ನವದೆಹಲಿ: ಮತದಾರರ ಗುರುತಿನ ಚೀಟಿಗಳೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಕೇಂದ್ರ ಸರ್ಕಾರವು 2024ರ ಮಾರ್ಚ್ 31 ರವರೆಗೆ ಗಡುವನ್ನು ವಿಸ್ತರಣೆ ಮಾಡಿದೆ. ಕಳೆದ ಜೂನ್‌ನಲ್ಲಿ ತನ್ನ ಅಧಿಸೂಚನೆಯಲ್ಲಿ, ಕೇಂದ್ರ ಸರ್ಕಾರವು 2023ರ ಏಪ್ರಿಲ್ 1ರಂದು ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕವೆಂದು ಸೂಚಿಸಿತ್ತು.
ಸಚಿವಾಲಯದ ಆದೇಶದಲ್ಲಿ ಏನಿದೆ?: ವೋಟರ್ ಐಡಿಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಕೇಂದ್ರವು 2024ರ ಮಾರ್ಚ್ 31ರವರೆಗೆ ಅವಧಿಯನ್ನು ವಿಸ್ತರಿಸಿದೆ. ಈ ಹಿಂದೆ, ಮತದಾರರ ಐಡಿಯನ್ನು ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡಲು 2023ರ ಏಪ್ರಿಲ್ 1ರಂದು ಕೊನೆಯ ದಿನ ಆಗಿತ್ತು. ಸದ್ಯ ಈ ಗಡುವನ್ನು ವಿಸ್ತರಿಸಿ ಕಾನೂನೂ ಮತ್ತು ನ್ಯಾಯ ಸಚಿವಾಲಯವು ಆದೇಶ ಹೊರಡಿಸಿದೆ. ನೋಂದಾಯಿತ ಮತದಾರರು ತಮ್ಮ ವೋಟರ್ ಐಡಿಯನ್ನು ಆಧಾರ್ನೊಂದಿಗೆ ಲಿಂಕ್ ಮಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಅಭಿಯಾನವನ್ನು ಆರಂಭಿಸಿದೆ.
ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್: ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಮಾಡುವ ಅವಧಿಯನ್ನು ಕೇಂದ್ರ ಸರ್ಕಾರವು ವಿಸ್ತರಿಸಿದೆ. 2024ರ ಮಾ. 31ರ ಒಳಗೆ ಜೋಡಣೆ ಮಾಡಲು ಸೂಚಿಸಿದೆ. ಈ ಮೊದಲು 2023ರ ಮಾ.31ರ ಗಡುವು ನೀಡಲಾಗಿತ್ತು. ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆ ಅಡಿಯಲ್ಲಿ ಹೊರಡಿಸಿರುವ ಪ್ರಕಟಣೆಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.
1950ರ ಜನಪ್ರತಿನಿಧಿ ಕಾಯ್ದೆ: ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆಯು ಪ್ರಕಟಣೆ ಹೊರಡಿಸಿದೆ. 1950ರ ಜನಪ್ರತಿನಿಧಿ ಕಾಯ್ದೆಯ ಅನ್ವಯ 2022ರ ಜೂನ್ 17ರಂದು ಆದೇಶ ಹೊರಡಿಸಿದ್ದ ಕೇಂದ್ರ ಕಾನೂನು ಮತ್ತು ನ್ಯಾಯ ಇಲಾಖೆಯ ಸೂಚನೆಯಲ್ಲಿ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಯನ್ನು ಜೋಡಿಸಲು 2023ರ ಮಾ. 31ರಂದು ಕಡೆಯ ದಿನ ಎಂದು ತಿಳಿಸಲಾಗಿತ್ತು. ಪ್ರಸ್ತುತ ಈ ಗಡುವನ್ನು ವಿಸ್ತರಣೆ ಮಾಡಲಾಗಿದ್ದು, ಮತದಾರರು ತಮ್ಮ ವೋಟರ್ ಐಡಿಯನ್ನು ಆಧಾರ್ ಕಾರ್ಡ್ನೊಂದಿಗೆ ಜೋಡಿಸಲು 2024ರ ಮಾ. 31ರವರೆಗೆ ಅವಕಾಶ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಧಾರ್ನೊಂದಿಗೆ ವೋಟರ್ ಐಡಿ ಯಾಕೆ ಲಿಂಕ್ ಮಾಡಬೇಕು?: ಆಧಾರ್ನೊಂದಿಗೆ ವೋಟರ್ ಐಡಿಯನ್ನು ಲಿಂಕ್ ಮಾಡಿದರೆ, ಅನೇಕ ಉಪಯೋಗಗಳು ಆಗುತ್ತವೆ. ಪ್ರಮುಖವಾಗಿ ನಕಲಿ ಮತದಾನವನ್ನು ತಡೆಯಲು ಸಾಧ್ಯವಾಗುತ್ತದೆ. ಮತಗಟ್ಟೆ ಅಧಿಕಾರಿಗಳು ಮತದಾರರ ಚೀಟಿ- ಆಧಾರ್ ಕಾರ್ಡ್ನ್ನು ಪಡೆದು ದಾಖಲಿಸಿಕೊಳ್ಳುತ್ತಾರೆ. ಒಂದು ಸಲ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಸಂಖ್ಯೆ ದಾಖಲಿಸಿದರೆ ಸಾಕು, ನಕಲಿ ಮತದಾನ ತಡೆಯಲು ಅತ್ಯಂತ ಪರಿಣಾಮಕಾರಿಯಾಗಲಿದೆ ಎಂದು ಹೇಳುತ್ತದೆ ಸಚಿವಾಲಯ.
ಲಿಂಕ್ ಮಾಡೋದು ಹೇಗೆ ಗೊತ್ತಾ?: ಸರ್ಕಾರದ ಅಧಿಕೃತ ಪೋರ್ಟಲ್ ಆಗಿರುವ voterportal.eci.gov.in ಗೆ ಭೇಟಿ ನೀಡಬೇಕು. ನಿಮ್ಮ ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಮತ್ತು ಮತದಾರರ ಗುರುತಿನ ವೋಟರ್ ಚೀಟಿಯ ಸಂಖ್ಯೆಯನ್ನು ಬಳಸಿಕೊಂಡು ಪೋರ್ಟಲ್‌ಗೆ ಲಾಗ್ ಇನ್ ಮಾಡಬೇಕು. ನಂತರ ನಿಮ್ಮ ರಾಜ್ಯ, ಜಿಲ್ಲೆ ಮತ್ತು ಹೆಸರು, ಹುಟ್ಟಿದ ದಿನಾಂಕ ಹಾಗೂ ತಂದೆ ಹೆಸರು ಸೇರಿದಂತೆ ನಿಮ್ಮ ವೈಯಕ್ತಿಕ ಮಾಹಿತಿ ನಮೂದಿಸಬೇಕಾಗುತ್ತದೆ.
ಬಳಿಕ ಸರ್ಚ್ ಕ್ಲಿಕ್ ಮಾಡಿದ ನಂತರ, ಸ್ಕ್ರೀನ್ ಮೇಲೆ ಕಾಣಿಸುತ್ತೆ. ಇದಾದ ಬಳಿಕ ಫೀಡ್ ಆಧಾರ್ ನಂಬರ್ ಆಫಷನ್ ಮೇಲೆ ಕ್ಲಿಕ್ ಮಾಡಬೇಕು. ಆಧಾರ್ ಸಂಖ್ಯೆಯೊಂದಿಗೆ ವೋಟರ್ ಐಡಿ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ನೋಂದಾಯಿತ ಇಮೇಲ್ ಅನ್ನು ವೆಬ್ಪುಟದಲ್ಲಿನ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ ಸಬ್ಮಿಟ್ ಕ್ಲಿಕ್ ಮಾಡಬೇಕು. ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ನ್ನು ಲಿಂಕ್ ಮಾಡುವ ಪ್ರಕ್ರಿಯೆ ಆರಂಭವಾಗುತ್ತದೆ.
ಇದನ್ನೂ ಓದಿ: 90 ಸಾವಿರ ನಾಣ್ಯಗಳನ್ನೇ ನೀಡಿ ಕನಸಿನ ಸ್ಕೂಟರ್ ಖರೀದಿಸಿದ ವ್ಯಕ್ತಿ: ವಿಡಿಯೋ