ನವದೆಹಲಿ: ಓಯೋ ರೂಮ್ಸ್ ಅಡಿಯಲ್ಲಿ ಪಟ್ಟಿ ಮಾಡಲಾದ ದೆಹಲಿಯ ಹೋಟೆಲ್‌ನಲ್ಲಿ ವಿವಾದಾತ್ಮಕ ಘಟನೆಯೊಂದು ನಡೆದಿದೆ ಎನ್ನಲಾಗ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ. ಕಾಶ್ಮೀರಿ ವ್ಯಕ್ತಿಯೊಬ್ಬರಿಗೆ ವಸತಿ ನಿರಾಕರಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ವಿಡಿಯೋದಲ್ಲಿ ಇರುವಂತೆ, ಹೋಟೆಲ್ ರಿಸೆಪ್ಶನ್‌ನಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಕಾಶ್ಮೀರಿ ನಿವಾಸಿಗೆ ಆಧಾರ್ ಕಾರ್ಡ್ ಸೇರಿದಂತೆ ತನ್ನ ಗುರುತಿನ ಪುರಾವೆಗಳನ್ನು ತೋರಿಸಿದ ನಂತರವೂ ಚೆಕ್-ಇನ್ ಮಾಡಲು ಅನುವು ಮಾಡಿಲ್ಲ. ಈ ವ್ಯಕ್ತಿ ಆನ್ಲೈನ್ನಲ್ಲಿ ರೂಂ ಬುಕ್ ಮಾಡಿದ್ದರು ಎನ್ನಲಾಗ್ತಿದೆ.
-
Impact of #KashmirFiles on ground.
— Nasir Khuehami (ناصر کہویہامی) (@NasirKhuehami) March 23, 2022 " '="" class="align-text-top noRightClick twitterSection" data="
Delhi Hotel denies accommodation to kashmiri man, despite provided id and other documents. Is being a kashmiri a Crime. @Nidhi @ndtv @TimesNow @vijaita @zoo_bear @kaushikrj6 @_sayema @alishan_jafri @_sayema @manojkjhadu @MahuaMoitra pic.twitter.com/x2q8A5fXpo
">Impact of #KashmirFiles on ground.
— Nasir Khuehami (ناصر کہویہامی) (@NasirKhuehami) March 23, 2022
Delhi Hotel denies accommodation to kashmiri man, despite provided id and other documents. Is being a kashmiri a Crime. @Nidhi @ndtv @TimesNow @vijaita @zoo_bear @kaushikrj6 @_sayema @alishan_jafri @_sayema @manojkjhadu @MahuaMoitra pic.twitter.com/x2q8A5fXpoImpact of #KashmirFiles on ground.
— Nasir Khuehami (ناصر کہویہامی) (@NasirKhuehami) March 23, 2022
Delhi Hotel denies accommodation to kashmiri man, despite provided id and other documents. Is being a kashmiri a Crime. @Nidhi @ndtv @TimesNow @vijaita @zoo_bear @kaushikrj6 @_sayema @alishan_jafri @_sayema @manojkjhadu @MahuaMoitra pic.twitter.com/x2q8A5fXpo
ಈ ವೇಳೆ ಮಹಿಳೆ ಹೋಟೆಲ್ನ ಹಿರಿಯ ಸಿಬ್ಬಂದಿಯೊಂದಿಗೆ ಈ ಸಂಬಂಧ ಮಾತನಾಡಿದ್ದು, ಹೋಟೆಲ್‌ನಲ್ಲಿ ಕಾಶ್ಮೀರಿ ನಿವಾಸಿಗಳಿಗೆ ಅವಕಾಶ ನೀಡದಂತೆ ದೆಹಲಿ ಪೊಲೀಸರು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಇದೆಲ್ಲವನ್ನು ವಿಡಿಯೋದಲ್ಲಿ ಕಾಣಬಹುದು. ಜಮ್ಮು ಮತ್ತು ಕಾಶ್ಮೀರ್ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ವಕ್ತಾರ ನಾಸಿರ್ ಖುಹಮಿ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ಘಟನೆಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅವರು ಇದು ' ದಿ ಕಾಶ್ಮೀರ್ ಫೈಲ್ಸ್' ಪರಿಣಾಮ ಎಂದಿದ್ದಾರೆ.
ಇದನ್ನೂ ಓದಿ: ಮೋದಿ ಉಪಸ್ಥಿತಿಯಲ್ಲಿ ನಾಳೆ ಯೋಗಿ ಪ್ರಮಾಣ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರತಂಡಕ್ಕೂ ಆಹ್ವಾನ
ಐಡಿ ಮತ್ತು ಇತರ ದಾಖಲೆಗಳನ್ನು ಒದಗಿಸಿದ್ದರೂ ದೆಹಲಿ ಹೋಟೆಲ್‌ನಲ್ಲಿ ಕಾಶ್ಮೀರಿ ವ್ಯಕ್ತಿಗೆ ವಸತಿ ನಿರಾಕರಿಸಲಾಗಿದೆ. ಕಾಶ್ಮೀರಿಯಾಗಿರುವುದು ಅಪರಾಧವಾ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಶ್ಮೀರಿಗಳಿಗೆ ವಸತಿ ನೀಡದಂತೆ ದೆಹಲಿ ಪೊಲೀಸರು ಹೇಳಿದ್ದಾರೆ ಎಂದು ಹೋಟೆಲ್‌ನವರ ಆರೋಪಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, ಬುಧವಾರ ರಾತ್ರಿ ಸರಣಿ ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ಅಂತಹ ಯಾವುದೇ ನಿರ್ದೇಶನಗಳನ್ನು ನಾವು ನೀಡಿಲ್ಲ ಎಂದು ಹೇಳಿದ್ದಾರೆ.
ಈ ಸಂಬಂಧ ಓಯೋ ಕಡೆಯಿಂದಲೂ ಪ್ರತಿಕ್ರಿಯೆ ನೀಡಲಾಗಿದೆ. ನಮ್ಮ ಕೊಠಡಿಗಳು ಮತ್ತು ನಮ್ಮ ಹೃದಯಗಳು ಎಲ್ಲರಿಗೂ ಯಾವಾಗಲೂ ತೆರೆದಿರುತ್ತವೆ. ಈ ವಿಷಯ ನಾವು ಎಂದಿಗೂ ರಾಜಿ ಮಾಡಿಕೊಳ್ಳುವಂತಹುದಲ್ಲ. ನಾವು ಖಂಡಿತವಾಗಿಯೂ ಘಟನೆ ಪರಿಶೀಲಿಸುತ್ತೇವೆ ಎಂದಿದ್ದಾರೆ.