ಉಜ್ಜಯಿನಿ (ಮಧ್ಯ ಪ್ರದೇಶ): ದೇಶಾದ್ಯಂತ ಶ್ರೀ ಕೃಷ್ಣ ಜನ್ಮಾಷ್ಟಮಿ ಮನೆ ಮಾಡಿದೆ. ಇಂದು ಮಹಾಕಲ್ ನಗರದ ಭಾರತ ಮಾತಾ ಮಂದಿರದ ಮುಂದೆ 200 ಕ್ಕೂ ಹೆಚ್ಚು ಮಕ್ಕಳು ಕೊಳಲು ನುಡಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸದಸ್ಯರಾಗಿರುವ 200 ಮಕ್ಕಳು ಆನ್ಲೈನ್ ಮೂಲಕ 3 ತಿಂಗಳು ತರಬೇತಿ ಪಡೆದಿದ್ದರು. ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಆರ್ಎಸ್ಎಸ್ ಈ ಭವ್ಯ ಕಾರ್ಯಕ್ರಮವನ್ನು ಆಯೋಜಿಸುತ್ತದೆ.
ಆರ್ಎಸ್ಎಸ್ನ ಪ್ರಾದೇಶಿಕ ಸಂಘಚಾಲಕ ಅಶೋಕ್ ಸೋಹ್ನಿ ಮತ್ತು ದೈಹಿಕ ಶಿಕ್ಷಣದ ಮುಖ್ಯಸ್ಥ ಜಗದೀಶ್ ಪ್ರಸಾದ್ ಇಂದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: ಕೃಷ್ಣಾಷ್ಟಮಿ ಬಂಪರ್: ಭಾರತಕ್ಕೆ ಪ್ಯಾರಾಲಿಂಪಿಕ್ಸ್ನಲ್ಲಿ ಪದಕಗಳ ಸುರಿಮಳೆ
ಕೋವಿಡ್ ನಿಯಮಗಳನ್ನು ಅನುಸರಿಸಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.