ETV Bharat / bharat

ಖರೀದಿಸಿದ ಸಾಮಗ್ರಿಗೆ ಹಣ ಕೇಳಿದ್ದಕ್ಕೆ ಅಂಗಡಿಯನ್ನೇ ಧ್ವಂಸ ಮಾಡಿದ ಮಹಿಳಾ ಪೊಲೀಸ್​ : Video - गाजियाबाद महिला पुलिस मारपीट मामला

ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಲು ಹೋದಾಗ, ಪ್ರಕರಣ ದಾಖಲಿಸಿಕೊಳ್ಳದೆ ಅವರು ರಾತ್ರಿಯಿಡೀ ಠಾಣೆಯಲ್ಲೇ ಕೂರಿಸಿಕೊಂಡಿದ್ದರು ಎಂದು ರಂಜಿತ್ ಆರೋಪಿಸಿದ್ದಾರೆ..

ಖರೀದಿಸಿದ ಸಾಮಗ್ರಿಗೆ ಹಣ ಕೇಳಿದ್ದಕ್ಕೆ ಅಂಗಡಿಯನ್ನೇ ಧ್ವಂಸ ಮಾಡಿದ ಮಹಿಳಾ ಪೊಲೀಸ್

author img

By

Published : Aug 30, 2021, 11:02 PM IST

ಗಾಜಿಯಾಬಾದ್: ಇಲ್ಲಿನ ಮೋದಿನಗರ ಪ್ರದೇಶದಲ್ಲಿ ಮಹಿಳಾ ಕಾನ್ಸ್​ಟೇಬಲ್​ವೊಬ್ಬರು​ ಅಂಗಡಿಗೆ ನುಗ್ಗಿ ರಾದ್ಧಾಂತ ಮಾಡಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಖರೀದಿಸಿದ ಸಾಮಗ್ರಿಗೆ ಹಣ ಕೇಳಿದ್ದಕ್ಕೆ ಅಂಗಡಿಯನ್ನೇ ಧ್ವಂಸ ಮಾಡಿದ ಮಹಿಳಾ ಪೊಲೀಸ್

ಅಂಗಡಿಗೆ ಬಂದ ಮಹಿಳೆ, ಕೆಲ ಸಾಮಗ್ರಿಗಳನ್ನು ಪ್ಯಾಕ್ ಮಾಡಲು ಹೇಳಿದ್ದಾಳೆ. ಅದರಂತೆ ಸಿಬ್ಬಂದಿ ಪ್ಯಾಕ್ ಮಾಡಿ, ಹಣ ಕೇಳಿದ್ದಾರೆ. ಹಣ ಕೇಳುತ್ತಿದ್ದಂತೆಯೇ ರೌದ್ರಾವತಾರ ತಾಳಿದ ಮಹಿಳೆ, ಅಂಗಡಿಗೆ ನುಗ್ಗಿ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿದ್ದಾಳೆ.

ಸ್ಥಳೀಯರು ಯಾಕೆಂದು ಪ್ರಶ್ನಿಸಿದಾಗ, ಅಂಗಡಿ ಮಾಲೀಕ ನನ್ನಿಂದ 9 ಸಾವಿರ ರೂಪಾಯಿ ಪಡೆದಿದ್ದ. ಬಳಿಕ ಮತ್ತೆ ಮೂರು ಸಾವಿರ ರೂಪಾಯಿ ಪಡೆದಿದ್ದಾನೆ. ಆತ ನನಗೆ ಒಟ್ಟು 12 ಸಾವಿರ ರೂಪಾಯಿ ಕೊಡಬೇಕು. ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ನೀಡಲಿಲ್ಲ ಎಂದು ಸಬೂಬು ಹೇಳಿದ್ದಾಳೆ. ಅಲ್ಲದೆ, ಹಣ ಕೇಳಲು ಬಂದಾಗ ಆತ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ಎಂದು ಆರೋಪಿಸಿದ್ದಾಳೆ.

ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಂಗಡಿ ಮಾಲೀಕ ರಂಜಿತ್ ಅರೋರಾ, ನಾನು ಯಾವುದೇ ಸಾಲವನ್ನು ಪಡೆದಿಲ್ಲ. ಮಹಿಳಾ ಪೊಲೀಸ್​ ಅಂಗಡಿಗೆ ಬಂದು ಕೆಲ ಸಾಮಗ್ರಿಗಳನ್ನು ಪ್ಯಾಕ್ ಮಾಡಲು ಹೇಳಿದರು. ಬಳಿಕ ಹಣ ಕೇಳಿದಾಗ, ಅವರು ಲಾಠಿಯಿಂದ ಅಂಗಡಿ ಧ್ವಂಸ ಮಾಡಿದರು. ಫ್ರಿಡ್ಜ್​ನಲ್ಲಿದ್ದ ಸರಕುಗಳನ್ನು ಹೊರಗೆಸೆದರು. ಪ್ರಶ್ನಿಸಿದ ನಮ್ಮ ಮೇಲೂ ಅವರು ಲಾಠಿ ಬೀಸಿದರು ಎಂದರು.

ಇದನ್ನೂ ಓದಿ: ಕೆಟ್ಟು ನಿಂತ ಲಾರಿ ದುರಸ್ತಿಯಲ್ಲಿ ನಿರತರಾಗಿದ್ದವರಿಗೆ ಪಿಕಪ್ ಡಿಕ್ಕಿ.. ಮೂವರು ಸಾವು

ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ನೀಡಲು ಹೋದಾಗ, ಪ್ರಕರಣ ದಾಖಲಿಸಿಕೊಳ್ಳದೆ ಅವರು ರಾತ್ರಿಯಿಡೀ ಠಾಣೆಯಲ್ಲೇ ಕೂರಿಸಿಕೊಂಡಿದ್ದರು ಎಂದು ರಂಜಿತ್ ಆರೋಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.