ETV Bharat / bharat

ವಿಜಯ್​ ದಿವಸ್​​: ಪಾಕಿಸ್ತಾನ ಬಗ್ಗು ಬಡಿದು ಭಾರತ ಕೀರ್ತಿ ಪತಾಕೆ ಹಾರಿಸಿದ ದಿನ

author img

By ETV Bharat Karnataka Team

Published : Dec 16, 2023, 12:30 PM IST

Vijay Diwas in India and Bangladesh: 1971ರ ಡಿಸೆಂಬರ್​ 16 ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತದ ವಿಜಯದ ಸಂಕೇತ ಮತ್ತು ಬಾಂಗ್ಲಾದೇಶ ರಚನೆಯ ದಿನ.

vijay diwas-december-16-1971-west-and-east-pakistan-separated-with-indias-help-bangladesh-formed

ಹೈದರಾಬಾದ್​: ಪ್ರತಿ ವರ್ಷ ಡಿಸೆಂಬರ್​ 16 ಅನ್ನು ವಿಜಯ್​ ದಿವಸ್​ ಆಗಿ ಆಚರಿಸಲಾಗುತ್ತದೆ. ಈ ದಿನದ ಮೂಲಕ 1971ರ ಪಾಕಿಸ್ತಾನದ ಮೇಲೆ ನಡೆದ ಯುದ್ಧದಲ್ಲಿ ಭಾರತದ ವಿಜಯದ ಸಂಕೇತ ಮತ್ತು ಬಾಂಗ್ಲಾದೇಶ ರಚನೆಯ ದಿನಕ್ಕೆ ಕಾರಣವಾಗಿದೆ. ಈ ಸಮಯದಲ್ಲಿ ದೇಶದ ರಕ್ಷಣಗೆ ಹೋರಾಡಿ ಸಾವನ್ನಪ್ಪಿದ ಯೋಧರ ತ್ಯಾಗ ಸ್ಮರಿಸಿ, ಅವರಿಗೆ ಗೌರವಿಸಲಾಗುವುದು.

ಇತಿಹಾಸ: ವಿಜಯ್​ ದಿವಸದ ಇತಿಹಾಸವೂ 13 ದಿನದ ಹೋರಾಟವನ್ನು ಹೊಂದಿದೆ. ಡಿಸೆಂಬರ್​ 3, 1971ರಲ್ಲಿ ಆರಂಭವಾದ ಯುದ್ಧದಲ್ಲಿ ಭಾರತ ಜಯಿ ಸಾಧಿಸಿದ್ದರಿಂದ ಪೂರ್ವ ಪಾಕಿಸ್ತಾನವಾಗಿದ್ದ ಬಾಂಗ್ಲಾದೇಶ ಸ್ವಾತಂತ್ರ್ಯ ಪಡೆಯಿತು.

ಹಿನ್ನೆಲೆ: ಭಾರತದ ವಿಭಜನೆ ಬಳಿಕ ಪಾಕಿಸ್ತಾನವನ್ನು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ಎಂದು ವಿಭಜಿಸಲಾಯಿತು. ಪೂರ್ವ ಪಾಕಿಸ್ತಾನವು ಇಂದಿನ ಬಾಂಗ್ಲಾದೇಶವಾಗಿದೆ. ಪ್ರಾದೇಶಿಕ ಭಾಷಾ ಮತ್ತು ಸಾಂಸ್ಕೃತಿಕ ಅಸಮಾನತೆಗಳು, ರಾಜಕೀಯ, ಆರ್ಥಿಕ ಮತ್ತು ಸಾಮಾಜಿಕ ಉದ್ವಿಗ್ನತೆಗಳಿಂದ ಕೂಡಿದ್ದು, ವಿಭಜಿತ ರಾಷ್ಟ್ರಕ್ಕೆ ಕಾರಣವಾಯಿತು. 1971ರ ಯುದ್ಧವೂ ದೊಡ್ಡ ಮಹತ್ವದ ತಿರುವು ಪಡೆದು, ಡಿಸೆಂಬರ್ 16, 1971 ರಂದು ಪಾಕಿಸ್ತಾನಿ ಸೇನೆಯು ಭಾರತೀಯ ಸೇನೆಗೆ ಶರಣಾಯಿತು. ಇದು ಬಾಂಗ್ಲಾದೇಶ ರಚನೆಗೂ ಕಾರಣವಾಯಿತು.

ಭಾರತದ ರಾಜತಾಂತ್ರಿಕತೆ: ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ, ಈ ಯುದ್ಧದಲ್ಲಿ ರಾಜತಾಂತ್ರಿಕತೆಯನ್ನು ತೋರಿ, ಪಾಕಿಸ್ತಾನ ಉದಯವಾದ 25 ವರ್ಷಗಳೊಳಗೆ ಬಾಂಗ್ಲಾದೇಶ ರಚನೆಗೆ ಕಾರಣವಾಯಿತು. ಈ ಯುದ್ಧ ನಡೆದು 2023ಕ್ಕೆ 52 ವರ್ಷಗಳು ಕಳೆದಿದ್ದು, ಇಂದಿರಾ ಗಾಂಧಿ ಮತ್ತು ಸೇನಾ ಮುಖ್ಯಸ್ಥ ಜನರಲ್ ಸ್ಯಾಮ್ ಮಾಣಿಕ್​ ಶಾ ನಾಯಕತ್ವದಲ್ಲಿ ವಿಜಯಕ್ಕೆ ಸಾಕ್ಷಿಯಾಯಿತು.

ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ: ಪೂರ್ವ ಪಾಕಿಸ್ತಾನದ ಕಡೆಗೆ ಪಶ್ಚಿಮ ಪಾಕಿಸ್ತಾನದ ದಮನಕಾರಿ ನೀತಿಗಳಿಂದ ಸಂಘರ್ಷವು ಹುಟ್ಟಿಕೊಂಡಿತು. ಇದರಿಂದ ಜನರು ಸಂಕಷ್ಟಕ್ಕೆ ಒಳಗಾಗಿ ಸುಮಾರು 10 ಮಿಲಿಯನ್​ ನಿರಾಶ್ರಿತರು ಭಾರತಕ್ಕೆ ಪಲಾಯನ ಮಾಡಿದರು. ರಾಜತಾಂತ್ರಿಕ ಆಯ್ಕೆ ಹೊರತಾಗಿ 1971ರ ಡಿಸೆಂಬರ್​ 3ರಂದು ಭಾರತದ ವಾಯು ನೆಲೆ ಮೇಲೆ ಪಾಕಿಸ್ತಾನದ ವೈಮಾನಿಕ ದಾಳಿ ನಂತರವೇ ಭಾರತದ ಸೇನೆ ಈ ತಂತ್ರವನ್ನು ಅನುಸರಿಸಿ, ಪಾಕಿಸ್ತಾನದ ಜೊತೆ 14 ದಿನ ಯುದ್ಧ ಮಾಡಿ, ಸೋಲಿಸಿತ್ತು.

ಭಾರತಕ್ಕೆ ಶರಣಾದ ಪಾಕಿಸ್ತಾನ: ಡಿಸೆಂಬರ್​ 16, 1971ರಂದು 93 ಸಾವಿರ ಪಾಕಿಸ್ತಾನದ ಸೈನಿಕರು ಭಾರತಕ್ಕೆ ಶರಣಾದರು. ಇದು ಬಾಂಗ್ಲಾದೇಶ ವಿಮೋಚನೆಗೆ ಕಾರಣವಾಯಿತು. ಇಷ್ಟು ಪ್ರಮಾಣದ ಸಂಖ್ಯೆಯಲ್ಲಿ ಸೈನಿಕರು ತಮ್ಮ ಸೋಲನ್ನು ಒಪ್ಪಿಕೊಂಡಿದ್ದು ಯುದ್ಧ ಇತಿಹಾಸದಲ್ಲೇ ಮೊದಲ ಘಟನೆಯಾಗಿ ಅಚ್ಚಾಗಿದೆ. ಈ ಶರಣಾಗತಿ ವೇಳೆ ಪಾಕಿಸ್ತಾನ ತಮ್ಮ ನೌಕ ಮತ್ತು ವಾಯು ಸೇನೆಯ ಗಣನೀಯ ಭಾಗವನ್ನು ಕಳೆದುಕೊಂಡಿತು.

ಎರಡು ಕಡೆ ತ್ಯಾಗ: ಭಾರತದ ಸೇನೆಯು ಪಾಕಿಸ್ತಾನ ಪಶ್ಚಿಮ ಮುಂಭಾಗದಲ್ಲಿ 15,000 ಚದರ್​ ಕಿಲೋಮೀಟರ್ ಪ್ರದೇಶವನ್ನು ವಶಪಡಿಸಿಕೊಂಡಿತು. ಇದು ಪಾಕಿಸ್ತಾನದಲ್ಲಿ ಯಹ್ಯೂ ಖಾನ್​ ಆಡಳಿತ ಪತನ ಮತ್ತು ಅಧ್ಯಕ್ಷರಾಗಿ ಜುಲ್ಫಿಕರ್ ಅಲಿ ಭುಟ್ಟೊ ಅವರನ್ನು ನೇಮಿಸಲು ಕಾರಣವಾಯಿತು. ಈ ಯುದ್ಧವೂ ಎರಡು ಕಡೆ ನಡೆಯಿತು. ಯುದ್ಧದಲ್ಲಿ 2,908 ಯೋಧರು ಸಾವನ್ನಪ್ಪಿದ್ದರೆ, 1,200 ಮಂದಿ ಗಾಯಾಳುಗಳಾದರು. ಹಲವಾರು ಅಧಿಕಾರಿಗಳು ಮತ್ತು ಸೈನಿಕರು ಪರಮವೀರ್​ ಚಕ್ರ, 76 ಮಹಾವೀರ್​ ಚಕ್ರ ಮತ್ತು 513 ವೀರ್​ ಚಕ್ರ ಸೇರಿದಂತೆ ಹಲವು ಶೌರ್ಯ ಪ್ರಶಸ್ತಿಗಳನ್ನು ಪಡೆದರು.

ಪ್ರಮುಖ ವ್ಯಕ್ತಿಗಳು:

  • ಇಂದಿರಾ ಗಾಂಧಿ: ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಪಾಕಿಸ್ತಾನದ ಮೇಲಿನ ಯುದ್ಧ ಮತ್ತು ಹೊಸ ಬಾಂಗ್ಲಾದೇಶ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರವಹಿಸಿದರು.
  • ಆರ್​ ಎನ್​ ಕಾವ್​​ : ಭಾರತದ ಬಾಹ್ಯ ಗುಪ್ತಚರ ಸಂಸ್ಥೆ ಆರ್​ಡಬ್ಲೂಎ (ರಾ) ಮುಖ್ಯಸ್ಥರಾಗಿದ್ದ ಆರ್​ ಎನ್​ ಕಾವ್​​ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸುವ ಜೊತೆಗೆ ಬಾಂಗ್ಲಾದೇಶ ನಿರ್ಮಾತೃತ ಎಂಬ ಹೆಸರನ್ನು ಪಡೆದರು.
  • ಮುಜಿಬುರ್ ರೆಹಮನ್​: ಬಾಂಗ್ಲಾದೇಶ ಲಿಬರೇಷನ್​ ಚಳುವಳಿಯ ಹಿಂದಿನ ಪ್ರಮುಖ ವ್ಯಕ್ತಿಯಾಗಿದ್ದು, ಪೂರ್ವ ಪಾಕಿಸ್ತಾನ ಮುಸ್ಲಿಂ ವಿದ್ಯಾರ್ಥಿಗಳ ಲೀಗ್‌ನ ಸಂಸ್ಥಾಪಕ ಜಂಟಿ ಕಾರ್ಯದರ್ಶಿಯಾಗಿದ್ದರು.
  • ಯಹ್ಯಾ ಖಾನ್​: ಪಾಕಿಸ್ತಾನದ ನಾಗರಿಕ ಯುದ್ಧ ಸಂದರ್ಭದಲ್ಲಿ ಅಧ್ಯಕ್ಷರಾಗಿದ್ದವರು. ಈ ಯುದ್ಧದ ಸೋಲಿನಿಂದ ಅವರು ಹುದ್ದೆಗೆ ರಾಜೀನಾಮೆ ನೀಡಿದರು.
  • ಸ್ಯಾಮ್​ ಮಣಿಕ್​ ಶಾ: 1971 ಯುದ್ಧದಲ್ಲಿ ಭಾರತೀಯ ಸೇನೆಯ ಮುಖ್ಯಸ್ಥರಾಗಿದ್ದವರು. ಭಾರತದ ಗೆಲುವಿಗೆ ಪ್ರಮುಖರಾದವರು. ಫೀಲ್ಡ್​ ಮಾರ್ಷಲ್​ ಸ್ಥಾನ ಪಡೆದ ಮೊದಲ ಭಾರತೀಯ ಸೇನಾ ಅಧಿಕಾರಿಯಾಗಿದ್ದಾರೆ. ಭಾರತ ವಿಜಯದ ವಾಸ್ತುಶಿಲ್ಪಿಯಾದರು.

ದೇಶವೂ ಅಂದು 1971ರಲ್ಲಿ ಯುದ್ಧದಲ್ಲಿ ಹೋರಾಡಿದ ಸೈನಿಕರ ಶೌರ್ಯ, ತ್ಯಾಗ ಮತ್ತು ಧೈರ್ಯಕ್ಕೆ ಗೌರವಿಸಿ, ಸ್ಮರಿಸುವ ಉದ್ದೇಶದಿಂದ ಈ ದಿವನ್ನು ರಾಷ್ಟ್ರೀಯ ವಿಜಯ್​ ದಿವಸ್​ ಆಗಿ ಆಚರಿಸಲಾಗುತ್ತದೆ. ಈ ವಿಜಯವು ಕೇವಲ ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ನಾಂದಿಯಾಯಿತದಲ್ಲದೆ, ಜಗತ್ತಿನಲ್ಲಿ ಭಾರತದ ಸ್ಥಾನವನ್ನು ಸಹ ಗಟ್ಟಿಗೊಳಿಸಿತು.

ಇದನ್ನೂ ಓದಿ: Kargil Vijay Diwas: ಕಾರ್ಗಿಲ್​ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.