ಲಖನೌ (ಉತ್ತರ ಪ್ರದೇಶ) : 18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಮೊದಲ ಬಾರಿಗೆ ಆಧಾರ್ ಕಾರ್ಡ್ ಮಾಡಲು ಬಯಸುವವರನ್ನು ಈಗ ಭೌತಿಕ ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಘೋಷಿಸಿದೆ ಅಂತಾ ಯುಐಡಿಎಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
"18 ವರ್ಷಗಳ ನಂತರ ತಮ್ಮ ಆಧಾರ್ ಕಾರ್ಡ್ ಪಡೆಯಲು ಬಯಸುವವರಿಗೆ ಪಾಸ್‌ಪೋರ್ಟ್ ತರಹದ ಪರಿಶೀಲನಾ ವ್ಯವಸ್ಥೆಯು ಜಾರಿಯಲ್ಲಿರುತ್ತದೆ" ರಾಜ್ಯ ಸರ್ಕಾರದ ಒಪ್ಪಿಗೆಯೊಂದಿಗೆ ಈ ನಿಯಮ ಜಾರಿಗೆ ತರಲಾಗಿದೆ. ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರವು ಜಿಲ್ಲಾ ಮತ್ತು ಉಪವಿಭಾಗದ ಮಟ್ಟದಲ್ಲಿ ನೋಡಲ್ ಅಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ನೇಮಿಸುತ್ತದೆ. ಆಧಾರ್ ಸೌಲಭ್ಯವು ಪ್ರತಿ ಜಿಲ್ಲೆಯ ಮುಖ್ಯ ಅಂಚೆ ಕಚೇರಿ ಮತ್ತು ಯುಐಡಿಎಐ ಗುರುತಿಸಿರುವ ಇತರ ಆಧಾರ್ ಕೇಂದ್ರಗಳು ಸೇರಿದಂತೆ ಆಯ್ದ ಕೇಂದ್ರಗಳಲ್ಲಿ ಲಭ್ಯವಿರುತ್ತದೆ" ಎಂದು ಯುಐಡಿಎಐ ಅಧಿಕಾರಿಯೊಬ್ಬರು ತಿಳಿಸಿದರು.
ಈ ವರ್ಗದ ಜನರ ಎಲ್ಲ ಆಧಾರ್ ವಿನಂತಿಗಳು ಡೇಟಾ ಗುಣಮಟ್ಟ ಪರಿಶೀಲನೆಗಳ ಮೂಲಕ ಆಗುತ್ತದೆ. ಸೇವಾ ಪೋರ್ಟಲ್ ಮೂಲಕ ಪರಿಶೀಲನೆಗಾಗಿ ರೂಟ್ ಮಾಡಲಾಗುತ್ತದೆ. ಸೇವಾ ಪೋರ್ಟಲ್‌ನಲ್ಲಿ ಸ್ವೀಕರಿಸಿದ ಎಲ್ಲಾ ವಿನಂತಿಗಳ ಪರಿಶೀಲನೆಯನ್ನು ಉಪ - ವಿಭಾಗೀಯ ಮ್ಯಾಜಿಸ್ಟ್ರೇಟ್‌ಗಳು ಖಚಿತಪಡಿಸುತ್ತಾರೆ ಮತ್ತು 180 ದಿನಗಳ ಕ್ಲಿಯರೆನ್ಸ್‌ನಲ್ಲಿ ಆಧಾರ್ ಅನ್ನು ರಚಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ.
ಯುಐಡಿಎಐನ ಉಪ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾ ಹೇಳಿಕೆಯಲ್ಲಿ, ಹೊಸ ನಿರ್ದೇಶನಗಳು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೊದಲ ಬಾರಿಗೆ ಆಧಾರ್ ಅನ್ನು ಪಡೆಯುವವರಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಒಮ್ಮೆ ಅವರು ಆಧಾರ್ ಕಾರ್ಡ್ ಮಾಡಿಸಿದ ನಂತರ ಅವರು ಸಾಮಾನ್ಯ ಪ್ರಕ್ರಿಯೆಗಳ ಮೂಲಕ ಅದನ್ನು ನವೀಕರಿಸಬಹುದು ಎಂದು ಹೇಳಿದರು.
ಇದನ್ನೂ ಓದಿ : ಆಧಾರ್, ಪಾನ್ ಕಾರ್ಡ್, ಪಾಸ್‌ಪೋರ್ಟ್ ಎಲ್ಲವೂ ಅಕ್ರಮ : ಬೆಂಗಳೂರಿನಲ್ಲಿ ನೇಪಾಳಿ ಪ್ರಜೆ ಬಂಧನ
ಉತ್ತರ ಪ್ರದೇಶದಲ್ಲಿ ಇದುವರೆಗೆ 18 ವರ್ಷ ಮೇಲ್ಪಟ್ಟ 16.55 ಕೋಟಿ ಜನರು ಆಧಾರ್ ಕಾರ್ಡ್ ಪಡೆದಿದ್ದಾರೆ. ಪ್ರತಿ ತಿಂಗಳು 18 ವರ್ಷ ಮೇಲ್ಪಟ್ಟವರ 13,246 ಆಧಾರ್ ನಾಮ ನಿರ್ದೇಶನಗಳನ್ನು ಪ್ರಕ್ರಿಯೆಗೊಳಿಸಲಾಗುತ್ತಿದೆ. ಪ್ರಸ್ತುತ 14,095 ಆಧಾರ್ ನಾಮ ನಿರ್ದೇಶನ ಮತ್ತು ನವೀಕರಣ ಯಂತ್ರಗಳ ಮೂಲಕ ಆಧಾರ್ ಕೆಲಸ ಮಾಡಲಾಗುತ್ತಿದೆ. ದೇಶಾದ್ಯಂತ ಈಗ ಎಲ್ಲ ಕೆಲಸಗಳಿಗೂ ಆಧಾರ ಕಡ್ಡಾಯ ಮಾಡಿರುವುದು ನಮಗೆಲ್ಲ ಗೊತ್ತೇ ಇದೆ.
ಇದನ್ನೂ ಓದಿ : ಆಧಾರ್ ಜೊತೆ ವೋಟರ್ ಐಡಿ ಲಿಂಕ್ : ಹೈಕೋರ್ಟ್ಗೆ ಹೋಗುವಂತೆ ಸುರ್ಜೆವಾಲ್ಗೆ ಸುಪ್ರೀಂ ಸೂಚನೆ