ವಲ್ಸಾದ್ (ಗುಜರಾತ್): ಬೆಂಕಿಯ ಜೊತೆ ಸರಸ ಸರಿಯಲ್ಲ ಎಂದು ಹಿರಿಯರು ಹೇಳಿದ್ದಾರೆ. ಆದರೆ, ಯುವಕರು ಬೆಂಕಿಯೊಂದಿಗೆ ಹುಚ್ಚಾಟ ಆಡುವುದು ಮಾತ್ರ ಕಡಿಮೆಯಾಗಿಲ್ಲ. ಗುಜರಾತ್ನಲ್ಲಿ ಫೈರ್ ಹೇರ್ ಕಟ್ ಮಾಡಿಸುವಾಗ ದೇಹಕ್ಕೆ ಬೆಂಕಿ ತಾಗಿ ಯುವಕನೋರ್ವ ಆಸ್ಪತ್ರೆ ಸೇರಿರುವ ಬೆನ್ನಲ್ಲೇ ಮತ್ತೊಂದು ವಿಡಿಯೋ ಹೊರಬಿದ್ದಿದೆ.
ವಲ್ಸಾದ್ ಪಟ್ಟಣದ ಸಿಟಿ ಪ್ಯಾಲೇಸ್ ಪ್ರದೇಶದಲ್ಲಿ ವಾಸಿಸುವ ಯುವಕನೊಬ್ಬ ರೀಲ್ಸ್ಗಾಗಿ ಬಾಯಲ್ಲಿ ಪಟಾಕಿ ಇಟ್ಟುಕೊಂಡು ಓಡುವ ಅಪಾಯಕಾರಿ ಸಾಹಸ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲೇನಿದೆ? ಯುವಕ ತನ್ನ ಬಾಯಲ್ಲಿ ರಾಕೆಟ್ ಪಟಾಕಿ ಇಟ್ಟುಕೊಂಡಿದ್ದು, ಮತ್ತೊಬ್ಬ ಯುವಕ ಆ ಪಟಾಕಿಗೆ ಬೆಂಕಿ ಹಚ್ಚುವುದು ಮತ್ತು ಬೆಂಕಿ ಹಚ್ಚಿದ ರಾಕೆಟ್ ಅನ್ನು ಬಾಯಲ್ಲಿ ಹಾಗೇ ಇಟ್ಟುಕೊಂಡೇ ಯುವಕ ಓಡುತ್ತಿದ್ದಾನೆ. ಪೊಲೀಸರು ಯುವಕನ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಏನಿದು ಫೈರ್ ಹೇರ್ ಕಟ್? ಇದನ್ನು ಮಾಡಿಸಲು ಹೋಗಿ ಆಸ್ಪತ್ರೆ ಸೇರಿದ ಯುವಕ