ETV Bharat / bharat

ಅಕ್ರಮ ಮದ್ಯ ಮಾರಾಟ ತಡೆದ ಪೊಲೀಸರ ಮೇಲೆಯೇ ಹಲ್ಲೆ - UP local body election

ಉತ್ತರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ ಅಕ್ರಮ ಮದ್ಯ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಲು ಬಂದ ಪೊಲೀಸ್​ ಸಿಬ್ಬಂದಿಯನ್ನೇ ಗ್ರಾಮಸ್ಥರು ಥಳಿಸಿದ್ದಾರೆ.

villagers beaten policeman who went to catch liquor mafia in jalaun
ಅಕ್ರಮ ಮದ್ಯ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಲು ಬಂದ ಪೊಲೀಸಪ್ಪನ ಮೇಲೆಯೇ ಹಲ್ಲೆ
author img

By

Published : Mar 14, 2021, 2:09 PM IST

ಜಲೌನ್ (ಉತ್ತರ ಪ್ರದೇಶ): ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಲು ಬಂದ ಪೊಲೀಸ್​ ಸಿಬ್ಬಂದಿ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಜಲೌನ್ ಜಿಲ್ಲೆಯಲ್ಲಿ ನಡೆದಿದೆ.

ಉತ್ತರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು, ಅಕ್ರಮ ಮದ್ಯದ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಲ್ಪಿ ಕೋತ್ವಾಲಿ ಪ್ರದೇಶದ ಶಾಜಾಪುರಕ್ಕೆ ಪೊಲೀಸರು ಬಂದಿದ್ದಾರೆ. ಆದರೆ ಗ್ರಾಮಸ್ಥರು ಸುತ್ತುವರೆದು ಓರ್ವ ಪೊಲೀಸ್​ ಸಿಬ್ಬಂದಿಯನ್ನೇ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಇಂಡೋ-ಪಾಕ್​ ಗಡಿಯಲ್ಲಿ ಮೂವರು ಡ್ರಗ್​​ ಪೆಡ್ಲರ್​ಗಳು ಅರೆಸ್ಟ್​

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪೊಲೀಸ್​ ಇನ್​ಸ್ಪೆಕ್ಟರ್​ ಅಮಿತ್ ಪ್ರತಾಪ್ ಸಿಂಗ್ ಬಂದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.