ಕುಲ್ಲು, ಹಿಮಾಚಲ ಪ್ರದೇಶ: ದೇವಾಲಯಕ್ಕೆ ಸಮೀಪದ ಬೆಟ್ಟವೊಂದರಲ್ಲಿ ಮಿಂಚು ಬಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಮಿಂಚು ದಶಕದಲ್ಲಿ ಒಂದು ಬಾರಿಯಾದರೂ ದೇವಾಲಯಕ್ಕೆ ಸಮೀಪದಲ್ಲಿ ಮಿಂಚು ಕಾಣಿಸಿಕೊಳ್ಳುತ್ತದೆ ಎಂಬ ಪ್ರತೀತಿ ಇದೆ.
ಈ ಮಿಂಚು ಕಾಣಿಸಿಕೊಂಡಿರುವುದು ಹಿಮಾಚಲ ಪ್ರದೇಶದ ಕುಲ್ಲು ಕಣಿವೆಯ ಬಿಜಲಿ ಮಹಾದೇವ ದೇವಾಲಯದ ಸಮೀಪದಲ್ಲಿ ಬೆಟ್ಟದಲ್ಲಿ. ಸಮುದ್ರ ಮಟ್ಟದಿಂದ ಸರಿಸುಮಾರು 2,460 ಮೀಟರ್ ಎತ್ತರದಲ್ಲಿ ಈ ದೇವಾಲಯವಿದ್ದು, ಈ ಬಾರಿಯ ಮಿಂಚಿಗೆ ದೇವಾಲಯದ ಆವರಣದ ಶಿವಲಿಂಗ ಒಡೆದು ಹೋಗಿದೆ. ಘಟನೆಯ ನಂತರ ಒಡೆದು ಹೋದ ಶಿವಲಿಂಗಕ್ಕೆ ಬೆಣ್ಣೆ ಹಚ್ಚಲಾಗಿದೆ.
ಈ ದೇವಾಲಯದ ಬಗ್ಗೆ ಇನ್ನಷ್ಟು..
ಈ ದೇವಾಲಯ ಬಿಯಾಸ್ ನದಿಯ ಬಳಿಯಿದ್ದು, ಕುಲ್ಲು ನಗರದಿಂದ 14 ಕಿಲೋಮೀಟರ್ ದೂರದಲ್ಲಿದೆ. ಮೂರು ಕಿಲೋಮೀಟರ್ ದೂರದಿಂದ ಟ್ರೆಕ್ಕಿಂಗ್ ನಡೆಸಲು ಅವಕಾಶವಿದೆ. ಈ ದೇವಾಲಯದಿಂದ ಕುಲ್ಲು ಮತ್ತು ಪಾರ್ವತಿ ಕಣಿವೆಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.