ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪಾರ್ಟಿ ಆರೋಪದಡಿ ವಶಕ್ಕೆ ಪಡೆಯಲಾಗಿದೆ. ಈ ಹಿನ್ನೆಲೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ಆರ್ಯನ್ ಸೇರಿದಂತೆ ಇನ್ನಿಬ್ಬರನ್ನು ಇಂದು ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ದರು. ಮುಂಬೈನಲ್ಲಿ ಎನ್ಸಿಬಿ ತಂಡ ನಡೆಸಿದ ದಾಳಿಗಳಲ್ಲಿ ಆರೋಪಿಗಳಿಗೆ ಎನ್ಸಿಬಿ ಬಲೆ ಹಾಕಿದೆ.
ಇದನ್ನೂ ಓದಿ: ಡ್ರಗ್ಸ್ ಪಾರ್ಟಿಯಲ್ಲಿ ಶಾರುಖ್ ಖಾನ್ ಮಗನ ಹೆಸರು : ಆ ಮಗುವಿಗೆ ಉಸಿರಾಡಲು ಬಿಡಿ ಎಂದ ಸುನೀಲ್ ಶೆಟ್ಟಿ
ವಶಕ್ಕೆ ಪಡೆದುಕೊಂಡಿರುವ ಎಲ್ಲ ಎಂಟು ಜನ ಆರೋಪಿಗಳನ್ನು ಗುರುತಿಸಲಾಗಿದೆ. ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚ, ನೂಪುರ್ ಸಾರಿಕಾ, ಇಸ್ಮೀತ್ ಸಿಂಗ್, ಮೊಹಕ್ ಜಸ್ವಾಲ್, ವಿಕ್ರಾಂತ್ ಚೋಕರ್ ಮತ್ತು ಗೋಮಿತ್ ಚೋಪ್ರಾ ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು.