ETV Bharat / bharat

Namo ನಾಡಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ... ರೂಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ಯಾಕೆ!?

ಮೋದಿ ತವರು ರಾಜ್ಯ ಗುಜರಾತ್​ನಲ್ಲೂ ದಿಢೀರ್​ ರಾಜಕೀಯ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ರಾಜೀನಾಮೆ ನೀಡಿದ್ದಾರೆ.

author img

By

Published : Sep 11, 2021, 4:32 PM IST

Updated : Sep 11, 2021, 4:40 PM IST

Vijay Rupani
Vijay Rupani

ಗಾಂಧಿನಗರ(ಗುಜರಾತ್​): ಕರ್ನಾಟಕದ ಬಳಿಕ ಪ್ರಧಾನಿ ನರೇಂದ್ರ ಮೋದಿ ನಾಡು ಗುಜರಾತ್​ನಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ ನಡೆದಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್​ ರೂಪಾನಿ ರಾಜೀನಾಮೆ ನೀಡಿದ್ದಾರೆ. ಮಾಜಿ ಸಿಎಂ ಆನಂದಿ ಬೆನ್​ ನಂತರ ಗುಜರಾತ್​ನಲ್ಲಿ 5 ವರ್ಷಗಳ ಕಾಲ ಯಶಸ್ವಿಯಾಗಿ ಆಡಳಿತ ನಡೆಸಿರುವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ರೂಪಾನಿ ಇದೀಗ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದಾರೆ.

2022ರಲ್ಲಿ ಗುಜರಾತ್​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕೆ ಕೆಲ ತಿಂಗಳು ಮಾತ್ರ ಬಾಕಿ ಇರುವಾಗ ಗುಜರಾತ್​ನಲ್ಲಿ ಈ ಬೆಳವಣಿಗೆ ನಡೆದಿರುವುದು ಅನೇಕ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

61 ವರ್ಷದ ರೂಪಾನಿ, ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದ್ದು, ಸರ್ಕಾರ ನಡೆಸಲು ಸಾಧ್ಯವಾಗುವುದಿಲ್ಲ ಎಂಬ ನಿರ್ಧಾರಕ್ಕೆ ಬಂದು ರಾಜೀನಾಮೆ ನೀಡಿದ್ದಾರೆ ಎಂಬ ಮಾತುಗಳು ಸಹ ಗಂಭೀರವಾಗಿ ಕೇಳಿ ಬರಲು ಶುರುವಾಗಿವೆ.

ಇದನ್ನೂ ಓದಿರಿ: ಗುಜರಾತ್​ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಜಯ್​ ರೂಪಾನಿ...ಕಾರಣ?

ಆಡಳಿತ ಪಕ್ಷದಲ್ಲಿ ರೂಪಾನಿ ಬಗ್ಗೆ ಅಸಮಾಧಾನ

ಕಳೆದ ಕೆಲ ತಿಂಗಳಿಂದ ಮುಖ್ಯಮಂತ್ರಿ ವಿಜಯ್ ರೂಪಾನಿ ಆಡಳಿತ ವೈಖರಿ ಬಗ್ಗೆ ಸ್ವಪಕ್ಷೀಯರ ಶಾಸಕರಲ್ಲಿ ಅಸಮಾಧಾನ ಉಂಟಾಗಿತ್ತು ಎಂಬ ಮಾತು ಕೇಳಿ ಬಂದಿದೆ. ಕಳೆದ ಆಗಸ್ಟ್​ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುಜರಾತ್​ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ರೂಪಾನಿ ಬಗ್ಗೆ ದೂರು ನೀಡಿ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಂತೆ ಮನವಿ ಮಾಡಿಕೊಂಡಿದ್ದರು ಎನ್ನಲಾಗಿದೆ.

ಎಎಪಿ, ಪಟೇಲ್​ ಸಮುದಾಯದ ಪ್ರಾಬಲ್ಯ

ಗುಜರಾತ್​ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಿನಿಂದಲೇ ಪ್ರಬಲ ನಾಯಕನನ್ನ ಸಿಎಂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಉದ್ದೇಶದಿಂದ ಬಿಜೆಪಿ ಹೈಕಮಾಂಡ್​ ರೂಪಾನಿ ಅವರಿಂದ ರಾಜೀನಾಮೆ ಪಡೆದುಕೊಂಡಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ಆಮ್​ ಆದ್ಮಿ ಪಕ್ಷ ಹೆಚ್ಚಿನ ಜನಮತಗಳಿಸುತ್ತಿರುವುದು ಹಾಗೂ ಪಟೇಲ್ ಸಮುದಾಯ ಕಾಂಗ್ರೆಸ್​​ನೊಂದಿಗೆ ಕೈಜೋಡಿಸಿರುವುದು ಬಿಜೆಪಿಗೆ ನುಂಗುಲಾರದ ತುತ್ತಾಗಿದೆ.

ಗುಜರಾತ್​ನಲ್ಲಿ ನಡೆದಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಎಪಿಗೆ ಮತ ಹಾಕುವ ಮೂಲಕ ಆಡಳಿತ ವಿರೋಧಿ ಅಲೆ ಇದೆ ಎಂಬುದನ್ನ ಜನರು ಈಗಾಗಲೇ ತೋರಿಸಿಕೊಟ್ಟಿದ್ದು, ಇದೀಗ ಜನರ ಮತ ಸೆಳೆಯಲು ಬೇರೆ ನಾಯಕನಿಗೆ ಬಿಜೆಪಿ ಹೈಕಮಾಂಡ್​ ಮಣೆ ಹಾಕಲಿದೆ.

ಸಿಎಂ ರೇಸ್​ನಲ್ಲಿ ಯಾರು?

  • ಉಪ ಮುಖ್ಯಮಂತ್ರಿ ನಿತೀನ್ ಪಟೇಲ್​
  • ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡವಿಯಾ
  • ಪುರುಷೋತ್ತಮ ರೂಪಾಲ್​

ಆರ್​​.ಸಿ ಫಾಲ್ದು ಈ ಎಲ್ಲ ಹೆಸರು ಬಿಟ್ಟು ಪಾಟೀದಾರ್​​ ಸಮುದಾಯದ ಅಭ್ಯರ್ಥಿಗೂ ಸಿಎಂ ಪಟ್ಟ ಕಟ್ಟಬೇಕು ಎಂಬ ಮಾತುಗಳು ಜೋರಾಗಿ ಕೇಳಿ ಬರಲು ಶುರುವಾಗಿವೆ.

ರಾಜೀನಾಮೆ ನೀಡಿದ ಬಳಿಕ ರೂಪಾನಿ ಹೇಳಿದ್ದೇನು?

ರಾಜ್ಯದಲ್ಲಿ ಆಡಳಿತ ನಡೆಸಲು ಅವಕಾಶ ನೀಡಿದಕ್ಕಾಗಿ ಗುಜರಾತ್ ಜನರಿಗೆ ಧನ್ಯವಾದಗಳು. ಪಕ್ಷದಲ್ಲಿ ಯಾವ ಹುದ್ದೆ ನೀಡಿದ್ರೂ ಕೂಡ ನಾನು ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಪಿಎಂ ನಮೋ ನೇತೃತ್ವದಲ್ಲಿ ಅಭಿವೃದ್ಧಿ ಪರ ಕೆಲಸಗಳು ಮುಂದುವರೆಯಲಿವೆ ಎಂದಿದ್ದಾರೆ.

Namo ನಾಡಲ್ಲಿ ದಿಢೀರ್ ರಾಜಕೀಯ ಬೆಳವಣಿಗೆ.

ರಾಜೀನಾಮೆ ನೀಡಿದ 4ನೇ ಮುಖ್ಯಮಂತ್ರಿ

ಕಳೆದ ಕೆಲ ತಿಂಗಳಲ್ಲಿ ರಾಜೀನಾಮೆ ನೀಡಿರುವ ಬಿಜೆಪಿ ಮುಖ್ಯಮಂತ್ರಿಗಳ ಪೈಕಿ ರೂಪಾನಿ ನಾಲ್ಕನೇಯವರು. ಜುಲೈ ತಿಂಗಳಲ್ಲಿ ಕರ್ನಾಟಕದ ಬಿ.ಎಸ್​. ಯಡಿಯೂರಪ್ಪ, ಇದಕ್ಕೂ ಮೊದಲು ಉತ್ತರಾಖಂಡದಲ್ಲಿ ಇಬ್ಬರು ಸಿಎಂಗಳ ಬದಲಾವಣೆ ನೀಡಿದ್ದು, ಇದೀಗ ರೂಪಾನಿ ರಾಜೀನಾಮೆ ನೀಡಿದ್ದಾರೆ.

Last Updated : Sep 11, 2021, 4:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.