ETV Bharat / bharat

ಸಾವರ್ಕರ್​ ಕ್ಷಮಾಪಣೆಯನ್ನ ಟೀಕಿಸಿದ ರಾಹುಲ್​ ಗಾಂಧಿ: ಕೈ ನಾಯಕನ ವಿರುದ್ಧ ದೂರು ದಾಖಲು

ವೀರ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆದು ಜೈಲಿನಿಂದ ಹೊರಬಂದು ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂದು ರಾಹುಲ್​ ಗಾಂಧಿ ಟೀಕಿಸಿದ್ದಾರೆ. ಇದರ ವಿರುದ್ಧ ಸಾವರ್ಕರ್​ ಮೊಮ್ಮಗ ದೂರು ನೀಡಿದ್ದಾರೆ.

veer-savarkar-helped-the-british-alleges-rahul-gandhi
ಸಾವರ್ಕರ್​ ಕ್ಷಮಾಪಣೆ ಟೀಕಿಸಿದ ರಾಹುಲ್​ ಗಾಂಧಿ
author img

By

Published : Nov 17, 2022, 7:18 PM IST

ಅಕೋಲ (ಮಹಾರಾಷ್ಟ್ರ): ಸ್ವಾತಂತ್ರ್ಯವೀರ ಸಾವರ್ಕರ್​ ವಿರುದ್ಧ ಟೀಕಿಸುವ ಭರದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮತ್ತೆ ಪೇಚಿಗೆ ಸಿಲುಕಿದ್ದಾರೆ. ಸಾವರ್ಕರ್​ ಬ್ರಿಟಿಷರಲ್ಲಿ ಕ್ಷಮೆಯಾಚಿಸುವ ಪತ್ರಕ್ಕೆ ಸಹಿ ಹಾಕಿ, ಮಹಾತ್ಮ ಗಾಂಧಿ, ಸರ್ದಾರ್​ ವಲ್ಲಭಬಾಯಿ ಪಟೇಲ್​, ಜವಾಹರ್​ಲಾಲ್​ ಅವರಂತಹ ನಾಯಕರಿಗೆ ದ್ರೋಹ ಬಗೆದರು ಎಂದು ಆರೋಪಿಸಿದ್ದಾರೆ. ಇದರ ವಿರುದ್ಧ ಸಾವರ್ಕರ್​ ಮೊಮ್ಮಗ ರಂಜಿತ್​ ಸಾವರ್ಕರ್​ ದೂರು ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ಸಾಗುತ್ತಿರುವ ಭಾರತ್​ ಜೋಡೋ ಪಾದಯಾತ್ರೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್​ ಗಾಂಧಿ, ಸಾವರ್ಕರ್​ ಬಗ್ಗೆ ಮಾಜಿ ಸಿಎಂ, ಶಿವಸೇನೆಯ ಉದ್ಧವ್​ ಠಾಕ್ರೆ ಹೊಂದಿರುವ ನಿಲುವನ್ನು ಟೀಕಿಸಿದ್ದರು. ಈ ವೇಳೆ, ಪತ್ರವೊಂದನ್ನು ಪ್ರದರ್ಶಿಸಿ ಇದು ಸಾವರ್ಕರ್​ ಬ್ರಿಟಿಷರ ಬಳಿ ಕ್ಷಮೆಯಾಚಿಸಿದ ಪತ್ರ ಎಂದು ತೋರಿಸಿದರು.

ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಪತ್ರದಲ್ಲಿ "ನಿಮ್ಮ ಅತ್ಯಂತ ವಿಧೇಯ ಸೇವಕರಾಗಿ ಉಳಿಯಲು ನಾನು ಬೇಡಿಕೊಳ್ಳುತ್ತೇನೆ" ಎಂದು ಬರೆದು ಸಹಿ ಹಾಕಿದ್ದರು. ಬ್ರಿಟಿಷರಿಗೆ ಹೆದರಿದ ಸಾವರ್ಕರ್ ಅವರು ಈ ಪತ್ರ ಬರೆದಿದ್ದರು. ಇದು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಸೇರಿದಂತೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಚಳವಳಿಗಾರರಿಗೆ ಮೋಸ ಮಾಡಿದರು ಎಂದು ಹೇಳಿದರು.

ಹಿಂದುತ್ವವಾಗಿ ವಿನಾಯಕ ದಾಮೋದರ್ ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದರು. ಅಂಡಮಾನ್ ಜೈಲಿನಲ್ಲಿದ್ದಾಗ ಕ್ಷಮಾಪಣೆ ಪತ್ರ ಬರೆದು ಬಿಡುಗಡೆಗೆ ಕೋರಿದ್ದರು ಎಂದು ಹೇಳಿದರು.

ಸಾವರ್ಕರ್​ ಮೊಮ್ಮಗ ಕಿಡಿ, ದೂರು ದಾಖಲು: ರಾಹುಲ್​ ಗಾಂಧಿ ಅವರ ಈ ಹೇಳಿಕೆಗೆ ಕಿಡಿಕಾರಿರುವ ಸಾವರ್ಕರ್ ಅವರ ಮೊಮ್ಮಗ ರಂಜಿತ್​ ಸಾವರ್ಕರ್, ಕಾಂಗ್ರೆಸ್ ನಾಯಕನ ವಿರುದ್ಧ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

"ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಾವರ್ಕರ್ ಅವರನ್ನು ಅವಮಾನಿಸಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ. ವೋಟ್​​ ಬ್ಯಾಂಕ್​ ರಾಜಕಾರಣಕ್ಕಾಗಿ ಸ್ವಾತಂತ್ರ್ಯ ವೀರನನ್ನು ಅವಮಾನಿಸಿದ್ದರ ವಿರುದ್ಧ ದೂರು ನೀಡಿದ್ದೇನೆ" ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಓದಿ: ಅನಸ್ತೇಷಿಯಾ ನೀಡದೇ ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ: ವೈದ್ಯರ ಕ್ರೂರ ವರ್ತನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.