ಲೂಧಿಯಾನ (ಪಂಜಾಬ್): ನಾವು ಹೋಟೆಲ್ನಲ್ಲಿ ಆಹಾರ ತೆಗೆದುಕೊಂಡಾಗ ಅದರಲ್ಲಿ ಕೂದಲು ಸಿಕ್ಕಿದರೇ ಸಾಕು ಸರ್ವರ್ ಮೇಲೆ ರೇಗಾಡಿ ಬಿಡುತ್ತೇವೆ. ಹೀಗಿರಬೇಕಾದರೆ ನಾನ್ವೆಜ್ ಆಹಾರದ ಜೊತೆ ಇಲಿ ಸಿಕ್ಕರೆ ಆರ್ಡರ್ ಮಾಡಿದ ಗ್ರಾಹಕನ ಗತಿ ಏನು ಅಲ್ಲವೇ. ಈ ರೀತಿಯ ಘಟನೆ ಒಂದು ವರದಿಯಾಗಿದ್ದು, ಇದರ ಅಸಲಿಯತ್ತು ಮಾತ್ರ ಪ್ರಶ್ನಾರ್ತಕವಾಗಿದೆ.
ನಿನ್ನೆ ಢಾಬಾವೊಂದಕ್ಕೆ ಬಂದ ಕುಟುಂಬದವರು ತಮಗೆ ಬೇಕಾದ ಮಾಂಸಹಾರವನ್ನು ಆರ್ಡರ್ ಮಾಡುತ್ತಾರೆ. ಅವರು ಕೇಳಿದ ಆಹಾರವನ್ನು ಡಾಬಾದವರು ಸರ್ವ್ ಮಾಡಿದ್ದಾರೆ. ಆದರೆ ನಂತರ ಅವರು ತೆಗೆದುಕೊಂಡ ಆಹಾರದಲ್ಲಿ ಇಲಿ ಬಿದ್ದಿರುವುದು ಕಂಡಿದೆ. ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ವೈರಲ್ ಆದ ನಂತರ ಢಾಬಾದ ಮಾಲೀಕ ನಷ್ಟಕ್ಕೆ ಒಳಗಾಗುತ್ತಿದ್ದಾರೆ. ಈಗ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವರ ವಿರುದ್ಧ ದೂರು ದಾಖಲಿಸಲು ಢಾಬಾ ಮಾಲೀಕ ಮುಂದಾಗಿದ್ದಾರೆ. ಅಲ್ಲದೇ ಇದು ಉದ್ದೇಶಪೂರ್ವಕವಾಗಿ ಮಾಡಲಾದ ವಿಡಿಯೋ ಎಂದು ಆರೋಪಿಸಿದ್ದಾರೆ.
ಘಟನೆ ಏನು?: ಜಾಗರಾನ್ ಸೇತುವೆ ಬಳಿಯಿರುವ ಪ್ರಕಾಶ್ ಢಾಬಾದಲ್ಲಿ ಗ್ರಾಹಕರೊಬ್ಬರು ಮಾಂಸಹಾರವನ್ನು ಆರ್ಡರ್ ಮಾಡಿದ್ದು, ಅದರಲ್ಲಿ ಇಲಿ ಸಿಕ್ಕಿದೆ. ಇದನ್ನು ಗ್ರಾಹಕರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆದರೆ ಈ ವಿಡಿಯೋದ ಅಸಲಿಯತ್ತು ಬೇರೆ ಎನ್ನುತ್ತಿದ್ದಾರೆ ಡಾಬಾ ಮಾಲೀಕ.
ನಾವು ಅವರು ಕೇಳಿದ ಆಹಾರದಲ್ಲಿ ನಾಲ್ಕು ಮಾಂಸದ ತುಂಡುಗಳನ್ನು ಕೊಟ್ಟಿದ್ದವು. ವಿಡಿಯೋದಲ್ಲಿ ಐದು ತುಂಡು ಕಾಣುತ್ತಿದೆ. ಅವರು ಬೇಕೆಂದೇ ಈ ರೀತಿಯ ವಿಡಿಯೋ ಮಾಡಿದ್ದಾರೆ. ಢಾಬಾ ಹಲವು ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿರುವ ಕಾರಣ ಆಹಾರದ ಗುಣಮಟ್ಟ ಚೆನ್ನಾಗಿ ಇಲ್ಲ ಎಂದು ಸಾಮಾಜಿಕ ಜಾಲತಾಣದ ಮೂಲಕ ಬಿಂಬಿಸಿ ವ್ಯವಹಾರ ಹಾಳು ಮಾಡಲು ನೋಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಿಡಿಯೋ ವೈರಲ್ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು: ಪ್ರಕಾಶ್ ಢಾಬಾ ಮಾಲೀಕ ಹನಿ ಮಾತನಾಡಿ, ನಮ್ಮ ಢಾಬಾವನ್ನು ನವೀಕರಣ ಮಾಡುತ್ತಿದ್ದೇವೆ. ಹೀಗಾಗಿ ಸಿಸಿಟಿವಿಗಳು ಕೆಲಸ ನಿರ್ವಹಿಸುತ್ತಿಲ್ಲ. ನಮ್ಮ ಬಳಿ ಅವರು ಮಾಡಿದ ವಂಚನೆಯನ್ನು ಸಾಬೀತು ಮಾಡಲು ವಿಡಿಯೋ ಸಾಕ್ಷ್ಯಗಳಿಲ್ಲ.
ಆದರೆ ನಾವು ಶುಚಿಯಾಗಿಯೇ ಆಹಾರವನ್ನು ತಯಾರಿಸುತ್ತೇವೆ. ನಮಗೆ ಮಾನಹಾನಿ ಮಾಡಲಾಗುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಗ್ರಾಹಕರು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ, ಆದರೆ ಢಾಬಾ ಮಾಲೀಕರು ನಮ್ಮ ಹೆಸರನ್ನು ಹಾಳು ಮಾಡಲು ಬಯಸುತ್ತಿರುವ ಕಾರಣ ನಾವು ಅವರ ವಿರುದ್ಧ ದೂರು ನೀಡಬೇಕಾಗಿದೆ ಎಂದು ಹೇಳಿದ್ದಾರೆ.
ನಮ್ಮದು ಕೆಲವು ಶಾಖೆಗಳೂ ಇವೆ. ಈ ವಿಡಿಯೋ ವೈರಲ್ ಆದ ನಂತರ ಎಲ್ಲಾ ಕಡೆ ನಮ್ಮ ಢಾಬಾಕ್ಕೆ ಬರುವ ಗ್ರಾಹಕರ ಸಂಖ್ಯೆ ಕಡಿಮೆ ಆಗಿದೆ. ಗ್ರಾಹಕರು ನಮ್ಮೊಡನೆ ಇಲ್ಲಿ ಗಲಾಟೆ ಮಾಡಿ ಹೋಗಿದ್ದಾರೆ. ಹೀಗಾಗಿ ನಮ್ಮ ಢಾಬಾಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುವುದೇ ಅವರ ಉದ್ದೇಶ ಎಂದಿದ್ದಾರೆ.
ಇದನ್ನೂ ಓದಿ: Tomato price : ಸೇಬಿಗಿಂತ ದುಬಾರಿಯಾದ ಟೊಮೆಟೊ !