ETV Bharat / bharat

ಸಮೀರ್ ವಾಂಖೆಡೆ ಪ್ರಕರಣ : ವಿಚಾರಣೆಗೆ ಹಾಜರಾಗಲು ಪೊಲೀಸ್ ಕಮಿಷನರ್​ಗೆ ಎನ್‌ಸಿಎಸ್‌ಸಿ ಆಯೋಗದ ನೋಟಿಸ್​ - ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂದಿಸಿದ್ದ ವಾಂಖೆಡೆ

ವಾಂಖೆಡೆ ತಂದೆಯ ಹೆಸರು ದಾವೂದ್, ದ್ಯಾನದೇವ್ ಅಲ್ಲ ಎಂದು ಮಲಿಕ್ ಆರೋಪಿಸಿದ್ದರು. ಎಲ್ಲಾ ಆರೋಪಗಳನ್ನು ವಾಂಖೆಡೆ ನಿರಾಕರಿಸಿದ್ದು, ನ್ಯಾಯಕ್ಕಾಗಿ ಎನ್‌ಸಿಎಸ್‌ಸಿ ಆಯೋಗದ ಮೆಟ್ಟಿಲೇರಿದ್ದಾರೆ..

ಸಮೀರ್ ವಾಂಖೆಡೆ ಪ್ರಕರಣ
ಸಮೀರ್ ವಾಂಖೆಡೆ ಪ್ರಕರಣ
author img

By

Published : Jan 7, 2022, 3:02 PM IST

ನವದೆಹಲಿ : ಎನ್‌ಸಿಬಿ ಮಾಜಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ನೀಡಿದ ‘ಕಿರುಕುಳ’ ಆರೋಪದ ದೂರಿಗೆ ಸಂಬಂಧಿಸಿದಂತೆ ವೈಯಕ್ತಿಕ ವಿಚಾರಣೆಗಾಗಿ ಜನವರಿ 31ರಂದು ತನ್ನ ಮುಂದೆ ಹಾಜರಾಗುವಂತೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗವು (ಎನ್‌ಸಿಎಸ್‌ಸಿ) ಮುಂಬೈ ಪೊಲೀಸ್ ಕಮಿಷನರ್ ಹೇಮಂತ್ ನಗ್ರಾಳೆ ಅವರಿಗೆ ತಿಳಿಸಿದೆ.

ಎನ್‌ಸಿಪಿ ಸಚಿವ ಮಲಿಕ್ ಅವರು ನಿರಂತರ ಆರೋಪ ಮಾಡುತ್ತಿತ್ತ ಹಿನ್ನೆಲೆ ಕಿರುಕುಳ ಉಂಟಾಗಿದೆ ಎಂದು ಆರೋಪಿಸಿ, ವಾಂಖೆಡೆ ಆಯೋಗಕ್ಕೆ ಪತ್ರ ಬರೆದಿದ್ದರು. ವಾಂಖೆಡೆ ಮುಸ್ಲಿಂ ಮತ್ತು ಪರಿಶಿಷ್ಟ ಜಾತಿ ಎಂದು ಹೇಳಿಕೊಂಡು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂದು ಸಚಿವರು ಗಂಭಿರ ಆರೋಪ ಮಾಡಿದ್ದರು.

ಇದನ್ನೂ ಓದಿ: ನರ್ಸ್‌ ಸೋಗಿನಲ್ಲಿ ಬಂದು ನವಜಾತ ಶಿಶು ಕಳ್ಳತನ: ಒಂದೇ ಗಂಟೆಯಲ್ಲಿ ಪ್ರಕರಣ ಬೇಧಿಸಿದ ಪೊಲೀಸರು

ವಾಂಖೆಡೆ ತಂದೆಯ ಹೆಸರು ದಾವೂದ್, ದ್ಯಾನದೇವ್ ಅಲ್ಲ ಎಂದು ಮಲಿಕ್ ಆರೋಪಿಸಿದ್ದರು. ಎಲ್ಲಾ ಆರೋಪಗಳನ್ನು ವಾಂಖೆಡೆ ನಿರಾಕರಿಸಿದ್ದು, ನ್ಯಾಯಕ್ಕಾಗಿ ಎನ್‌ಸಿಎಸ್‌ಸಿ ಆಯೋಗದ ಮೆಟ್ಟಿಲೇರಿದ್ದಾರೆ.

ನಮ್ಮಲ್ಲಿ ತನಿಖೆ ಬಾಕಿ ಇರುವವರೆಗೆ ಈ ವಿಷಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳದಂತೆ ರಾಜ್ಯ ಸರ್ಕಾರಕ್ಕೆ ಎನ್‌ಸಿಎಸ್‌ಸಿ ಆಯೋಗ ಶಿಫಾರಸು ಮಾಡಿದೆ. ಕಳೆದ ವರ್ಷ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಿದ್ದ ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಉನ್ನತ ಮಟ್ಟದ ತನಿಖೆಯ ನೇತೃತ್ವ ವಹಿಸಿದ್ದರು. ಇದಾದ ನಂತರ ಇವರ ಮೇಲೆ ನಿರಂತರ ಆರೋಪಗಳ ಸುರಿಮಳೆಯೇ ಬಂದಿತ್ತು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.