ETV Bharat / bharat

ಕಷ್ಟಗಳನ್ನೇ ಚಿತ್ರವಾಗಿಸಿದ ಗಟ್ಟಿಗಿತ್ತಿ: ಗೋಡೆಗಳಿಗೂ ಜೀವಕೊಟ್ಟ ಪದ್ಮಶ್ರೀ ಪುರಸ್ಕೃತೆ ಭೂರಿಬಾಯಿ - ಭಾರತ್ ಭವನ

ಭೂರಿಬಾಯಿಗೆ ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯಿತ್ತು. ತಮ್ಮ ಮನೆಯ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಮೂಲಕ ಭೂರಿಬಾಯಿ ಎಲ್ಲರ ಗಮನ ಸೆಳೆಯುತ್ತಿದ್ದರು. ಭೂರಿಬಾಯಿ ತಮ್ಮ 17 ನೇ ವಯಸ್ಸಿನಲ್ಲಿ ವಿವಾಹವಾದರು. ಮದುವೆಯ ನಂತರ ಪತಿ ಜತೆ ಭೋಪಾಲ್‌ಗೆ ಬಂದರು. ಆ ಸಮಯದಲ್ಲಿ, ಭಾರತ್ ಭವನದ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದವು. ಆದ್ದರಿಂದ ಅವರಿಗೆ ಅಲ್ಲಿ ಕೆಲಸ ಸಿಕ್ಕಿತು.

padmashree-awardee-boori-bai
ಪದ್ಮಶ್ರೀ ಪುರಸ್ಕೃತೆ ಭೂರಿ ಬಾಯಿ
author img

By

Published : Mar 7, 2021, 6:04 AM IST

ಭೋಪಾಲ್​ (ಮಧ್ಯ ಪ್ರದೇಶ): ಭೋಪಾಲ್​ನ ಈ ಗೋಡೆಗಳು ಕೇವಲ ಗೋಡೆಗಳಲ್ಲ, ಓರ್ವ ಮಹಿಳೆಯ ಕಣ್ಣೀರ ಕತೆ ಇದರಲ್ಲಡಗಿದೆ. ಪ್ರತಿಯೊಂದು ಚಿತ್ರದಲ್ಲೂ ಈ ಮಹಿಳಾ ಕಲಾವಿದೆಯ ಹಸಿವು, ಬಾಯಾರಿಕೆ ಮತ್ತು ಹಳ್ಳಿಯಿಂದ ನಗರಕ್ಕೆ ಬಂದ ಅವರ ಹೋರಾಟದ ಪಯಣ ಅಡಗಿದೆ. ಇಂದು, ಈ ಹೋರಾಟದ ಫಲವಾಗಿ ಅವರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿದೆ.

ಮಧ್ಯಪ್ರದೇಶದ ಜಾಬುವಾ ಜಿಲ್ಲೆಯ ಪಿಟೋಲ್ ಗ್ರಾಮದಲ್ಲಿ ಜನಿಸಿದ ಭೂರಿಬಾಯಿ, 17ನೇ ವಯಸ್ಸಿನಲ್ಲಿಯೇ ಮದುವೆ ಎಂಬ ಬಂಧನಕ್ಕೆ ಕಟ್ಟು ಬಿದ್ದು ಭೋಪಾಲ್‌ಗೆ ಬಂದರು. ಭಾರತ್ ಭವನದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುವುದರಿಂದ ಆರಂಭವಾದ ಅವರ ಚಿತ್ರಕಲೆ, ಇಂದು ದೇಶ ಮಾತ್ರವಲ್ಲದೇ ಇತರ ದೇಶಗಳಲ್ಲೂ ಹೆಸರುವಾಸಿಯಾಗಿದೆ. ಇತ್ತೀಚೆಗೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ಲಭಿಸಿದೆ.

ಕಷ್ಟದ ದಿನದಲ್ಲಿ ಕೈಹಿಡಿದಿದ್ದು ಚಿತ್ರಕಲೆ: ಗೋಡೆಗಳಿಗೂ ಜೀವಕೊಟ್ಟ ಪದ್ಮಶ್ರೀ ಪುರಸ್ಕೃತೆ ಭೂರಿ ಬಾಯಿ

ಭೂರಿ ಬಾಯಿಗೆ ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯಿತ್ತು. ತಮ್ಮ ಮನೆಯ ಗೋಡೆಗಳ ಮೇಲೆ ಚಿತ್ರ ಬಿಡಿಸುವ ಮೂಲಕ ಭೂರಿಬಾಯಿ ಎಲ್ಲರ ಗಮನ ಸೆಳೆಯುತ್ತಿದ್ದರು. ಆದರೆ, ಯಾವುದೇ ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ. ಬಾಲ್ಯದಿಂದಲೇ ಭೂರಿಬಾಯಿ ಕಷ್ಟದ ಸರಮಾಲೆಯಲ್ಲಿ ಸಾಗಿ ಬಂದವರು. ಹತ್ತು ವರ್ಷದವರಿದ್ದಾಗ, ತನ್ನ ಕುಟುಂಬದೊಂದಿಗೆ ಕೆಲಸ ಮಾಡಲು ಹಳ್ಳಿಯಿಂದ ಹೊರಗೆ ಹೋಗುತ್ತಿದ್ದರು. ಒಂದು ದಿನ, ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ಅಗ್ನಿ ಅವಘಡದಲ್ಲಿ ಎಲ್ಲ ವಸ್ತುಗಳು ಸುಟ್ಟು ಹೋದವು. ಇದರಿಂದ ಪಡಬಾರದ ಕಷ್ಟ ಪಡಬೇಕಾಯಿತು.

ಭೂರಿಬಾಯಿ ತಮ್ಮ 17 ನೇ ವಯಸ್ಸಿನಲ್ಲಿ ವಿವಾಹವಾದರು. ಮದುವೆಯ ನಂತರ ಪತಿ ಜತೆ ಭೋಪಾಲ್‌ಗೆ ಬಂದರು. ಆ ಸಮಯದಲ್ಲಿ, ಭಾರತ್ ಭವನದ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದವು. ಆದ್ದರಿಂದ ಅವರಿಗೆ ಅಲ್ಲಿ ಕೆಲಸ ಸಿಕ್ಕಿತು. ಭಾರತ್ ಭವನದಲ್ಲಿ ಕೆಲಸ ಮಾಡುವಾಗ ಅವರು ಗುರು ಜೈ ಸ್ವಾಮಿನಾಥನ್ ಅವರನ್ನು ಭೇಟಿಯಾದರು. ಅವರು ಭೂರಿ ಬಾಯಿಗೆ ಚಿತ್ರವನ್ನು ಬಿಡಿಸಲು ತಿಳಿಸಿದರು. ಆಗ ಭೂರಿ ಬಾಯಿ ಹಳ್ಳಿಯಲ್ಲಿ ಕಂಡ ಹೋರಾಟವನ್ನು ಚಿತ್ರಿಸಿದರು. ಸ್ವಾಮಿನಾಥನ್ ಇದನ್ನು ತುಂಬಾ ಇಷ್ಟಪಟ್ಟರಂತೆ. ಅಂದಿನಿಂದ, ಭೂರಿ ಬಾಯಿ ಕಲೆ ಜನಮಾನಸವನ್ನು ಆವರಿಸಲು ಆರಂಭಿಸಿತು.

1982ರ ಫೆಬ್ರವರಿ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಭಾರತ್ ಭವನವನ್ನು ಉದ್ಘಾಟಿಸಿದರು. ಆಗ ಜೆ.ಸ್ವಾಮಿನಾಥನ್ ಮತ್ತು ಭೂರಿ ಬಾಯಿ ಇಂದಿರಾಗಾಂಧಿ ಅವರೊಂದಿಗೆ ಫೋಟೋ ತೆಗೆಸಿಕೊಂಡಿದ್ದಾರೆ. ಪದ್ಮಶ್ರೀ ಪುರಸ್ಕೃತ ಭೂರಿಬಾಯಿ ಕಾಗದ ಮತ್ತು ಕ್ಯಾನ್ವಾಸ್ ಬಳಸಿ ಚಿತ್ರ ಬಿಡಿಸಿದ ಮೊದಲ ಮಹಿಳಾ ಭೀಲ್ ಕಲಾವಿದೆ. ಭೂರಿಬಾಯಿಯ ವರ್ಣಚಿತ್ರಗಳು ಕಾಡುಗಳು, ಪ್ರಾಣಿಗಳು ಮತ್ತು ಮರಗಳು, ಭಿಲ್ ದೇವಿ, ದೇವರು ಮತ್ತು ದೇವತೆಗಳ ವೇಷಭೂಷಣ, ಆಭರಣ ಮತ್ತು ಗುಡಿಸಲುಗಳು ಭೂರಿ ಬಾಯಿಯ ಕುಂಚದಲ್ಲಿ ಮೂಡಿ ಬಂದಿವೆ.

ಅವರ ವರ್ಣಚಿತ್ರಗಳನ್ನು ಮಧ್ಯಪ್ರದೇಶ ಮ್ಯೂಸಿಯಂ ಮತ್ತು ಇತರ ರಾಜ್ಯಗಳಲ್ಲಿ ಇರಿಸಲಾಗಿದೆ. ಅವರ ಕಲಾಕೃತಿಗಳು ಅಮೆರಿಕದಲ್ಲೂ ಸಹ ಛಾಪು ಮೂಡಿಸಿವೆ. ಕಲಾ ಕ್ಷೇತ್ರದಲ್ಲಿ ಮಧ್ಯಪ್ರದೇಶದ ಅತ್ಯುನ್ನತ ಗೌರವವನ್ನು ಭೂರಿಬಾಯಿ ಪಡೆದಿದ್ದಾರೆ. ಭೂರಿಬಾಯಿ ಇತರ ವರ್ಣಚಿತ್ರಕಾರರ ಸಹಯೋಗದೊಂದಿಗೆ ಭಾರತದ ಈ ಪ್ರಾಚೀನ ಜಾನಪದ ಕಲೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.