ETV Bharat / bharat

ಟ್ರಾಕ್​ ಮೇಲೆ ನಿಂತು ವಿಡಿಯೋ ಚಿತ್ರೀಕರಣ: ರೈಲು ಡಿಕ್ಕಿ ಹೊಡೆದು ಮೂವರ ಸಾವು - ಸಾಮಾಜಿಕ ಜಾಲತಾಣಕ್ಕಾಗಿ ಅವರು ವಿಡಿಯೋ

ರಾತ್ರಿ ವಿಡಿಯೋ ಮಾಡುತ್ತಿದ್ದ ಮೂವರು ಟ್ರೈನ್​ ಬರುತ್ತಿರುವುದನ್ನು ಗಮನಿಸದೇ ವಿಡಿಯೋ ಮಾಡುವುದರಲ್ಲೇ ಮಗ್ನರಾಗಿದ್ದಾರೆ. ಇದರಿಂದಾಗಿ ಅವರು ಮೃತಪಟ್ಟಿದ್ದಾರೆ.

ಟ್ರಾಕ್​ ಮೇಲೆ ನಿಂತು ವಿಡಿಯೋ ಚಿತ್ರೀಕರಣ; ರೈಲು ಡಿಕ್ಕಿ ಹೊಡೆದ ಪರಿಣಾಮ ಮೂವರ ಸಾವು
video-shooting-while-standing-on-the-track-three-killed-in-train-collision
author img

By

Published : Dec 15, 2022, 1:07 PM IST

ಗಾಜಿಯಾಬಾದ್​: ರೈಲ್ವೆ ಬರುತ್ತಿರುವುದನ್ನು ಗಮನಿಸದೇ ಟ್ರಾಕ್​ನಲ್ಲಿ ನಿಂತು ವಿಡಿಯೋ ಮಾಡುತ್ತಿದ್ದ ಓರ್ವ ಮಹಿಳೆ ಮತ್ತು ಇಬ್ಬರು ಪುರುಷರು ರೈಲು ಡಿಕ್ಕಿಯಿಂದ ಸಾವನ್ನಪ್ಪಿರುವ ಘಟನೆ ಗಾಜಿಯಾಬಾದ್​ನಲ್ಲಿ ನಡೆದಿದೆ.

ಗಾಜಿಯಾಬಾದ್​ನ ಮಸ್ಸೂರಿ ಪ್ರದೇಶದಲ್ಲಿ ಬುಧವಾರ ಈ ಘಟನೆ ನಡೆದಿದೆ. ರಾತ್ರಿ ವಿಡಿಯೋ ಮಾಡುತ್ತಿದ್ದ ಮೂವರು ಟ್ರೈನ್​ ಬರುತ್ತಿರುವುದನ್ನು ಗಮನಿಸದೇ ವಿಡಿಯೋ ಮಾಡುವುದರಲ್ಲೇ ಮಗ್ನರಾಗಿದ್ದಾರೆ. ಇದರಿಂದಾಗಿ ಈ ಅನಾಹುತ ನಡೆದಿದೆ ಎಂದು ರೈಲಿನ ಲೋಕೊ ಪೈಲಟ್​ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಘಟನೆ ನಡೆದ ಸ್ಥಳದಲ್ಲಿ ಮೊಬೈಲ್​ ಕೂಡ ಪತ್ತೆಯಾಗಿದ್ದು, ಅದು ಕೂಡ ಛಿದ್ರವಾಗಿದೆ. ಸಾವನ್ನಪ್ಪಿದವರು ಗುರುತು ಇನ್ನು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಕ್ಕಾಗಿ ಅವರು ವಿಡಿಯೋ ಮಾಡುತ್ತಿರುವುದನ್ನು ಕೆಲವರು ಗಮನಿಸಿದ್ದಾರೆ ಈ ರೀತಿ ಪ್ರಕರಣಗಳ ಹೆಚ್ಚುತ್ತಿದೆ. ರೈಲು ಟ್ರಾಕ್​ ಸೇರಿದಂತೆ ಅಪಾಯಕಾರಿ ಸ್ಥಳದಲ್ಲಿ ವಿಡಿಯೋ, ಸೆಲ್ಪಿ ಹುಚ್ಚಿಗೆ ಜನರು ಬಲಿಯಾಗುತ್ತಿರುವ ಕುರಿತು ವರದಿ ಆಗುತ್ತಲೆ ಇದೆ. ಈ ಬಗ್ಗೆ ಅಧಿಕಾರಿಗಳು ಎಚ್ಚರಿಸಿದರೂ ಪ್ರಕರಣ ಸಂಖ್ಯೆ ಮಾತ್ರ ಏರುತ್ತಲೇ ಇದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ವರನಿಂದ ಯುವತಿ ಮತ್ತು ಆಕೆಯ ತಾಯಿ ಮೇಲೆ ಚಾಕುವಿನಿಂದ ದಾಳಿ.. ಅಮ್ಮ ಸಾವು, ಯುವಕನ ಸ್ಥಿತಿ ಚಿಂತಾಜನಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.