ETV Bharat / bharat

ವೈರಲ್​ ವಿಡಿಯೋ: ಶಾಲಾ ಶಿಕ್ಷಕನ ರಾಕ್ಷಸಿ ವರ್ತನೆ.. ವಿದ್ಯಾರ್ಥಿಗಳ ಮೇಲೆ ಅಮಾನವೀಯ ಹಲ್ಲೆ

ಶಾಲಾ ವಿದ್ಯಾರ್ಥಿಗಳ ಮೇಲೆ ಶಿಕ್ಷಕನೊಬ್ಬ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ಅದರ ವಿಡಿಯೋ ವೈರಲ್​ ಆಗಿದೆ.

Teacher beats students
Teacher beats students
author img

By

Published : Oct 14, 2021, 6:22 PM IST

ಕಡಲೂರು(ತಮಿಳುನಾಡು): ಸರ್ಕಾರಿ ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿಗಳ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದು, ಶಾಲಾ ಕೊಠಡಿಯಲ್ಲೇ ಬಾಸುಂಡೆ ಬರುವಂತೆ ಹೊಡೆದಿರುವ ಘಟನೆ ನಡೆದಿದೆ. ಇದರ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ತಮಿಳುನಾಡಿನ ಕಡಲೂರು ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಂದನಾರ್​ ಬಾಲಕರ ಫ್ರೌಢಶಾಲೆಯ ಶಿಕ್ಷಕ ಈ ರೀತಿಯಾಗಿ ನಡೆದುಕೊಂಡಿದ್ದು, ಶಾಲಾ ವಿದ್ಯಾರ್ಥಿಗಳನ್ನ ಕ್ರೂರವಾಗಿ ಥಳಿಸಿದ್ದಾನೆ. ಈ ಶಾಲೆಯಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆಂದು ತಿಳಿದು ಬಂದಿದೆ.

ವಿದ್ಯಾರ್ಥಿಗಳ ಮೇಲೆ ಶಾಲಾ ಶಿಕ್ಷಕನ ರಾಕ್ಷಸಿ ವರ್ತನೆ

ಇದನ್ನೂ ಓದಿರಿ: ಗಡಿಯಲ್ಲಿ ಪದೇ ಪದೆ ನಿಯಮ ಉಲ್ಲಂಘನೆ ಮಾಡಿದ್ರೆ, ಮತ್ತೊಂದು ಸರ್ಜಿಕಲ್​​ ಸ್ಟ್ರೈಕ್​​: ಪಾಕ್​ಗೆ ಅಮಿತ್ ಶಾ ಎಚ್ಚರಿಕೆ

ಲಭ್ಯವಾಗಿರುವ ಮಾಹಿತಿ ಪ್ರಕಾರ 12ನೇ ತರಗತಿಯ ವಿದ್ಯಾರ್ಥಿಗಳಾದ ಸಂಜಯ್​, ಅಜಯ್​ ಕುಮಾರ್​, ನೆಕ್ಸಾ ಬಾಲನ್​, ಸುಚೀಂದ್ರನ್​, ಸೂರ್ಯ ಹಾಗೂ ಚಂದ್ರು ಸರಿಯಾಗಿ ತರಗತಿಗೆ ಬಾರದ ಕಾರಣ ಶಿಕ್ಷಕರಾದ ಸುಬ್ರಮಣಿಯನ್​​ ಲಾಠಿಯಿಂದ ಹೊಡೆದಿದ್ದು, ಕಾಲಿನಿಂದ ಒದಿದ್ದಾರೆ. ಈ ಘಟನೆಯ ವಿಡಿಯೋ ತಮ್ಮ ಮೊಬೈಲ್​​ಗಳಲ್ಲಿ ರೆಕಾರ್ಡ್​ ಮಾಡಿರುವ ಇತರ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಶಿಕ್ಷಕರನ್ನ ವಿಚಾರಣೆಗೊಳಪಡಿಸಲಾಗುವುದು ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.