ತೆಂಕಾಸಿ(ತಮಿಳುನಾಡು): ಜಿಲ್ಲೆಯ ಕುಲ್ಲುರಾಣಿ ಎಂಬ ಗ್ರಾಮದ ಜಾತ್ರಾ ಮಹೋತ್ಸವದಲ್ಲಿ ಮಾನವನ ತಲೆಬುರುಡೆ ಹಿಡಿದು ನೃತ್ಯ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಲ್ಲುರಾಣಿ ದೇವಸ್ಥಾನದಲ್ಲಿ ನಡೆದಿರುವ ಜಾತ್ರಾ ಮಹೋತ್ಸವದಲ್ಲಿ ಮಾನವನ ಮಾಂಸ ತಿಂದಿರುವ ಆರೋಪವೂ ಕೇಳಿ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ವಿಡಿಯೋ ಭಾರಿ ವೈರಲ್ ಆಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೇವಾಲಯದ ಆಡಳಿತ ಮಂಡಳಿ, ಶಕ್ತಿ ಪೋತಿ ಸುದಲೈ ಮದಸ್ವಾಮಿ(ಕಾಟ್ಟು ಕೋವಿಲ್) ದೇವಾಲಯದ ಕೆಲ ಸಂತರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 10 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾವ ವ್ಯಕ್ತಿಯ ತಲೆ ಬರುಡೆಯನ್ನು ಪ್ರದರ್ಶಿಸಿದ್ದಾರೆ ಹಾಗೂ ಮಾನವನ ಮಾಂಸವನ್ನು ತಿಂದಿದ್ದಾರೆಯೇ ಎಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಅರ್ಧ ಕೊಳೆತ ತಲೆಬುರುಡೆ ಜೊತೆ ನೃತ್ಯ: ದೇಗುಲದ ಆವರಣದಲ್ಲಿ ಇದೆಂಥಾ ಸಂಪ್ರದಾಯ?