ETV Bharat / bharat

ಉತ್ತರಾಖಂಡದ ರಾಜಕೀಯ ಇತಿಹಾಸದಲ್ಲಿ ಅವಧಿ ಪೂರ್ಣಗೊಳಿಸಿದ ಏಕೈಕ ಸಿಎಂ ಯಾರು ಗೊತ್ತೆ.!? - ಸಿಎಂ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್​ ರಾವತ್ ರಾಜೀನಾಮೆ

2012 ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದಲ್ಲಿ ಹೋರಾಡಿದವು. ಬಿಜೆಪಿ 32 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್​ 31 ಸ್ಥಾನಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಮೂರು ಬಹುಜನ ಸಮಾಜ ಪಕ್ಷದ ಶಾಸಕರ ಬೆಂಬಲವನ್ನು ಪಡೆದುಕೊಂಡಿತು. ಬಳಿಕ ಏಕಾಂಗಿ ಉತ್ತರಾಖಂಡ ಕ್ರಾಂತಿ ದಳದ ಶಾಸಕ ಮತ್ತು ಮೂವರು ಸ್ವತಂತ್ರ ಶಾಸಕರ ಹೆಚ್ಚುವರಿ ಬೆಂಬಲದೊಂದಿಗೆ ಕಾಂಗ್ರೆಸ್​ ಸರ್ಕಾರ ರಚನೆಯಾಯಿತು.

Musical chairs Uttarakhand Chief Minister post
ಉತ್ತರಾಖಂಡದ ರಾಜಕೀಯ ಇತಿಹಾಸದಲ್ಲಿ ಅವಧಿ ಪೂರ್ಣಗೊಳಿಸಿ ಏಕೈಕ ಸಿಎಂ ಯಾರು ಗೊತ್ತೆ.!?
author img

By

Published : Mar 10, 2021, 10:25 AM IST

ಡೆಹ್ರಾಡೂನ್ (ಉತ್ತರಾಖಂಡ): ಉತ್ತರಾಖಂಡದ ಮುಖ್ಯಮಂತ್ರಿ ಹುದ್ದೆಗೆ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ. ಆದರೆ ಉತ್ತರಾಖಂಡದಲ್ಲಿ ಹೀಗೆ ಸಿಎಂ ಅಕಾಲಿಕ ನಿರ್ಗಮನ ಹೊಸತೇನಲ್ಲ.

ರಾಜ್ಯ ರಚನೆಯ ನಂತರ ಉತ್ತರಾಖಂಡದಲ್ಲಿ ಮೊದಲ ಸರ್ಕಾರ ರಚಿಸಿದ ನಿತ್ಯಾನಂದ ಸ್ವಾಮಿ ಅವರನ್ನು ಉಚ್ಛಾಟಿಸಿ ಬಿಎಸ್ ಕೊಶಿಯಾರಿ ಅವರನ್ನು ಸಿಎಂ ಮಾಡಲಾಯಿತು. ನಂತರ, 2002 ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. 2002 ರಿಂದ 2007 ರವರೆಗೆ ಉತ್ತರಾಖಂಡ ರಾಜಕೀಯದ ಇತಿಹಾಸದಲ್ಲಿ ತಮ್ಮ ಅಧಿಕಾರಾವಧಿಯನ್ನು ಪೂರೈಸಿದ ಏಕೈಕ ಮುಖ್ಯಮಂತ್ರಿ ನಾರಾಯಣ್ ದತ್ ತಿವಾರಿ.

ಇದನ್ನೂ ಓದಿ: ಉತ್ತರಾಖಂಡ್: ಸಿಎಂ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್​ ರಾವತ್ ರಾಜೀನಾಮೆ

ನಂತರದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು ಮತ್ತು ಬಿ.ಸಿ.ಖಂಡೂರಿ ಎರಡು ವರ್ಷ ನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಆದರೆ, ಇವರೂ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಲಾಗಲಿಲ್ಲ. ಬಳಿಕ ಅವರ ಸ್ಥಾನದಲ್ಲಿ ರಮೇಶ್ ಪೋಖ್ರಿಯಾಲ್ ನಿಶಾಂಕ್ ನೇಮಕಗೊಂಡರು. ಆದರೆ ಉಳಿದ ಅವಧಿಯನ್ನು ಪೂರ್ಣಗೊಳಿಸಲು ಪೋಖ್ರಿಯಲ್ ವಿಫಲರಾದರು. ಬಿಜೆಪಿ 2012 ರ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಆರು ತಿಂಗಳ ಮೊದಲು ಖಂಡೂರಿಯನ್ನು ಮರಳಿ ಸಿಎಂ ಮಾಡಲಾಯಿತು.

2012 ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದ ಹೋರಾಟ ನಡೆಸಿದವು. ಬಿಜೆಪಿ 32 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್​ 31 ಸ್ಥಾನಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್ ಮೂರು ಬಹುಜನ ಸಮಾಜ ಪಕ್ಷದ ಶಾಸಕರ ಬೆಂಬಲವನ್ನು ಪಡೆದುಕೊಂಡಿತು. ಬಳಿಕ ಏಕಾಂಗಿ ಉತ್ತರಾಖಂಡ ಕ್ರಾಂತಿ ದಳದ ಶಾಸಕ ಮತ್ತು ಮೂವರು ಸ್ವತಂತ್ರ ಶಾಸಕರ ಹೆಚ್ಚುವರಿ ಬೆಂಬಲದೊಂದಿಗೆ ಕಾಂಗ್ರೆಸ್​ ಸರ್ಕಾರ ರಚನೆಯಾಯಿತು.

ಇದನ್ನೂ ಓದಿ: ಉತ್ತರಾಖಂಡ ಸಿಎಂ ರಾಜೀನಾಮೆ: ಪದತ್ಯಾಗಕ್ಕೆ ಕಾರಣವೇನು!

ಆದರೆ ನಂತರದ ಐದು ವರ್ಷಗಳಲ್ಲಿ ಸಹ ಸಿಎಂ ಬದಲಾವಣೆಯ ಪರ್ವ ಮತ್ತೆ ಮುಂದುವರೆಯಿತು. ಕಾಂಗ್ರೆಸ್ ಮೊದಲು ವಿಜಯ್ ಬಹುಗುಣ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿತು. ಆದರೆ 2013 ರ ವಿನಾಶಕಾರಿ ಪ್ರವಾಹದ ನಂತರ ಅವರನ್ನು ಹರೀಶ್ ರಾವತ್ ಅವರನ್ನು ಸಿಎಂ ಆಗಿ ನೇಮಿಸಲಾಯಿತು. ಹರೀಶ್​ ರಾವತ್​ ತಮ್ಮ ಮೂರನೇ ಅವಧಿಯಲ್ಲಿ 311 ದಿನಗಳ ಕಾಲ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಹರೀಶ್ ರಾವತ್ ಅವರ ಉತ್ತರಾಧಿಕಾರಿ ತ್ರಿವೇಂದ್ರ ಸಿಂಗ್ ರಾವತ್ ಅವರು ನಾರಾಯಣ್ ದತ್ ತಿವಾರಿ ನಂತರ ಉತ್ತರಾಖಂಡದಲ್ಲಿ ದೀರ್ಘಕಾಲದ ವರೆಗೆ ಅಧಿಕಾರದಲ್ಲಿದ್ದರು. ಆದರೆ, ಅವರೂ ಸಹ ಪೂರ್ಣಾವಧಿಯ ಸಿಎಂ ಆಗಲೇ ಇಲ್ಲ. ಅಕಾಲಿಕ ರಾಜೀನಾಮೆ ನೀಡುವ ಮೂಲಕ ಉತ್ತರಾಖಂಡದ ಸಿಎಂ ಅಕಾಲಿನ ರಾಜೀನಾಮೆ ಪರಂಪರೆ ಮುಂದುವರೆದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.