ಚಂಬಾ(ಹಿಮಾಚಲಪ್ರದೇಶ) : ಹಿಮಾಚಲ ಪ್ರದೇಶದಲ್ಲಿ ಭಾರೀ ಹಿಮಪಾತವಾಗುತ್ತಿದೆ. ರಸ್ತೆಗಳು ಹಿಮದಿಂದ ಆವೃತ್ತವಾಗಿ ಸಂಚಾರಕ್ಕೆ ಪರದಾಡಬೇಕಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯ ಮಧ್ಯೆಯೂ ವಿವಾಹವಾದ ಜೋಡಿಯೊಂದರ ಮೆರವಣಿಗೆ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.
ಹಿಮಾಚಲದ ಚಂಬಾ ಪಟ್ಟಣದಲ್ಲಿ ವಧು-ವರರನ್ನು ಪಲ್ಲಕ್ಕಿ ಮೇಲೆ ಕೂರಿಸಿ ಹೊತ್ತುಕೊಂಡು ಸಂಭ್ರಮದಿಂದ ಮೆರವಣಿಗೆ ಮಾಡಲಾಗಿದೆ. ತಲೆಯ ಮೇಲೆ ಹಿಮ ಬೀಳುತ್ತಿದ್ದರೂ ಕೊಡೆ ಹಿಡಿದುಕೊಂಡು ಡೊಳ್ಳು ಬಾರಿಸುತ್ತಾ, ಕೊಳಲು, ವಾದ್ಯಗಳನ್ನು ನುಡಿಸುತ್ತಾ ಜನರು ಸಂಭ್ರಮದಿಂದ ನವವಿವಾಹಿತರನ್ನು ಮೆರವಣಿಗೆಯಲ್ಲಿ ಕೊಂಡೊಯ್ದಿದ್ದಾರೆ.
ಹಿಮಾಚಲಪ್ರದೇಶದಲ್ಲಿ ಮದುವೆ ಸಮಾರಂಭದ ವೇಳೆ ಕೆಲವು ಆಚರಣೆಗಳನ್ನು ಕಡ್ಡಾಯವಾಗಿ ನಿಗದಿತ ಸಮಯಕ್ಕೆ ಮಾಡಲೇಬೇಕಂತೆ. ಇಲ್ಲವಾದಲ್ಲಿ ಮದುವೆಯೇ ನಿಲ್ಲಿಸಬೇಕಂತೆ. ಇದರಿಂದಾಗಿ ಹಿಮಪಾತವಾಗುತ್ತಿದ್ದರೂ, ದಟ್ಟವಾದ ಹಿಮದ ರಾಶಿಯ ಮಧ್ಯೆಯೂ ಜೋಡಿಯನ್ನು ಹೊತ್ತುಕೊಂಡು ಹೋಗಿ ಮದುವೆ ಕಾರ್ಯ ಮುಗಿಸಿದ್ದಾರೆ.
ಇದನ್ನೂ ಓದಿ: ಶಾಲೆಯಲ್ಲೇ ವಿದ್ಯಾರ್ಥಿನಿಯನ್ನು ಎಳೆದು ತಬ್ಬಿಕೊಂಡ ಮುಖ್ಯ ಶಿಕ್ಷಕ..VIDEO ಸೆರೆಹಿಡಿದ ವಿದ್ಯಾರ್ಥಿಗಳು!