ಬಂಡೀಪೋರಾ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ಜೆಬಾನ್ ಚುಂತಿಮುಲ್ಲಾ ಗ್ರಾಮಕ್ಕೆ ಕೊರೊನಾ ಲಸಿಕೆ ಹಾಕಲು ಬಂದ ಆರೋಗ್ಯ ಸಿಬ್ಬಂದಿ ಮೇಲೆ ಕುಟುಂಬಸ್ಥರು ಹಲ್ಲೆ ಯತ್ನ ನಡೆಸಿರುವ ಘಟನೆ ನಡೆದಿದೆ.
ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ತಂಡವು ಲಸಿಕೆ ಹಾಕಿಸಿಕೊಳ್ಳುವಂತೆ ಕುಟುಂಬಸ್ಥರ ಬಳಿ ತೆರಳಿದಾಗ ಅವರು ಏಕಾಏಕಿ ದಾಳಿಗೆ ಮುಂದಾಗಿದ್ದಾರೆ. ಮನೆಯಿಂದ ಹೊರಬಂದು ಕಲ್ಲು, ಚಪ್ಪಲಿಯ ಎಸೆದಿದ್ದಾರೆ. ಹೀಗಾಗಿ ಲಸಿಕೆ ಹಾಕಲು ಬಂದಿದ್ದ ಸಿಬ್ಬಂದಿ ಸ್ಥಳದಿಂದ ವಾಪಸ್ ಬಂದಿದ್ದಾರೆ. ಘಟನೆಯಲ್ಲಿ ಯಾವೊಬ್ಬ ಸಿಬ್ಬಂದಿಗೂ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಬಂಡಿಪೋರಾ ಜಿಲ್ಲಾಧಿಕಾರಿ, ಡಾ.ಓವೈಸ್ ಘಟನೆ ಕುರಿತು ಮಾಹಿತಿ ಪಡೆದಿದ್ದೇವೆ. ತನಿಖೆಗೂ ಸೂಚನೆ ನೀಡಲಾಗಿದೆ. ತಪ್ಪಿತಸ್ಥರೆಂದು ದೃಢವಾದರೆ ಅವರಿಗೆ ಕಾನೂನಿನ ಅನ್ವಯ ಶಿಕ್ಷೆ ವಿಧಿಸಲಾಗುವುದು ಎಂದಿದ್ದಾರೆ. ಈ ನಡುವೆ ಘಟನೆ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಓದಿ: 'ನಿನ್ನಂಥ ಅಪ್ಪ ಇಲ್ಲ': ಮಗನಿಗೆ 3 ಕೋಟಿ ರೂ. ಮೌಲ್ಯದ ಕಾರು ಗಿಫ್ಟ್ ನೀಡಿದ ಸೋನು ಸೂದ್