ನವ ದೆಹಲಿ: ಮದ್ಯ ಸೇವಿಸಿ ವಾಹನ ಚಾಲನೆ ಮಾಡುವ ಅಪಾಯಗಳ ವಿರುದ್ಧ ಜಾಗೃತಿ ಮೂಡಿಸಲು ಮುಂದಾದ ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯನ್ನು ಪ್ರತಿನಿಧಿಸುವ ಐವರು ಯೋಧರನ್ನೊಳಗೊಂಡ ತಂಡವು ಕಠಿಣವಾದ ಪರ್ವತಾರೋಹಣ ಮಾಡುವ ಮೂಲಕ ವಿಶ್ವ ದಾಖಲೆ ಮಾಡಿದೆ.
ಭಾರತದ ಉತ್ತರ ರಾಜ್ಯಗಳಲ್ಲಿರುವ ಎತ್ತರದ ಪರ್ವತಗಳಲ್ಲಿ ಪ್ರಯಾಣಿಸುವ ಜೊತೆಗೆ ಗಡಿ ರಸ್ತೆಗಳು, ಅಲ್ಲಿನ ಮೂಲಸೌಕರ್ಯ ವೀಕ್ಷಣೆ ಮತ್ತು ಅಲ್ಲಿರುವ ಭಾರತೀಯ ಸಶಸ್ತ್ರ ಪಡೆಗಳನ್ನು ಗೌರವಿಸುತ್ತಾ, ಜಾಕ್ ಡೇನಿಯಲ್‌ರ ದಿ ಹೈ ಪಾಸ್ ಸವಾಲು ಮೆಟ್ಟಿ ನಿಂತು ಅಧಿರಾಜ್ ಸಿಂಗ್ ಮಾರ್ಗದರ್ಶನದಲ್ಲಿ ಈ ತಂಡ ಸಂಚಾರ ಪ್ರಾರಂಭಿಸಿತ್ತು.
ತಂಡದಲ್ಲಿ ಅಧಿರಾಜ್ ಸಿಂಗ್- ಟೀಮ್ ಲೀಡರ್, ಕ್ಯಾಪ್ಟನ್ ಅಲೋಕ್ ಚಂದೋಲಾ- ಮಾಜಿ ಸೈನಿಕ, ಕೋಲ್ ರವಿ ರಾಜನ್, ಕ್ಯಾಪ್ಟನ್ ಅರುಣ್ ಜ್ಯೋತಿ- ಮಾಜಿ ಜಲಾಂತರ್ಗಾಮಿ ಮತ್ತು ಗ್ರೂಪ್ ಕ್ಯಾಪ್ಟನ್ ರಾಮೇಶ್ವರ್ ಸಿಂಗ್ ತಹ್ಲಾನ್ ಪಾಲ್ಗೊಂಡಿದ್ದರು.
ಇದನ್ನೂ ಓದಿ: ಅಗ್ನಿಪಥ್ಗೆ ಹಳ್ಳಿಮಕ್ಕಳನ್ನು ಕಳಿಸಲು ಪಣ.. ಮಾಜಿ ಸೈನಿಕನಿಂದ ಉಚಿತ ತರಬೇತಿ ಶಿಬಿರ ಆರಂಭ
ರಾಷ್ಟ್ರೀಯ ಯುದ್ಧ ಸ್ಮಾರಕದಿಂದ ಸೆಪ್ಟೆಂಬರ್ 10 ರಂದು ಪ್ರಾರಂಭವಾದ ಈ ಪ್ರಯಾಣ 10 ನೇ ಅಕ್ಟೋಬರ್ 2022 ರಂದು ಕೊನೆಗೊಂಡಿತು. 31 ದಿನಗಳಲ್ಲಿ 57 ಹೈ ಪಾಸ್‌ಗಳಲ್ಲಿ ಪ್ರಯಾಣಿಸಿ, 'ಡೋಂಟ್ ಡ್ರಿಂಕ್ ಅಂಡ್ ಡ್ರೈವ್' ಎಂಬ ಸಂದೇಶದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಇದನ್ನೂ ಓದಿ: ಸೈನಿಕ ತರಬೇತಿ ಕೇಂದ್ರಕ್ಕೆ ಸೈಕಲ್ ಮೂಲಕ ಕಾರ್ಗಿಲ್‌ಗೆ ತೆರಳಿ ಪವಿತ್ರ ಮಣ್ಣು ತಂದ ಯೋಧ
ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಅಧಿರಾಜ್, ನಮ್ಮ ಸಾಹಸಕ್ಕೆ ಬೆಂಬಲ ನೀಡಿದ ಜ್ಯಾಕ್ ಡೇನಿಯಲ್ ಅವರಿಗೆ ನಾವು ಕೃತಜ್ಞರು. ಹೈ ಪಾಸ್ ಚಾಲೆಂಜ್ನಲ್ಲಿ ಭಾಗವಹಿಸುವವರು ಕಠಿಣವಾಗಿ ಸವಾರಿ ಮಾಡುವುದು, ಎತ್ತರಕ್ಕೇರಲು ಮತ್ತು ವೇಗವಾಗಿ ಸವಾರಿ ಮಾಡಲು ಇಷ್ಟಪಡುತ್ತಾರೆ. ಜೊತೆಗೆ ಈ ವೇದಿಕೆಯನ್ನು ಬಳಸಿಕೊಂಡು ಕುಡಿದು ವಾಹನ ಚಾಲನೆ ಮಾಡಬಾರದು ಎಂಬ ಸಂದೇಶವನ್ನು ಮೂಡಿಸಲಾಗುತ್ತಿದೆ ಎಂದು ಹೇಳಿದರು.