿಡಿದ ಪೊಲೀಸ್-ವಿಡಿಯೋ
ಮೆಡಿಕಲ್ ಶಾಪ್‌ನ ಸಿಸಿಟಿವಿಯಲ್ಲಿ ಈ ಕಳ್ಳನ ಕೈಚಳಕ ಸೆರೆಯಾಗಿದೆ. ಆದರೆ, ಮೊಬೈಲ್ ಮಾಲೀಕ ಇನ್ನೂ ಪೊಲೀಸರ ಬಳಿ ದೂರು ದಾಖಲಿಸಿಲ್ಲ.