ETV Bharat / bharat

ಬಣ್ಣದಲ್ಲಿದೆ ಪ್ರೀತಿಯ ಪರವಶತೆ: ಪ್ರೇಮದ ಸಂಕೇತವೇ 'ಕೆಂಪು'.. ಯಾಕೆ ಗೊತ್ತಾ?

ಇಂದು ಫೆಬ್ರವರಿ 14 ಪ್ರೇಮಿಗಳ ದಿನ. ನೀವು ಪ್ರೀತಿ ನಿವೇದನೆ ಮಾಡಲು ಕಾಯುತ್ತಿದ್ದೀರಾ? ಹಾಗಿದ್ದಲ್ಲಿ ಈ ದಿನದ ಪರಿಪೂರ್ಣತೆಗಾಗಿ ನಿಮ್ಮ ಆಯ್ಕೆ ಕೆಂಪು ಬಣ್ಣವಾಗಿರಲಿ.

Valentine's Day 2023
ಪ್ರೇಮಿಗಳ ದಿನ 2023
author img

By

Published : Feb 14, 2023, 11:02 AM IST

ನೀವು ಯಾರನ್ನಾದರೂ ಪ್ರೀತಿಸುತ್ತಿದ್ದೀರಾ? ಪ್ರಪೋಸ್​ ಮಾಡಲು ಕಾಯುತ್ತಿದ್ದೀರಾ? ಹಾಗಿದ್ದಲ್ಲಿ ಇಂದಿಗಿಂತ ಒಳ್ಳೆಯ ದಿನ ಮತ್ತೊಂದಿಲ್ಲ. ನಿಮ್ಮ ಪ್ರೇಮಿಗಳಿಗೆ ಕೆಂಪು ಗುಲಾಬಿ ನೀಡಿ ಪ್ರೇಮ ನಿವೇದನೆ ಹೇಳಿಕೊಳ್ಳಬಹುದು. ಮಂಡಿಯೂರಿ ಕೂತು ರೆಡ್​ ರೋಸ್​ ನೀಡಿ 'ಲವ್​ ಯೂ ಡಿಯರ್'​ ಅಂತ ಮುಕ್ತವಾಗಿ ಹೇಳಬಹುದು.

ಹೌದು, ಫೆಬ್ರವರಿ 14 ಪ್ರೇಮಿಗಳಿಗೆ ಸ್ಪೆಷಲ್​ ಡೇ. ಒಬ್ಬರ ಮೇಲೆ ಮೂಡುವ ನಿಷ್ಕಲ್ಮಶ ಪ್ರೀತಿಯನ್ನು ವ್ಯಕ್ತಪಡಿಸುವ ದಿನ. ಹಾಗಿದ್ದಲ್ಲಿ ವ್ಯಾಲೆಂಟೈನ್ಸ್​ ದಿನಕ್ಕೆ ನಿಮ್ಮ ಪರಿಪೂರ್ಣ ಆಯ್ಕೆ ಕೆಂಪು ಬಣ್ಣವೇ ಆಗಿರಲಿ. ಏಕೆಂದರೆ ಕೆಂಪು ಬಣ್ಣವು ನಿಮ್ಮ ಮನಸ್ಸಿನಲ್ಲಿ ಬಲವಾದ ಭಾವನೆಯನ್ನು ಉಂಟು ಮಾಡುತ್ತದೆ. ಜೊತೆಗೆ ಇದು ಪ್ರೀತಿಗೆ ಅತ್ಯಂತ ಆಪ್ತ ಬಣ್ಣವಾಗಿದೆ ಮತ್ತು ಪ್ರೀತಿಯ ಸಂಕೇತವಾಗಿದೆ.

ಕೆಂಪು ಬಣ್ಣದ ವಿಶೇಷತೆಯೇನು?: ಕೆಂಪು ಎಂಬುದು ಗುಲಾಬಿಗಳ ಬಣ್ಣವಾಗಿದೆ. ಶತಮಾನಗಳಿಂದಲೂ ಪ್ರೇಮಿಗಳ ದಿನದಂದು ಪ್ರೀತಿಗೆ ಇದೇ ಬಣ್ಣವನ್ನು ಆಯ್ಕೆ ಮಾಡಲಾಗಿದೆ. ಇಂದು ಯಾವುದೇ ವಿಷಯವನ್ನು ಪ್ರಸ್ತುತ ಪಡಿಸಲು, ಪ್ರೀತಿ ಮತ್ತು ಪ್ರಯಣದ ಬಗ್ಗೆ ಹೇಳಿಕೊಳ್ಳಲು ಇದೇ ಬಣ್ಣ ಸೂಕ್ತವಾಗಿದೆ. ಆದರೆ ಕೆಂಪು ಬಣ್ಣವನ್ನು ಪ್ರೀತಿಯ ಬಣ್ಣವಾಗಿ ಯಾಕೆ ಪರಿಗಣಿಸಲಾಗುತ್ತದೆ. ಇಲ್ಲಿದೆ ನೋಡಿ ಕೆಲವೊಂದು ಕಾರಣಗಳು.

ಇದನ್ನೂ ಓದಿ: ಪ್ರೇಮಿಗಳ ದಿನ 2023: ರಾಧೆಯ ಪ್ರೀತಿಗೆ ಅದರ ರೀತಿಗೆ ಶ್ರೀಕೃಷ್ಣನೋರ್ವನೇ ಸರಿಸಾಟಿ

ಮೊದಲನೆಯದಾಗಿ, ಕೆಂಪು ಹೃದಯಕ್ಕೆ ಬಹಳಷ್ಟು ಹತ್ತಿರವಾಗಿದೆ. ಇದು ಪ್ರೀತಿ ಮತ್ತು ಭಾವನೆಯ ಕೇಂದ್ರವಾಗಿದೆ. ಹೃದಯವನ್ನು ಹೆಚ್ಚಾಗಿ ಪ್ರಕಾಶಮಾನವಾದ ಕೆಂಪು ಬಣ್ಣದಿಂದಲೇ ಚಿತ್ರಿಸಲಾಗುತ್ತದೆ. ಇದು ಪ್ರೀತಿಯನ್ನು ಮತ್ತಷ್ಟು ಪ್ರಬಲಗೊಳಿಸಲು ಸಹಾಯಕವಾಗಿದೆ. ಜೊತೆಗೆ ಇನ್ನಷ್ಟು ಬಯಕೆಗಳು ಮತ್ತು ಉತ್ಸಾಹದೊಂದಿಗಿರಲು ಕೆಂಪು ಬಣ್ಣಕ್ಕೆ ಪ್ರಾಧಾನ್ಯತೆ ಹೆಚ್ಚಿದೆ. ಅಲ್ಲದೇ ಕೆಂಪು ಆತ್ಮವಿಶ್ವಾಸದ ಬಣ್ಣವಾಗಿದ್ದು, ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅದು ಪ್ರೇರೇಪಿಸುತ್ತದೆ. ನಾವು ಕೆಂಪು ಬಣ್ಣವನ್ನು ನೋಡಿದಾಗ ನಮ್ಮಲ್ಲೊಂದು ಭಾವನೆ ತನ್ನಿಂತಾನೇ ಮೂಡುತ್ತದೆ. ಅದಕ್ಕಾಗಿಯೇ ಪ್ರೇಮಿಗಳ ದಿನದಂದು ಪ್ರೀತಿಯನ್ನು ವ್ಯಕ್ತಪಡಿಸಲು ಕೆಂಪು ಪರಿಪೂರ್ಣ ಬಣ್ಣವಾಗಿದೆ.

ಅನೇಕ ಸಂಸ್ಕೃತಿಗಳಲ್ಲಿ, ಕೆಂಪು ಬಣ್ಣವನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಅದನ್ನು ಧರಿಸಿದವರಿಗೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗಿದೆ. ಪ್ರೇಮಿಗಳ ದಿನಕ್ಕೂ ಇದು ವಿಶೇಷವಾಗಿ ಸತ್ಯವಾಗಿದೆ. ಪ್ರೇಮಿಗಳಿಗೆ ಕೆಂಪು ಪ್ರೀತಿ ಮತ್ತು ಸಂತೋಷವನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಐತಿಹಾಸಿಕವಾಗಿ ಹೇಳುವುದಾದರೇ, ಗ್ರೀಕರು ಮತ್ತು ಹೀಬ್ರೂಗಳು ಕೆಂಪು ಬಣ್ಣವನ್ನು ಪ್ರೀತಿಯ ಸಂಕೇತವೆಂದೇ ಪರಿಗಣಿಸಿದ್ದಾರೆ.

ಕೆಂಪು ಸಾರ್ವತ್ರಿಕ ಬಣ್ಣವಾಗಿದ್ದು ಅದು ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದೆ ಮತ್ತು ಆಚರಿಸಲ್ಪಡುತ್ತದೆ. ಹೀಗಾಗಿ ನೀವಿಂದು ಪ್ರೇಮ ನಿವೇದನೆ ಹೇಳಿಕೊಳ್ಳುವಾಗ ಕೆಂಪು ಬಣ್ಣದ ಉಡುಪನ್ನು ಧರಿಸಿ, ಕೆಂಪು ಗುಲಾಬಿಗಳ ಹೂಗುಚ್ಛವನ್ನು ನೀಡಿ. ನಿಮ್ಮ ಇಂದಿನ ಶುಭ ದಿನಕ್ಕೆ ಕೆಂಪು ಬಣ್ಣ ಪ್ರೀತಿಯ ಶಕ್ತಿಯಾಗಿದೆ. ಇಂದು ಪ್ರೀತಿಯನ್ನು ಹೇಳಿಕೊಳ್ಳಲು ಸಿದ್ಧರಾಗಿರುವ ಪ್ರೇಮಿಗಳಿಗೆ ಆಲ್​ ದಿ ಬೆಸ್ಟ್​. ಜೊತೆಗೆ ಪ್ರೀತಿಯಲ್ಲಿ ಮಿಂದೇಳುತ್ತಿರುವ ಜೋಡಿಗಳಿಗೆ ಪ್ರೇಮಿಗಳ ದಿನಾಚರಣೆಯ ಶುಭಾಶಯಗಳು!

ಇದನ್ನೂ ಓದಿ: ಲವರ್​ಗೆ ವ್ಯಾಲೆಂಟೈನ್​ ಡೇ ಗಿಫ್ಟ್​ ಕೊಡಲು ಮೇಕೆ ಕದ್ದ ಪ್ರೇಮಿ.. ಪೊಲೀಸರ ಕೈಗೆ ಸಿಕ್ಕಿಬಿದ್ದು ವಿಲ ವಿಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.