ETV Bharat / bharat

ಗುರುತಿನ ಪುರಾವೆಯಾಗಿ 'ಆಧಾರ್' ಸ್ವೀಕರಿಸುವ ಮೊದಲು ನೈಜತೆ ಪರಿಶೀಲಿಸಿ: ಯುಐಡಿಎಐ ಮಹತ್ವದ ಸಂದೇಶ

ಆಧಾರ್​ ಕಾರ್ಡ್ ಬಳಕೆಗೆ ಮೊದಲು ಪರಿಶೀಲನೆ ಅಗತ್ಯ ಒತ್ತಿ ಹೇಳುವ ಮೂಲಕ ಯುಐಡಿಎಐ, ಈ ಸಂಬಂಧ ಅಗತ್ಯ ನಿರ್ದೇಶನವನ್ನು ಆಧಾರ್​ ಕಾರ್ಡ್​ ಸ್ವೀಕರಿಸುವ ಸಂಸ್ಥೆಗಳಿಗೆ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.

verify-aadhaar-before-accepting-it-as-a-proof-of-identity-uidai
ಗುರುತಿನ ಪುರಾವೆಯಾಗಿ 'ಆಧಾರ್' ಸ್ವೀಕರಿಸುವ ಮೊದಲು ನೈಜತೆ ಪರಿಶೀಲಿಸಿ: ಯುಐಡಿಎಐ ಮಹತ್ವದ ಸಂದೇಶ
author img

By

Published : Nov 24, 2022, 7:49 PM IST

ನವದೆಹಲಿ: ಆಧಾರ್ ಕಾರ್ಡ್​​ ಸಂಬಂಧ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಮಹತ್ವದ ಪ್ರಕಟಣೆ ಹೊರಡಿಸಿದೆ. ಆಧಾರ್​ ಕಾರ್ಡ್​ ಸ್ವೀಕರಿಸುವ ಸಂಸ್ಥೆಗಳು ಮೊದಲಿಗೆ ಅದರ ನೈಜತೆ ಪರಿಶೀಲಿಸಬೇಕು ಎಂದು ಯುಐಡಿಎಐ ತಿಳಿಸಿದೆ.

ವ್ಯಕ್ತಿಯ ಗುರುತನ್ನು ಸ್ಥಾಪಿಸಲು ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಆಧಾರ್ ಕಾರ್ಡ್​​ ಸ್ವೀಕರಿಸುವ ಮೊದಲು ಪರಿಶೀಲನೆ ಅಗತ್ಯವಾಗಿದೆ. ಆಧಾರ್ ಹೊಂದಿರುವವರ ಒಪ್ಪಿಗೆಯನ್ನು ಅನುಸರಿಸಿ ಆಧಾರ್ ಸಂಖ್ಯೆಯ ಪರಿಶೀಲನೆ ಮಾಡಬೇಕು. ವ್ಯಕ್ತಿಯೊಬ್ಬರು ಪ್ರಸ್ತುತಪಡಿಸಿದ ಆಧಾರ್‌ನ ಯಾವುದೇ ರೂಪದ (ಆಧಾರ್ ಪತ್ರ, ಇ-ಆಧಾರ್, ಆಧಾರ್ ಪಿವಿಸಿ ಕಾರ್ಡ್ ಮತ್ತು ಎಂ-ಆಧಾರ್) ನೈಜತೆ ಪರಿಶೀಲನೆ ಸರಿಯಾದ ಹೆಜ್ಜೆಯಾಗಿದೆ ಎಂದು ಯುಐಡಿಎಐ ಹೇಳಿದೆ.

ಆಧಾರ್‌ ಕಾರ್ಡ್​ನ ನೈಜತೆ ಪರಿಶೀಲನೆಯಿಂದ ಅಕ್ರಮ ಬಳಕೆ ಮತ್ತು ಯಾವುದೇ ಸಂಭವನೀಯ ದುರುಪಯೋಗದಲ್ಲಿ ತೊಡಗುವುದರಿಂದ ಸಮಾಜ ವಿರೋಧಿ ಶಕ್ತಿಗಳಿಗೆ ಕಡಿವಾಣವಾಗಲಿದೆ. ಅಲ್ಲದೇ, ಇದು ಬಳಕೆಯ ಉಪಯುಕ್ತತೆ ಉತ್ತೇಜಿಸುತ್ತದೆ ಮತ್ತು ಯಾವುದೇ 12 ಅಂಕಿಯ ಸಂಖ್ಯೆಯು ಕಾರ್ಡ್​ ಆಧಾರ್ ಆಗಿರುವುದಿಲ್ಲ ಎಂದು ಸಲಹೆ ನೀಡಿದೆ.

ಆಧಾರ್ ದಾಖಲೆಗಳ ಟ್ಯಾಂಪರಿಂಗ್ ಶಿಕ್ಷಾರ್ಹ ಅಪರಾಧ: ಆಫ್‌ಲೈನ್ ಪರಿಶೀಲನೆಯ ಮೂಲಕ ಆಧಾರ್ ದಾಖಲೆಗಳ ತಿರುಚುವುದನ್ನು (ಟ್ಯಾಂಪರಿಂಗ್) ಕಂಡು ಹಿಡಿಯಬಹುದು. ಆಧಾರ್​ ಟ್ಯಾಂಪರಿಂಗ್ ಶಿಕ್ಷಾರ್ಹ ಅಪರಾಧವಾಗಿದ್ದು, ಆಧಾರ್ ಕಾಯಿದೆಯ ಸೆಕ್ಷನ್ 35ರ ಅಡಿ ದಂಡಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಯುಐಡಿಎಐ ಹೇಳಿದೆ. ಇದೇ ವೇಳೆ, ಆಧಾರ್​ ಕಾರ್ಡ್ ಬಳಕೆಗೆ ಮೊದಲು ಪರಿಶೀಲನೆಯ ಅಗತ್ಯ ಒತ್ತಿಹೇಳುವ ಮೂಲಕ ಯುಐಡಿಎಐ, ಈ ಸಂಬಂಧ ಅಗತ್ಯ ನಿರ್ದೇಶನ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ.

ಇದನ್ನೂ ಓದಿ: ಆಧಾರ್ ಕಳೆದುಕೊಂಡಿದ್ದ ಹುಬ್ಬಳ್ಳಿಯ ಯುವಕ.. ಶಂಕಿತನ ಕೈಗೆ ಸಿಕ್ಕು​ ದುರುಪಯೋಗ: ಪೋಷಕರ ಸ್ಪಷ್ಟನೆ

ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್​ ಸಲ್ಲಿಸಿದಾಗಲೆಲ್ಲ, ಆಧಾರ್​ನ ಗುರುತಿನ ದಾಖಲೆಯಾಗಿ ಬಳಸಿಕೊಂಡು ಸಂಬಂಧಪಟ್ಟ ಘಟಕದಿಂದ ನಿವಾಸಿಯನ್ನಾಗಿ ಪರಿಗಣಿಸಲಾಗುತ್ತದೆ ಎಂದಿರುವ ಯುಐಡಿಎಐ, ಈ ಘಟಕಗಳನ್ನು ಉದ್ದೇಶಿಸಿ ಸುತ್ತೋಲೆ ಹೊರಡಿಸಿದೆ. ಆಧಾರ್​ ಪರಿಶೀಲನೆ ಮಾಡಲು ಅಧಿಕಾರ ಮತ್ತು ಪರಿಶೀಲನೆಯ ಅಗತ್ಯ ಹಾಗೂ ಅನುಸರಿಸಬೇಕಾದ ನಿಯಮಗಳ ಬಗ್ಗೆಯೂ ಯುಐಡಿಎಐ ತಿಳಿಸಿದೆ.

ಕ್ಯೂಆರ್​ ಕೋಡ್ ಬಳಸಿ ಆಧಾರ್​ ಪರಿಶೀಲಿಸಿ: ಯಾವುದೇ ಆಧಾರ್​ ಅನ್ನು ಕ್ಯೂಆರ್​ ಕೋಡ್ ಬಳಸಿಕೊಂಡು ಪರಿಶೀಲಿಸಬಹುದು. ಆಧಾರ್ ಪತ್ರ (Aadhaar letter), ಇ-ಆಧಾರ್ (e-Aadhaar), ಆಧಾರ್ ಪಿವಿಸಿ ಕಾರ್ಡ್ (Aadhaar PVC card) ಮತ್ತು ಎಂ - ಆಧಾರ್ (m-Aadhaar) ಸೇರಿ ಎಲ್ಲ ಪ್ರಕಾರದ ಆಧಾರ್​ ಕಾರ್ಡ್​ ಅನ್ನೂ ಎಂಆಧಾರ್​ ಅಪ್ಲಿಕೇಶನ್ (mAadhaar App) ಅಥವಾ ಆಧಾರ್ ಕ್ಯೂಆರ್​ ಕೋಡ್ ಸ್ಕ್ಯಾನರ್ (Aadhaar QR code Scanner) ಬಳಸಿಕೊಂಡು ಪರಿಶೀಲನೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದೆ.

ಕ್ಯೂಆರ್​ ಕೋಡ್ ಸ್ಕ್ಯಾನರ್ ಆಂಡ್ರಾಯ್ಡ್ ಮತ್ತು ಐಒಎಸ್ ಆಧಾರಿತ ಮೊಬೈಲ್ ಫೋನ್‌ಗಳು ಮತ್ತು ವಿಂಡೋ ಆಧಾರಿತ ಅಪ್ಲಿಕೇಶನ್‌ಗಳಲ್ಲಿ ಉಚಿತವಾಗಿ ಲಭ್ಯವಿದೆ. ನಿವಾಸಿಗಳು ತಮ್ಮ ಆಧಾರ್​ ಅನ್ನು ಕಾಗದ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸ್ತುತಪಡಿಸುವ ಮೂಲಕ ತಮ್ಮ ಗುರುತು ಸ್ಥಾಪಿಸಲು ಆಧಾರ್ ಸಂಖ್ಯೆಯನ್ನು ಸ್ವಯಂ ಪ್ರೇರಣೆಯಿಂದ ಬಳಸಬಹುದು ಎಂದು ಯುಐಡಿಎಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ನಕಲಿ ಆಧಾರ್ ನೀಡಿ ಮೊಬೈಲ್​ ರಿಪೇರಿ ತರಬೇತಿಗೆ ಸೇರಿಕೊಂಡಿದ್ದ ಶಂಕಿತ: ಮೊಬೈಲ್ ಅಂಗಡಿ ಮಾಲೀಕರ ಸಂದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.