ETV Bharat / bharat

ತನ್ನನ್ನು ತಾನೇ ವಿವಾಹ ಮಾಡಿಕೊಳ್ಳಲಿರುವ ಯುವತಿ; 2 ವಾರ ಹನಿಮೂನ್​​: ಗುಜರಾತ್​​ನಲ್ಲೊಂದು ಸೆಲ್ಫ್ ಮ್ಯಾರೇಜ್​ - ಯುವತಿ ಸ್ವಯಂ ಮದುವೆ

ವಡೋದರಾದಲ್ಲಿ 24 ವರ್ಷದ ಯುವತಿಯೊಬ್ಬಳು ತನ್ನೊಂದಿಗೆ ತಾನೇ ವಿವಾಹ ಮಾಡಿಕೊಳ್ಳಲು ಮುಂದಾಗಿದ್ದು, ಜೂನ್​ 11ರಂದು ಕಲ್ಯಾಣ ಮಂಟಪದಲ್ಲಿ ಈ ಮದುವೆ ಸಮಾರಂಭ ನಡೆಯಲಿದೆ.

VADODARA GIRL WILL MARRY HERSELF
VADODARA GIRL WILL MARRY HERSELF
author img

By

Published : Jun 2, 2022, 4:11 PM IST

Updated : Jun 2, 2022, 4:48 PM IST

ವಡೋದರಾ(ಗುಜರಾತ್​): ಇತ್ತೀಚಿನ ದಿನಗಳಲ್ಲಿ ವೈವಾಹಿಕ ಬಂಧನಕ್ಕೊಳಗಾಗದೇ ಒಂಟಿಯಾಗಿ ಜೀವನ ನಡೆಸುವ ಟ್ರೆಂಡ್​ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ. ಅದರ ಮುಂದುವರೆದ ಭಾಗವಾಗಿ ಸೆಲ್ಫ್​ ಮ್ಯಾರೇಜ್ ಪ್ರಕರಣ ಹೆಚ್ಚಾಗುತ್ತಿದ್ದು, ವಿದೇಶದಲ್ಲಿ ಇಂತಹ ಪ್ರಕರಣ ಈಗಾಗಲೇ ಕಂಡು ಬಂದಿವೆ. ಆದರೆ, ಮೊಟ್ಟಮೊದಲ ಸಲ ಭಾರತದಲ್ಲೊಂದು ಸೆಲ್ಫ್‌ ಮ್ಯಾರೇಜ್‌ ಪ್ರಕರಣ ಗುಜರಾತ್​​ನಲ್ಲಿ ಬೆಳಕಿಗೆ ಬಂದಿದೆ.

24 ವರ್ಷದ ಯುವತಿಯೊಬ್ಬಳು ಜೂನ್ 11ರಂದು ಸ್ವಯಂ ಮದುವೆ ಮಾಡಿಕೊಳ್ಳಲಿದ್ದು, ಇದಾದ ಬಳಿಕ ಎರಡು ವಾರಗಳ ಕಾಲ ಹನಿಮೂನ್ ಮಾಡಿಕೊಳ್ಳಲಿದ್ದಾಳಂತೆ. ಇದಕ್ಕೋಸ್ಕರ ಎಲ್ಲ ರೀತಿಯ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿವೆ. ಇಂತಹ ಪ್ರಕರಣ ಭಾರತದಲ್ಲಿ ನಡೆಯುತ್ತಿರುವುದು ಇದೇ ಮೊದಲು ಎಂದು ವರದಿಯಾಗಿದೆ.

ತನ್ನನ್ನು ತಾನೇ ವಿವಾಹ ಮಾಡಿಕೊಳ್ಳಲಿರುವ ಯುವತಿ

ಜೂನ್ 11ರಂದು ವಡೋದರದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದ್ದು, ಈ ವೇಳೆ ಯುವತಿ ತನ್ನೊಂದಿಗೆ ಮದುವೆ ಮಾಡಿಕೊಳ್ಳಲಿದ್ದಾಳೆ. ವಿಶೇಷವೆಂದರೆ ಆರತಕ್ಷತೆ, ಮೆಹಂದಿ ಸೇರಿದಂತೆ ತಾಳಿ ಕಟ್ಟುವ ಮುಹೂರ್ತ ಸಹ ನಡೆಯಲಿದೆ. ಈ ವೇಳೆ ಯುವತಿ ತನ್ನಷ್ಟಕ್ಕೆ ತಾನೇ ಮಾಂಗಲ್ಯ ಕಟ್ಟಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಎರಡು ವಾರಗಳ ಕಾಲ ಹನಿಮೂನ್​​ಗೆ ತೆರಳಲಿದ್ದಾರೆ.

ಇದನ್ನೂ ಓದಿ: ತಂದೆ ಕೈಗಾಡಿಯಲ್ಲಿ ಚಾಟ್ ಮಾರಾಟ: ಯುಪಿಎಸ್​​​ಸಿಯಲ್ಲಿ 93ನೇ ರ‍್ಯಾಂಕ್ ಪಡೆದ ಮಗಳು

ಯಾವ ಕಾರಣಕ್ಕಾಗಿ ಈ ನಿರ್ಧಾರ?: ನನಗೆ ವರನೊಂದಿಗೆ ಮದುವೆ ಮಾಡಿಕೊಳ್ಳಲು ಇಷ್ಟಪಡಲ್ಲ. ಆದರೆ ವಧು ಆಗಬೇಕು ಎಂಬ ಆಸೆ. ಹೀಗಾಗಿ, ಸಂಪೂರ್ಣ ಜೀವನ ಏಕಾಂಗಿಯಾಗಿ ಕಳೆಯಲು ಬಯಸಿದ್ದೇನೆ. ಅದಕ್ಕಾಗಿಯೇ ಈ ನಿರ್ಧಾರ ಕೈಗೊಂಡಿದ್ದೇನೆಂದು ತಿಳಿಸಿದ್ದಾರೆ. 24 ವರ್ಷದ ಯುವತಿ ವಡೋದರಾದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳ ನಿರ್ಧಾರಕ್ಕೆ ಪೋಷಕರು ಸಹ ಒಪ್ಪಿಗೆ ಸೂಚಿಸಿದ್ದಾರೆ.

ಏನಿದು ಸೆಲ್ಫ್​ ಮ್ಯಾರೇಜ್​?: ತನ್ನೊಂದಿಗೆ ತಾನೇ ಸಂಬಂಧದಲ್ಲಿ ಗುರುತಿಸಿಕೊಳ್ಳುವಂತಹದ್ದು ಸೆಲ್ಫ್​ ಮ್ಯಾರೇಜ್ ಅಥವಾ ಸೋಲೋಗಮಿ ಎಂದು ಕರೆಯುತ್ತಾರೆ​. ಕೌಟುಂಬಿಕ ಬದುಕಿನ ಬಗ್ಗೆ ಆಸಕ್ತಿ ಇಲ್ಲದವರು, ಭಗ್ನ ಪ್ರೇಮಿಗಳು, ವಿಚ್ಛೇದಿತರು ಇಂತಹ ನಿರ್ಧಾರ ಕೈಗೊಳ್ಳುತ್ತಾರೆ. ವಿದೇಶಗಳಲ್ಲಿ ಈ ಕಲ್ಪನೆ ಈ ಹಿಂದಿನಿಂದಲೂ ಜಾರಿಯಲ್ಲಿದೆ.

Last Updated : Jun 2, 2022, 4:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.