ನವದೆಹಲಿ: ಮ್ಯಾನ್ಮಾರ್ನಿಂದ ಅಕ್ರಮವಾಗಿ ವಲಸೆ ಬರುತ್ತಿರುವರಿಂದಲೇ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಪೀಪಲ್ಸ್ ಅಲೆಯನ್ಸ್ ಫಾರ್ ಪೀಸ್ ಅಂಡ್ ಪ್ರೊಗ್ರೆಸ್ ಮಣಿಪುರ ಮತ್ತು ದೆಹಲಿ ಮಣಿಪುರ ಆರೋಪಿಸಿದೆ. ಮಣಿಪುರ ಹಿಂಸಾಚಾರವನ್ನು ಅತ್ಯಂತ ಯೋಜಿತ ಪಿತೂರಿ ಮೂಲಕ ನಡೆಸಲಾಗಿದೆ. ಮ್ಯಾನ್ಮಾರ್ದಿಂದ ಅಕ್ರಮವಾಗಿ ಬಂದ ಕುಕಿ ಸಮುದಾಯದ ಜನರು ಕೇಂದ್ರ ಸರ್ಕಾರದಲ್ಲಿ ಅಕ್ರಮವಾಗಿ ಉದ್ಯೋಗ ಪಡೆದಿದ್ದಾರೆ ಎಂದು ದೆಹಲಿ ಮಣಿಪುರಿ ಸೊಸೈಟಿ ಮತ್ತು ಜವಹಾರ್ ಲಾಲ್ ನೆಹರು ಯುನಿವರ್ಸಿಟಿಯ ಪ್ರೊಫೆಸರ್ ಭಗತ್ ಒನಿಮ್ ದೂರಿದ್ದಾರೆ.
ರಾಜ್ಯದ ಮೆತೈ ಸಮುದಾಯ ಪರ ಪೀಪಲ್ಸ್ ಅಲೆಯನ್ಸ್ ಫಾರ್ ಪೀಸ್ ಅಂಡ್ ಪ್ರೊಗ್ರೆಸ್ ಮಣಿಪುರ ಮತ್ತು ದೆಹಲಿ ಮಣಿಪುರ ವಾದಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಸರ್ಕಾರ ರಾಜ್ಯದಲ್ಲಿ ಡ್ರಗ್ ಮಾಫಿಯಾದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಡ್ರಗ್ ಮಾಫಿಯಾ ಈ ಹಿಂಸಾಚಾರದಲ್ಲಿ ಕ್ರಿಯಾಶೀಲವಾಗಿದೆ. ಮಣಿಪುರ ಹಿಂಸಾಚಾರದಲ್ಲಿ ಇವರ ಪಾತ್ರ ದೊಡ್ಡದು ಎಂದು ಒನಿಮ್ ತಿಳಿಸಿದರು.
ಬುಡಕಟ್ಟು ಸ್ಥಾನಮಾನಕ್ಕೆ ಒತ್ತಾಯ: ಮಣಿಪುರ ಚುನಾವಣಾ ರಾಜಕೀಯದಲ್ಲಿ ಕುಕಿ ಸಮುದಾಯ ಪ್ರಭಾವಶಾಲಿಯಾಗಿದೆ ಎಂಬುದನ್ನು ಒಪ್ಪಿದ ಒನಿಮ್, ಕುಕಿಗಳು ಬೇರೆ ದೇಶದಿಂದ ಬಂದು ತಮ್ಮನ್ನು ತಾವು ಇಲ್ಲಿನ ಮತದಾರರು ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಇಲ್ಲಿ ಇತರರ ಮೇಲೆ ಪ್ರಾಬಲ್ಯ ಮೆರೆಯಲು ಮುಂದಾಗಿದ್ದಾರೆ. ಇದೇ ಕಾರಣದಿಂದ ಈ ನಿರ್ದಿಷ್ಟ ಸಮುದಾಯದ ಮಂದಿಯನ್ನು ಗುರಿ ಮಾಡಲಾಗಿದೆ ಎಂದರು.
ಮಣಿಪುರ ಜನಸಂಖ್ಯೆಯಲ್ಲಿ ಮೆತೈ ಸಮುದಾಯದ ಜನರ ಶೇ 53ರಷ್ಟಿದ್ದು, ಇವರು ಇಂಫಾಲ ಕಣಿವೆಯಲ್ಲಿ ಹೆಚ್ಚಾಗಿದ್ದಾರೆ. ನಾಗಾಸ್ ಬುಡಕಟ್ಟು ಮತ್ತು ಕುಕಿಸ್ ಶೇ 40ರಷ್ಟು ಜನಸಂಖ್ಯೆ ಇಲ್ಲಿ ವಾಸವಾಗಿದ್ದಾರೆ. ಮೆತೈ ಸಮುದಾಯಕ್ಕೆ ಪರಿಶಿಷ್ಟ ಬುಡಕಟ್ಟು ಸ್ಥಾನ ನೀಡಿದರೆ, ಇದರಿಂದ ಕುಕಿ ಸಮುದಾಯಕ ಉದ್ಯೋಗದ ಅಪಾಯ ಎದುರಿಸುವ ಸಾಧ್ಯತೆ ಇದೆ ಎಂಬ ಭಯ ಅವರಲ್ಲಿದೆ. ಇದು ಕೂಡ ಈ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಮೆತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ವಿರೋಧಿಸಿ 10 ಗಿರಿಶಿಖರ ಜಿಲ್ಲೆಗಳಲ್ಲಿ Tribal Solidarity March ಸಂಘಟಿಸಲಾಯಿತು. ಈ ಬೆನ್ನಲ್ಲೇ ಮೇ 3ರಂದು ಈಶಾನ್ಯ ರಾಜ್ಯದಲ್ಲಿ ಹಿಂಚಾಚಾರ ಭುಗಿಲೆದ್ದಿತು.
'ಸರ್ಕಾರದ ವೈಫಲ್ಯ': ಈ ಹಿಂಸಾಚಾರದಲ್ಲಿ ಅನೇಕ ಮೆತೈ ಸಮುದಾಯದ ಜನರು ಅಪಾಯದಲ್ಲಿ ಸಿಲುಕಿದರು. ಚುರಚಂದಪುರ್ ಜಿಲ್ಲೆಯಲ್ಲಿ ಹಿಂಸಾಚಾರದ ವೇಳೆ ಸಕಾಲಕ್ಕೆ ಯಾವುದೇ ಸಹಾಯವೂ ಸಿಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸರ್ಕಾರ ಸಮಯಕ್ಕೆ ಸರಿಯಾಗಿ ನಮಗೆ ಸಹಾಯ ಮಾಡಿದ್ದರೆ, ಈ ಹಿಂಸಾಚಾರವನ್ನು ನಾವು ನಿಯಂತ್ರಿಸಬಹುದಿತ್ತು. ಆಗ ಈ ರೀತಿಯ ದೊಡ್ಡ ಅನಾಹುತ ನಡೆಯುತ್ತಿರಲುಲ್ಲ. ರಾಜ್ಯ ಸರ್ಕಾರದ ವೈಫಲ್ಯದಿಂದ ಈ ಅನಾಹುತ ನಡೆಯಿತು ಎಂದು ರುಬಿನಾ ತಿಳಿಸಿದ್ದಾರೆ.
ಮೆತೈ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದು, ಅವರ ಮನೆಗಳನ್ನು ಹೊಡೆದುರುಳಿಸಿದ್ದಾರೆ ಎಂದಿರುವ ರುಬಿನಾ, ಮಣಿಪುರದಲ್ಲಿ ಶಾಂತಿಯನ್ನು ಪುನರ್ಸ್ಥಾಪಿಸುವಂತೆ ಮನವಿ ಕೂಡ ಮಾಡಿದ್ದಾರೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರವನ್ನು ಮ್ಯಾನ್ಮಾರ್ ಮೂಲದ ಪಿಡಿಎಫ್ ಬೆಂಬಲಿಸಿದೆ: ಎಂಪಿಸಿಸಿ ಅಧ್ಯಕ್ಷ ಆರೋಪ