ETV Bharat / bharat

ಒಂದೇ ದಿನ ಕುಲ್ಗಾಂನಲ್ಲಿ ಎರಡು ಕಡೆ ಉಗ್ರರ ಅಟ್ಟಹಾಸ: ಕಾನ್ಸ್​​ಟೇಬಲ್, ಕಾರ್ಮಿಕ ಸಾವು - ಜಮ್ಮು ಕಾಶ್ಮೀರದಲ್ಲಿ ಕಾನ್ಸ್​ಟೇಬಲ್ ಹತ್ಯೆ

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚಾಗಿದ್ದು, ಪೊಲೀಸ್ ಕಾನ್ಸ್​ಟೇಬಲ್ ಮೇಲೆ ದಾಳಿ ನಡೆಸಿದ್ದ ಉಗ್ರರು, ಈಗ ಓರ್ವ ಕಾರ್ಮಿಕನ ಸಾವಿಗೂ ಕಾರಣರಾಗಿದ್ದಾರೆ.

Visuals of militant attack in Kulgam; Non-Local labourer shot dead
ಒಂದೇ ದಿನ ಕುಲ್ಗಾಂನಲ್ಲಿ ಎರಡು ಉಗ್ರ ದಾಳಿ: ಕಾನ್ಸ್​​ಟೇಬಲ್, ಕಾರ್ಮಿಕ ಸಾವು
author img

By

Published : Sep 18, 2021, 6:44 AM IST

ಶ್ರೀನಗರ(ಜಮ್ಮು ಕಾಶ್ಮೀರ): ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಉಗ್ರರು ದಾಳಿ ನಡೆಸಿದ್ದು, ಓರ್ವ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ಶುಕ್ರವಾರ ಒಂದೇ ದಿನದಲ್ಲಿ ಜಿಲ್ಲೆಯಲ್ಲಿ ನಡೆದ ಎರಡನೇ ದಾಳಿಯಾಗಿದೆ.

ಬಿಹಾರ ರಾಜ್ಯದಿಂದ ಬಂದು ಕೆಲಸ ಮಾಡುತ್ತಿದ್ದ ಶಂಕರ್ ಚೌಧರಿ ಭಯೋತ್ಪಾದಕರ ದಾಳಿಯಲ್ಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯೇ ಶಂಕರ್​ ಪ್ರಾಣ ಹೋಗಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಒಂದೇ ದಿನದಲ್ಲಿ ಇದು ಎರಡನೇ ಬಾರಿ ನಡೆದ ಉಗ್ರರ ದಾಳಿಯಾಗಿದೆ. ದಾಳಿಕೋರರನ್ನು ಹಿಡಿಯಲು ಸ್ಥಳದಲ್ಲಿ ಸೇನೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಕಾನ್ಸ್​​​ಟೇಬಲ್ ಹತ್ಯೆ

ಕಾರ್ಮಿಕನ ಹತ್ಯೆಗೂ ಮುನ್ನ ವ್ಯಾನ್ಪೋ ಪ್ರದೇಶದ ಶಾಮ್ಫೋರ್ಡ್​ ಶಾಲೆಯ ಬಳಿ ಉಗ್ರರ ದಾಳಿಗೆ ಪೊಲೀಸ್ ಕಾನ್ಸ್​​ಟೇಬಲ್ ಬಂಟು ಶರ್ಮಾ ಮೃತಪಟ್ಟಿದ್ದಾರೆ. ಇತ್ತೀಚಿನ ಮೂರು ದಿನಗಳಿಂದ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚಾಗುತ್ತಿದ್ದು, ಮೂವರು ನಾಗರಿಕರು ಗಾಯಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.