ನವದೆಹಲಿ : ವಿಮಾನ ಪ್ರಯಾಣದ ಬೇಡಿಕೆಯಲ್ಲಿ ತೀವ್ರ ಕುಸಿತವಾದ ಕಾರಣ ವಿಸ್ತಾರಾ ಏರ್‌ಲೈನ್ಸ್ ಫೆಬ್ರವರಿ ತಿಂಗಳಿಗೆ ಬುಕ್ ಆಗಿದ್ದ ಹಲವಾರು ವಿಮಾನಗಳನ್ನು ರದ್ದುಗೊಳಿಸಿದ್ದು, ಅನೇಕ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಆದರೆ, ರದ್ದತಿ ಹಾಗೂ ವೇಳಾಪಟ್ಟಿ ಬದಲಾವಣೆಯಿಂದ ಪ್ರಯಾಣಿಕರು ಕಂಗಾಲಾಗಿದ್ದು, ದೂರಿನ ಸುರಿಮಳೆಗೈಯ್ಯುತ್ತಿದ್ದಾರೆ. ಏಕೆಂದರೆ, ವೇಳಾಪಟ್ಟಿ ಬದಲಾವಣೆಯಲ್ಲಿ ಅನೇಕ ಗೊಂದಲಗಳಿವೆ. ಉದಾಹರಣೆಗೆ, ಹೈದರಾಬಾದ್ನಿಂದ ಬೆಂಗಳೂರಿಗೆ ತೆರಳಬೇಕಾದ ವಿಮಾನವು, ಹೈದರಾಬಾದ್ನಿಂದ ದೆಹಲಿಗೆ ಹೋಗಿ, ದೆಹಲಿಯಿಂದ ಬೆಂಗಳೂರಿಗೆ ಬರಲಿದೆ.
ಇದು ಪ್ರಯಾಣಿಕರ ಸಮಯ-ತಾಳ್ಮೆ ಎರಡನ್ನೂ ಹಾಳು ಮಾಡಿದಂತೆ ಎಂದು ಪ್ರಯಾಣಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿಸ್ತಾರಾ ಕಸ್ಟಮರ್ ಸರ್ವೀಸ್ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.
"ಡಿಯರ್ ವಿಸ್ತಾರಾ ಏರ್‌ಲೈನ್ಸ್, ನೀವು ಫೆಬ್ರವರಿ 5ರಂದು ನವದೆಹಲಿಯಿಂದ ಭುವನೇಶ್ವರಕ್ಕೆ ಟಿಕೆಟ್ ಅನ್ನು ರದ್ದುಗೊಳಿಸಿದ್ದೀರಿ. ನಿಮ್ಮ ಗ್ರಾಹಕ ಸೇವೆ ಸಂಖ್ಯೆಯು ಅಗ್ಗದ ಗಿಮಿಕ್ ಎಂದು ನಾನು ಭಾವಿಸುತ್ತೇನೆ. ಕರೆ ಮಾಡಿದರೆ ಯಾರೂ ಪ್ರತಿಕ್ರಿಯಿಸುವುದಿಲ್ಲ ಮತ್ತು ಇದು 48 ಗಂಟೆಗಳಿಂದ ಕಾರ್ಯನಿರತವಾಗಿದೆ ಎಂದೇ ಬರುತ್ತಿದೆ. ದಯವಿಟ್ಟು ಆದಷ್ಟು ಬೇಗ ಟಿಕೆಟ್ನ ಪೂರ್ಣ ಮೊತ್ತವನ್ನು ಮರುಪಾವತಿಸಿ" ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಯೂ ಆಗಿರುವ ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹಣಕಾಸು ಮಸೂದೆ ಎಂದರೇನು?.. ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ!
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಸ್ತಾರಾ ವಕ್ತಾರರು, ಮಾರ್ಚ್ 31ರೊಳಗೆ ಅದೇ ಟಿಕೆಟ್ ದರದಲ್ಲಿ ಬೇರೆ ದಿನ ಪ್ರಯಾಣಿಸಲು ಅಥವಾ ಇದರ ಅಗತ್ಯವಿಲ್ಲವಾದಲ್ಲಿ ಹಣ ಮರುಪಾವತಿ ಮಾಡುವುದಾಗಿ, ಗ್ರಾಹಕರಿಗೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ತಿಳಿಸಿದ್ದಾರೆ.
ಇಲ್ಲೊಮ್ಮೆ ನೋಡಿ - ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ