ಹೈದರಾಬಾದ್ (ತೆಲಂಗಾಣ): ತೆಲಂಗಾಣ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಯಾಗುತ್ತಿದ್ದಂತೆ ಅ.9ರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಇದರ ಭಾಗವಾಗಿ ಈ ವರೆಗೂ ರಾಜ್ಯದಲ್ಲಿ ದಾಖಲೆಗಳಿಲ್ಲದ ನಗದು, ಮದ್ಯ, ಚಿನ್ನಾಭರಣ, ಉಡುಗೊರೆಗಳು ಸೇರಿ ಒಟ್ಟು ರೂ.307 ಕೋಟಿ ಮೌಲ್ಯದ ವಸ್ತಗಳ ವಶ ಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾಧಿರಿ ವಿಕರ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
Congress President has approved the proposal for the appointment of Ashok Shankarrao Chavan and NS Boscraju as AICC Special Observers for the ensuing Assembly Elections in Telangana-2023, with immediate effect: Congress pic.twitter.com/Q37mxtj843
— ANI (@ANI) October 21, 2023 " class="align-text-top noRightClick twitterSection" data="
">Congress President has approved the proposal for the appointment of Ashok Shankarrao Chavan and NS Boscraju as AICC Special Observers for the ensuing Assembly Elections in Telangana-2023, with immediate effect: Congress pic.twitter.com/Q37mxtj843
— ANI (@ANI) October 21, 2023Congress President has approved the proposal for the appointment of Ashok Shankarrao Chavan and NS Boscraju as AICC Special Observers for the ensuing Assembly Elections in Telangana-2023, with immediate effect: Congress pic.twitter.com/Q37mxtj843
— ANI (@ANI) October 21, 2023
ಕಳೆದ 24 ಗಂಟೆಗಳಲ್ಲಿ ರೂ.9.69 ಕೋಟಿ ನಗದು ವಶಪಡಿಸಿಕೊಳ್ಳಲಾಗಿದ್ದು, ಇದುವರೆಗೆ ವಶಪಡಿಸಿಕೊಂಡಿರುವ ಒಟ್ಟು ನಗದು ರೂ.105.58 ಕೋಟಿ ರೂ ಆಗಿದೆ. ನಿನ್ನೆ ಬೆಳಗ್ಗೆ35 ಲಕ್ಷ ರೂ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮಾಲುಗಳ ಒಟ್ಟು ಮೌಲ್ಯ ರೂ.13.58 ಕೋಟಿ ಆಗಿದೆ. ಕಳೆದ 24 ಗಂಟೆಗಳಲ್ಲಿ 72 ಲಕ್ಷ ಮೌಲ್ಯದ 232 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದ್ದು, ಈವರೆಗೆ ರೂ.15.23 ಕೋಟಿ ಮೌಲ್ಯದ 3672 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

24 ಗಂಟೆಗಳಲ್ಲಿ 3.81 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ವರೆಗೂ ದಾಖಲೆಯಿಲ್ಲದ ಒಟ್ಟು 202 ಕೆಜಿ ಚಿನ್ನ, 894 ಕೆಜಿ ಬೆಳ್ಳಿ, 190 ಕ್ಯಾರೆಟ್ ವಜ್ರ ಮತ್ತು ಐದು ಗ್ರಾಂ ಪ್ಲಾಟಿನಂ ಅನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಒಟ್ಟು ಮೌಲ್ಯ 145.67 ಕೋಟಿ ರೂಪಾಯಿ ಆಗಿದೆ. ಇವುಗಳ ಜೊತೆಗೆ 26.93 ಕೋಟಿ ಮೌಲ್ಯದ ಇತರ ಉಡುಗೊರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ಟೋಬರ್ 20ರ ಬೆಳಗ್ಗೆಯಿಂದ 24 ಗಂಟೆಗಳಲ್ಲಿ ಸ್ವಾಧೀನಪಡಿಸಿಕೊಂಡ ಒಟ್ಟು ವಸ್ತುಗಳ ಮೌಲ್ಯ 18.01 ಕೋಟಿ ರೂ. ಆಗಿದೆ ಎಂದು ಚುನಾಚಣಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ತೆಲಂಗಾಣ ವಿಧಾನಸಭಾ ಚುನಾವಣೆ ನವೆಂಬರ್ 30ರಂದು ನಡೆಯಲಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆ ದಾಖಲೆ ಇಲ್ಲದೇ ರೂ.50 ಸಾವಿರಕ್ಕಿಂತ ಹೆಚ್ಚಿನ ನಗದು ಮತ್ತು ಹತ್ತು ಗ್ರಾಂ ಗಿಂತ ಹೆಚ್ಚಿನ ಆಭರಣವನ್ನು ಕೊಂಡೊಯ್ಯುವಂತಿಲ್ಲ. ಅವಶ್ಯಕತೆ ಇದ್ದಲ್ಲಿ ಅವುಗಳಿಗೆ ಸಂಬಂಧಪಟ್ಟ ಸೂಕ್ತ ದಾಖಲೆಗಳನ್ನು ತಪಾಸಣಾ ಅಧಿಕಾರಿಗಳಿಗೆ ತೋರಿಸಬೇಕಾಗಿದೆ.
ಕಾಂಗ್ರೆಸ್ ಚುನಾವಣೆ ವಿಶೇಷ ವೀಕ್ಷಕರ ನೇಮಕ: ತೆಲಂಗಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ವಿಶೇಷ ವೀಕ್ಷಕರಾಗಿ ಅಶೋಕ್ ಶಂಕರರಾವ್ ಚವ್ಹಾಣ್ ಮತ್ತು ಎನ್‌ಎಸ್ ಬೋಸರಾಜು ಅವರನ್ನು ನೇಮಕ ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್ (ಟ್ವಿಟ್ಟರ್)ನಲ್ಲಿ ಮಾಹಿತಿ ಹಂಚಿಕೊಂಡಿದೆ. ತೆಲಂಗಾಣ ವಿಧಾನಸಭೆ ಚುನಾವಣೆಗೆ ಎಐಸಿಸಿ ವಿಶೇಷ ವೀಕ್ಷಕರಾಗಿ ಅಶೋಕ್ ಶಂಕರರಾವ್ ಚವ್ಹಾಣ್ ಮತ್ತು ಎನ್‌ಎಸ್ ಬೋಸರಾಜು ಮಾಡುವ ಪ್ರಸ್ತಾವನೆಯನ್ನು ಕಾಂಗ್ರೆಸ್ ಅಧ್ಯಕ್ಷರು ಅನುಮೋದಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಕಾಂಗ್ರೆಸ್ ಹೇಳಿದೆ.