ETV Bharat / bharat

2017 ರಿಂದ ಅತಿ ವೇಗವಾಗಿ ಕರಗುತ್ತಿರುವ ಹಿಮ, ಅಪಾಯದ ಆತಂಕ: ಸಂಶೋಧನಾ ವರದಿ

author img

By ETV Bharat Karnataka Team

Published : Sep 7, 2023, 6:01 PM IST

ಉತ್ತರಾಖಂಡದಲ್ಲಿ ಹಿಮ ಕರಗುವಿಕೆ ದಾಖಲೆ ಪ್ರಮಾಣ ಮುಟ್ಟಿದೆ. ಕಳೆದ 5 ವರ್ಷಗಳಲ್ಲಿ ಹೆಚ್ಚಿನ ಹಾನಿ ಉಂಟಾಗಿದೆ. ಹಿಮ ಕರಗುತ್ತಿರುವುದು ಆತಂಕದ ಛಾಯೆ ಮೂಡಿಸಿದೆ.

ವೇಗವಾಗಿ ಕರಗುತ್ತಿರುವ ಹಿಮ
ವೇಗವಾಗಿ ಕರಗುತ್ತಿರುವ ಹಿಮ

ಡೆಹ್ರಾಡೂನ್: ಕೈಗಾರಿಕೆಗಳ ಅತಿಯಾದ ಹೊಗೆ ಸೇರಿದಂತೆ ನಾನಾ ಕಾರಣಗಳಿಗೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದಾಗಿ ಹಿಮರಾಶಿ ಅಪಾಯಕ್ಕೆ ಸಿಲುಕಿವೆ. ಹಿಮ ವೇಗವಾಗಿ ಕರಗುತ್ತಿದ್ದು, ಭವಿಷ್ಯದಲ್ಲಿ ಭಾರಿ ಕಂಟಕ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹಿಮನದಿಗಳು ಕರಗಲು ಕಾರಣಗಳ ಬಗ್ಗೆ ವಿಜ್ಞಾನಿಗಳು ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ.

ಉತ್ತರಾಖಂಡದ ಹಿಮಾಲಯ ಪ್ರದೇಶಗಳಲ್ಲಿ ಸುಮಾರು ಒಂದು ಸಾವಿರ ಹಿಮನದಿಗಳಿವೆ. ಇವುಗಳಲ್ಲಿ ಗಂಗೋತ್ರಿ ಜಲಾನಯನ ಪ್ರದೇಶದಲ್ಲಿ ಇರುವ ಹಿಮನದಿಗಳು ವೇಗವಾಗಿ ಕರಗುತ್ತಿದೆ. ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ವಿಜ್ಞಾನಿಗಳ ಮಾಹಿತಿಯ ಪ್ರಕಾರ, ಗಂಗೋತ್ರಿ ಗ್ಲೇಸಿಯರ್ 1935 ರಿಂದ 2022 ರ ವರೆಗೆ ಅಂದರೆ 87 ವರ್ಷಗಳಲ್ಲಿ ಸುಮಾರು 1726.9 ಮೀಟರ್‌ಗಳಷ್ಟು ಹಿಂದಕ್ಕೆ ಸಾಗಿದೆ. ಇದು ಸುಮಾರು ಒಂದೂವರೆ ಕಿಲೋಮೀಟರ್‌ಗಿಂತ ಹೆಚ್ಚಾಗಿದೆ.

17 ವರ್ಷದಿಂದ ಅತ್ಯಧಿಕ ಹಾನಿ: ಗಂಗೋತ್ರಿ ಗ್ಲೇಸಿಯರ್ ವೇಗವಾಗಿ ಕರಗಲು ಶುರು ಮಾಡಿದ್ದು, ಸುಮಾರು 17 ವರ್ಷಗಳಿಂದೀಚೆಗೆ. ಈ ಹಿಂದೆಯೂ ಹಿಮನದಿಗಳು ಕರುಗುತ್ತಿದ್ದವು. ಆದರೆ, ದಾಖಲೆಯ ಪ್ರಮಾಣದಲ್ಲಿ ಕರಗಲು ಶುರು ಮಾಡಿದ್ದು, ಈ ವರ್ಷಗಳಲ್ಲಿ. ಈ ಅವಧಿಯಲ್ಲಿ ಹಿಮನದಿ ಬಹಳ ವೇಗವಾಗಿ ಹಿಂದೆ ಸರಿದಿದ್ದು, ಕಂಡು ಬಂದಿವೆ ಎಂಬುದು ದಾಖಲೆಗಳು ಹೇಳುತ್ತವೆ.

ಹಿಮಾಲಯನ್ ಜಿಯಾಲಜಿಯ ವಿಜ್ಞಾನಿಗಳ ಪ್ರಕಾರ, 2017 ಮತ್ತು 2022 ರ ನಡುವೆ ಗಂಗೋತ್ರಿ ಹಿಮನದಿಯ ಕರಗುವಿಕೆಯ ಪ್ರಮಾಣವು ತುಂಬಾ ವೇಗವಾಗಿದೆ. ಈ ಐದು ವರ್ಷಗಳಲ್ಲಿ ಗಂಗೋತ್ರಿ ಹಿಮನದಿ ಸುಮಾರು 169 ಮೀಟರ್‌ಗಳಷ್ಟು ಹಿಂದಕ್ಕೆ ಜಾರಿದೆ. ಅಂದರೆ, ಹಿಮನದಿಯ ಕರಗುವಿಕೆಯ ಪ್ರಮಾಣವು ವಾರ್ಷಿಕವಾಗಿ 33.8 ಮೀಟರ್ ಆಗಿದೆ. ಕಳೆದ 87 ವರ್ಷಗಳಲ್ಲಿ ಈ ಐದು ವರ್ಷಗಳು (2017 ರಿಂದ 2022) ಗಂಗೋತ್ರಿ ಹಿಮನದಿಯ ಕರಗುವಿಕೆಯ ಪ್ರಮಾಣವು ಅತ್ಯಂತ ವೇಗದ್ದಾಗಿದೆ.

ಪ್ರತಿ ವರ್ಷವೂ ಹೆಚ್ಚಳ: ಅಧ್ಯಯನ ವರದಿಯ ಪ್ರಕಾರ, 1968 ರಿಂದ 1980 ರ ನಡುವೆ ಸುಮಾರು 323.2 ಮೀಟರ್ ಹಿಮನದಿ ಕರಗಿದೆ. ಅಂದರೆ 26.93 ಮೀಟರ್ ಹಿಮನದಿ ವಾರ್ಷಿಕವಾಗಿ ಕರಗಿದಂತಾಗಿದೆ. 1968 ರಿಂದ 1980 ಮತ್ತು 2017 ರಿಂದ 2022 ರ ನಡುವಿನ ಸಮಯವು ಹಿಮನದಿಗೆ ತುಂಬಾ ಹಾನಿಯುಂಟು ಮಾಡಿದ ಅವಧಿಯಾಗಿದೆ. ಹಿಮನದಿಗಳು ಕರಗುತ್ತಿರುವ ವಾರ್ಷಿಕ ವೇಗ 15ರಿಂದ 20 ಮೀಟರ್ ಆಗಿದೆ ಎಂದು ವಾಡಿಯಾ ನಿರ್ದೇಶಕ ಡಾ.ಕಲಚಂದ್ ಸಾಯಿ ತಿಳಿಸುತ್ತಾರೆ.

ಇದನ್ನೂ ಓದಿ: ಅಂಟಾರ್ಟಿಕಾದಲ್ಲಿ ವೇಗವಾಗಿ ಕರಗುತ್ತಿದೆ ಹಿಮರಾಶಿ! ಸಮುದ್ರ ಮಟ್ಟ ಹೆಚ್ಚಳದ ಅಪಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.