ETV Bharat / bharat

ಕೋವಿಡ್-19 ಮೂರನೇ ಅಲೆ ತಡೆಗಟ್ಟಲು ವ್ಯಾಕ್ಸಿನೇಷನ್ ಒಂದೇ ಪ್ರಮುಖ ಅಸ್ತ್ರ : ಜಾಕೋಬ್ ಜಾನ್ - ಮೂರನೇ ಕೊರೊನಾ ಅಲೆ

ಜನರು ಮತ್ತು ಸರ್ಕಾರದ ಕಡೆಯಿಂದ ಉಂಟಾಗುವ ಸಡಿಲತೆ ಹೇಗೆ ಅಪಾಯಕಾರಿ ಎಂದು ನಾವು ಈಗಾಗಲೇ ನೋಡಿದ್ದೇವೆ. ವೈರಸ್​ ಸದಾಕಾಲ ಉಳಿಯಲಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಆದ್ದರಿಂದ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಇಲ್ಲದಿದ್ದರೆ ಇನ್ನೂ ಹೆಚ್ಚಿನ ಅಪಾಯ ಕಾದಿದೆ..

jacob
jacob
author img

By

Published : May 21, 2021, 9:50 PM IST

ಹೈದ್ರಾಬಾದ್​ : ಕೊರೊನಾ ಸಾಂಕ್ರಾಮಿಕವನ್ನು ಹತ್ತಿಕ್ಕಲು ಇರುವ ಏಕೈಕ ಮಾರ್ಗವೆಂದರೆ ಸಂಪೂರ್ಣ ವ್ಯಾಕ್ಸಿನೇಷನ್. ಕೊರೊನಾ ವೈರಸ್ ನಿರಂತರವಾಗಿ ರೂಪಾಂತರಗೊಳ್ಳುತ್ತಿದೆ. ಪ್ರಬಲ ರೂಪಾಂತರಗಳನ್ನು ಅರ್ಥಮಾಡಿಕೊಳ್ಳಲು ಜೀನೋಮ್ ಅನುಕ್ರಮವನ್ನು ಮಾಡಬೇಕು.

ಎರಡನೇ ಅಲೆಯಿಂದ ಉಂಟಾಗಿರುವ ಹಾನಿಗೆ ಒಂದು ಕಾರಣವೆಂದರೆ ಜೀನೋಮ್ ಅನುಕ್ರಮವನ್ನು ವಿಶ್ಲೇಷಿಸುವಲ್ಲಿನ ನಿರ್ಲಕ್ಷ್ಯ.

ವಿನಾಶಕಾರಿ ಮೂರನೇ ಅಲೆಯನ್ನು ತಡೆಗಟ್ಟುವಲ್ಲಿ ನಾವು ಪೂರ್ವಭಾವಿಯಾಗಿರಬೇಕು ಎಂದು ICMRನ ವೈರಾಲಜಿ ಸೆಂಟರ್ ಫಾರ್ ಅಡ್ವಾನ್ಸ್​​ ರಿಸರ್ಚ್​​ನ ಮಾಜಿ ಮುಖ್ಯಸ್ಥ ಜಾಕೋಬ್ ಜಾನ್ ಹೇಳಿದ್ದಾರೆ.

ಈಟಿವಿ ಭಾರತ್ ಜೊತೆಗಿನ ವಿಶೇಷ ಸಂದರ್ಶನದಲ್ಲಿ ಅವರು ಸೋಂಕಿನ ತೀವ್ರತೆ ಮತ್ತು ಮೂರನೇ ಅಲೆಯ ಬಗ್ಗೆ ಮಾತನಾಡಿದ್ದಾರೆ.

ಪ್ರಶ್ನೆ: ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಎರಡನೇ ಅಲೆ ಏಕೆ ತೀವ್ರವಾಗಿದೆ?

ಜಾಕೋಬ್ ಜಾನ್ : ಎರಡು ಅಂಶಗಳು ಈ ತೀವ್ರತೆಗೆ ಕಾರಣವಾಗಿದ್ದು, ಮೊದಲನೆಯದಾಗಿ, ರೂಪಾಂತರ ಅಥವಾ ಹರಡುವಿಕೆಯ ತೀವ್ರತೆಯನ್ನು ನಾವು ಕಂಡು ಹಿಡಿಯಲಾಗಲಿಲ್ಲ.

ಈ ಸಮಸ್ಯೆ ಮೇಲ್ವಿಚಾರಣೆ ಮಾಡಲು ಕೇಂದ್ರವು 10 ಸಂಶೋಧನಾ ಪ್ರಯೋಗಾಲಯಗಳಿಗೆ ಜವಾಬ್ದಾರಿವಹಿಸಿದೆ. ಅವರು ಜೀನೋಮ್ ಅನುಕ್ರಮವನ್ನು ಕೈಗೊಳ್ಳಲು ಸಾಕಷ್ಟು ಹಣವಿಲ್ಲ.

ಎರಡನೆಯದಾಗಿ, ದೇಶಾದ್ಯಂತ ಸಾಮೂಹಿಕ ಕಾರ್ಯಕ್ರಮಗಳನ್ನು ಸರ್ಕಾರ ನಿರ್ಬಂಧಿಸಲಿಲ್ಲ. ಚುನಾವಣಾ ರ್ಯಾಲಿಗಳು ಮತ್ತು ಪ್ರಚಾರಗಳು ಸಹ ಇದು ತೀವ್ರವಾಗಿ ಹರಡಲು ಕಾರಣವಾಗಿವೆ.

ಪ್ರಶ್ನೆ: ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ಅನುಮಾನಗಳಿವೆ. ನಿಮ್ಮ ಅಭಿಪ್ರಾಯ ಏನು?

ಜಾಕೋಬ್ ಜಾನ್ : ಲಸಿಕೆ ಕಾರ್ಯನಿರ್ವಹಿಸುತ್ತದೆಯೋ ಇಲ್ಲವೋ ಎಂಬ ಬಗ್ಗೆ ಯಾವುದೇ ಅಂಕಿ-ಅಂಶಗಳ ಆಧಾರವಿಲ್ಲ. ಆದರೆ, ಲಸಿಕೆಗಳು ಖಂಡಿತವಾಗಿಯೂ ಹೆಚ್ಚುವರಿ ರಕ್ಷಣೆ ನೀಡುತ್ತದೆ.

ಆದಾಗ್ಯೂ, ನಾವು ಸಾಕಷ್ಟು ಪ್ರಮಾಣವನ್ನು ಪೂರೈಸುವಲ್ಲಿ ವಿಫಲರಾಗಿದ್ದೇವೆ. ಎರಡು ಡೋಸ್ ಪಡೆದವರಿಗೆ ವೈರಸ್ ವಿರುದ್ಧ ಉತ್ತಮ ರಕ್ಷಣೆ ಇದೆ ಎಂಬುದರಲ್ಲಿ ಸಂದೇಹವಿಲ್ಲ.

ಪ್ರಶ್ನೆ: ಪ್ರಸ್ತುತ ಪರಿಸ್ಥಿತಿಯಲ್ಲಿ ಜೀನೋಮ್ ಅನುಕ್ರಮದ ಪಾತ್ರವೇನು?

ಜಾಕೋಬ್ ಜಾನ್ : ಮೊದಲ ಅಲೆಗಿಂತ ಕೆಲವು ವೈರಸ್​​ನ ರೂಪಾಂತರಗಳು ಮಾರಕವಾಗಿವೆ. ವ್ಯಾಕ್ಸಿನೇಷನ್​ಗೆ ವಿರೋಧ ಒಡ್ಡಬಲ್ಲ ಹೊಸ ರೂಪಾಂತರಗಳು ಸಹ ವಿಕಸನಗೊಳ್ಳುತ್ತಿವೆ. ನಾವು ಆ ಬಗ್ಗೆ ಯೋಚಿಸಬೇಕು.

ಈ ರೂಪಾಂತರಗಳನ್ನು ನಾವು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ವೈರಸ್ ಮಾದರಿಗಳ ಜೀನೋಮ್ ಅನುಕ್ರಮವನ್ನು ಪ್ರತಿ ವಾರ ವಿಶ್ಲೇಷಿಸಬೇಕು.

ಪ್ರಶ್ನೆ:ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?

ಜಾಕೋಬ್ ಜಾನ್ :ತುರ್ತಾಗಿ ಮಾಡಬೇಕಾದ್ದು ಜನಸಂದಣಿ ತಡೆದು ಮಾಸ್ಕ್​ ಧರಿಸಿ ಸಾಮಾಜಿಕ ಅಂತರ ಏರ್ಪಡಿಸುವುದು.

ಪ್ರಶ್ನೆ: ಈ ಬಿಕ್ಕಟ್ಟು ಯಾವಾಗ ಕೊನೆಗೊಳ್ಳುವ ಸಾಧ್ಯತೆಯಿದೆ?

ಜಾಕೋಬ್ ಜಾನ್ : ವೈರಸ್ ಹೋಗುವುದಿಲ್ಲ. ಆದಾಗ್ಯೂ, ಪ್ರಸ್ತುತ ಬಿಕ್ಕಟ್ಟು ಜೂನ್ ಅಂತ್ಯದ ವೇಳೆಗೆ ಕೊನೆಗೊಳ್ಳುವ ಸಾಧ್ಯತೆಯಿದೆ.

ಪ್ರಶ್ನೆ : ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಮೂರನೇ ಅಲೆಯ ಸಂಭವನೀಯತೆ ಮತ್ತು ತೀವ್ರತೆ ಏನು?

ಜಾಕೋಬ್ ಜಾನ್ : ಹೊಸ ರೂಪಾಂತರ ವೈರಸ್​ ಎದುರಿಸಲು ನಮ್ಮಲ್ಲಿ ರೋಗನಿರೋಧಕ ಶಕ್ತಿ ಇಲ್ಲದಿದ್ದರೆ, ಮೂರನೇ ಅಲೆ ಹೆಚ್ಚು ಮಾರಕವಾಗಬಹುದು. ನಮಗೆ ಲಸಿಕೆಗಳ ತೀವ್ರ ಕೊರತೆ ಇದೆ.

ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಇತ್ಯಾದಿ ಜನರು ನಿರಂತರವಾಗಿ ಕೊರೊನಾದ ಹೊಸ ಅಲೆಗಳಿಂದ ಹೆಚ್ಚಿನ ಅಪಾಯವನ್ನು ಎದುರಿಸಬೇಕಾಗುತ್ತದೆ.

ಪ್ರಶ್ನೆ: ಕೋವಿಡ್​ ನಂತರದ ಭಾರತ ಹೇಗೆ ಇರಲಿದೆ? ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು?

ಜಾಕೋಬ್ ಜಾನ್ : ನಮಗೆ ವೈದ್ಯಕೀಯ ಉಪಕರಣಗಳು ಮತ್ತು ಸಿಬ್ಬಂದಿಯ ಕೊರತೆಯಿದೆ. ಮೊದಲ ಅಲೆಯಲ್ಲಿಯೇ ನಮ್ಮ ಆರೋಗ್ಯ ಕ್ಷೇತ್ರ ಕುಸಿದಿದೆ. ಆದ್ದರಿಂದ, ಈಗ ಸನ್ನಿವೇಶವನ್ನು ಊಹಿಸಬಹುದು.

ಕೇಂದ್ರ ಸರ್ಕಾರ ಕೂಡಲೇ ಸಾರ್ವಜನಿಕ ಆರೋಗ್ಯ ವಿಭಾಗವನ್ನು ಸ್ಥಾಪಿಸಬೇಕು ಮತ್ತು ದೇಶಾದ್ಯಂತ 718 ಜಿಲ್ಲೆಗಳಲ್ಲಿ ವಿಶೇಷ ಅಧಿಕಾರಿಗಳನ್ನು ನೇಮಿಸಬೇಕು.

ಜಿಡಿಪಿ ಹಂಚಿಕೆಯಲ್ಲಿ ಶೇ. 2 ರಿಂದ 3 ರಷ್ಟು ಸಾರ್ವಜನಿಕ ಆರೋಗ್ಯಕ್ಕೆ ಮತ್ತು ಶೇ. 3 ರಿಂದ 4 ರಷ್ಟು ಸಾರ್ವತ್ರಿಕ ಆರೋಗ್ಯ ರಕ್ಷಣೆಗೆ ನೀಡಬೇಕು.

ಜನರು ಮತ್ತು ಸರ್ಕಾರದ ಕಡೆಯಿಂದ ಉಂಟಾಗುವ ಸಡಿಲತೆ ಹೇಗೆ ಅಪಾಯಕಾರಿ ಎಂದು ನಾವು ಈಗಾಗಲೇ ನೋಡಿದ್ದೇವೆ. ವೈರಸ್​ ಸದಾಕಾಲ ಉಳಿಯಲಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು.

ಆದ್ದರಿಂದ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಇಲ್ಲದಿದ್ದರೆ ಇನ್ನೂ ಹೆಚ್ಚಿನ ಅಪಾಯ ಕಾದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.