ಭಾರತೀಯ ಯೋಧರ ಬಗ್ಗೆ ಎಲ್ಲರಿಗೂ ಇನ್ನಿಲ್ಲದ ಪ್ರೀತಿ, ಗೌರವ. ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲೂ ತಮ್ಮ ಪ್ರಾಣದ ಹಂಗು ತೊರೆದು ದೇಶದ ಗಡಿ ಕಾಯುವ ಸೈನಿಕರು ಯಾವಾಗಲೂ ನಮಗೆ ರಿಯಲ್ ಹೀರೋಗಳಾಗಿ ಕಾಣಿಸುತ್ತಾರೆ. ಅವರನ್ನ ಕಂಡಾಗ ನಮ್ಮಲ್ಲಿ ಗೌರವ ಭಾವನೆ ತಾನಾಗಿ ಮೂಡುತ್ತದೆ. ಅವರನ್ನ ಕಂಡಾಗ ಪ್ರೀತಿಯಿಂದ ಮಾತನಾಡಿಸುತ್ತೇವೆ. ಪ್ರೀತಿಯಿಂದ ಅಪ್ಪಿಕೊಳ್ಳುತ್ತೇವೆ. ಆದರೆ, ಇಲ್ಲೋರ್ವ ಪುಟ್ಟ ಬಾಲಕಿ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಆಕೆಯ ನಡೆಗೆ ಇದೀಗ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ಯೋಧರ ಕಾಲಿಗೆ ಪುಟಾಣಿ ಬಾಲಕಿ ನಮಸ್ಕರಿಸಿದ್ದಾಳೆ. ಈ ಮೂಲಕ ಯೋಧರಿಗೆ ಗೌರವ ಸಲ್ಲಿಕೆ ಮಾಡಿದ್ದಾಳೆ. ಕಾಲು ಮುಟ್ಟಿ ನಮಸ್ಕಾರ ಮಾಡುತ್ತಿದ್ದಂತೆ ಮುದ್ದು ಕಂದನನ್ನ ಯೋಧರು ಮುದ್ದಾಡಿದ್ದು, ಜೊತೆಗೆ ಕೆಲ ನಿಮಿಷಗಳ ಕಾಲ ಮಗು ಜೊತೆ ಮಾತನಾಡಿದ್ದಾರೆ. ಮಗುವಿನ ಈ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅನೇಕರ ಹೃದಯ ಕರಗಿ ನಿರಾಗುವಂತೆ ಮಾಡಿದೆ.
-
इस बेटी को आशीर्वाद एवं परिवार को आभार बिटिया को उत्तम संस्कार देने के लिए 🙏 https://t.co/SgbI1PcRJv
— Smriti Z Irani (@smritiirani) July 15, 2022 " class="align-text-top noRightClick twitterSection" data="
">इस बेटी को आशीर्वाद एवं परिवार को आभार बिटिया को उत्तम संस्कार देने के लिए 🙏 https://t.co/SgbI1PcRJv
— Smriti Z Irani (@smritiirani) July 15, 2022इस बेटी को आशीर्वाद एवं परिवार को आभार बिटिया को उत्तम संस्कार देने के लिए 🙏 https://t.co/SgbI1PcRJv
— Smriti Z Irani (@smritiirani) July 15, 2022
ಇದನ್ನೂ ಓದಿರಿ: 'ಉಚಿತ ರೇವಡಿ ಸಂಸ್ಕೃತಿ' ದೇಶದ ಅಭಿವೃದ್ಧಿಗೆ ಅಪಾಯ... ವಿರೋಧ ಪಕ್ಷಗಳ ವಿರುದ್ಧ ನಮೋ ವಾಗ್ದಾಳಿ
ಈ ವಿಡಿಯೋವನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಟ್ವೀಟರ್ ಅಕೌಂಟ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಈ ಮಗುವಿಗೆ ಶುಭ ಹಾರೈಸಿ, ಉತ್ತಮ ಮೌಲ್ಯ ಕಲಿಸಿಕೊಟ್ಟ ಕುಟುಂಬಕ್ಕೆ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ. ಸಂಸದ ಪಿಸಿ ಮೋಹನ್ ಕೂಡ ಈ ವಿಡಿಯೋ ತಮ್ಮ ಟ್ವೀಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.