ETV Bharat / bharat

ಮೊದಲ ಗ್ರಂಥಾಲಯ ಗ್ರಾಮ ಉದ್ಘಾಟನೆ..ಏನೇನೆಲ್ಲಾ ವಿಶೇಷತೆ ಇದೆ ಗೊತ್ತಾ ಇಲ್ಲಿ!

author img

By

Published : Jan 28, 2023, 6:55 PM IST

ಗ್ರಾಮದ ಮನೆ ಮನೆಯಲ್ಲೂ ಇದೆ ಪುಸ್ತಕ - ಗ್ರಂಥಾಲಯದ ಜೊತೆ ಕೇಂದ್ರ ಗ್ರಂಥಾಲಯ ಕೂಡ ಉದ್ಘಾಟನೆ- ಪುಸ್ತಕ ದೇವಾಲಯ ನಿರ್ಮಿಸುವ ಯೋಜನೆ ಚಿಂತನೆ

uttarakhands-first-library-village-inaugurated
ಉತ್ತರಾಖಂಡ್​ನ ಮೊದಲ ಗ್ರಂಥಾಲಯ ಗ್ರಾಮ ಉದ್ಘಾಟನೆ

ರುದ್ರಪ್ರಯಾಗ್​: ಉತ್ತರಾಖಂಡ್​ನ ಮಣಿಗುಹ್ ಗ್ರಾಮವನ್ನು ಮೊದಲ ಗ್ರಂಥಾಲಯವನ್ನು ಗ್ರಾಮವಾಗಿ ರೂಪಿಸಲಾಗಿದ್ದು, ಬಸಂತ್ ಪಂಚಮಿಯ ಶುಭದಿನದಂದು ಧಾರ್ಮಿಕ ಕಾರ್ಯಗಳ ಮೂಲಕ ಪ್ರಾರಂಭ ಮಾಡಲಾಗಿದೆ. ಉದ್ಘಾಟನೆ ವೇಳೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇಲ್ಲಿನ ಸ್ಥಳೀಯ ಶಾಲೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು. ದೆಹಲಿಯಿಂದ ದೊಡ್ಡ ಸಂಖ್ಯೆಯಲ್ಲಿ ಜನರು ಉತ್ತರಾಖಂಡ್​ನ ಮೊದಲ ಗ್ರಂಥಾಲಯ ಗ್ರಾಮ ಉದ್ಘಾಟನೆಗೆ ಆಗಮಿಸಿದರು

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರಮೇಶ್​ ಪಹಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.ಗ್ರಾಮೀಣ ಪ್ರದೇಶದಲ್ಲಿ ಜ್ಞಾನ ಸಂಪಾದನೆಗೆ ಅತ್ಯಂತ ಸರಳ ಮತ್ತು ಸುಲಭವಾದ ಮಾರ್ಗಗಳನ್ನು ಒದಗಿಸುವುದು ಅಭಿವೃದ್ಧಿಯ ಚಿಂತನೆಯನ್ನು ತೋರಿಸುತ್ತದೆ. ಗ್ರಂಥಾಲಯವು ದೇಶ ಮತ್ತು ಸಮಾಜದ ಪ್ರಗತಿಯ ಬಾಗಿಲು ತೆರೆಯಲಿದೆ. ಉದ್ಯೋದ ಹಿನ್ನೆಲೆ ಗಿರಿಶಿಖರದಂತಹ ಸ್ಥಳಗಳಿಂದ ದೊಡ್ಡ ಮಟ್ಟದಲ್ಲಿ ಜನರು ವಲಸೆ ಹೋಗುತ್ತಿದ್ದಾರೆ.

ಅವರ ನೋವು ಪ್ರತಿ ಗಿರಿಶಿಖರದಲ್ಲಿದೆ. ನನ್ನ ತಂದೆ ಕೂಡ ಉದ್ಯೋಗಕ್ಕಾಗಿ ಚಿಕ್ಕವಯಸ್ಸಿನಲ್ಲೇ ವಲಸೆ ಹೋದರು. ಆದರೆ, ಅವರ ಜೀವನದುದ್ದಕ್ಕೂ ಅವರು ಗ್ರಾಮವನ್ನು ಮರೆಯಲಿಲ್ಲ. ಮತ್ತೆ ತಮ್ಮ ಗ್ರಾಮಕ್ಕೆ ಮರಳಬೇಕು ಎಂಬುದು ಅವರ ಕನಸ್ಸಾಗಿತ್ತು. ಆದರೆ, ಜೀವನದ ಓಟದಲ್ಲಿ ಅದು ಸಾಧ್ಯವಾಗಲಿಲ್ಲ ಎಂದು ಗೋವನ್​ ಘರ್​ ಫೌಂಡೇಶನ್​ ಸಂಸ್ಥಾಪಕರಾದ ಬಿನಾ ನೆಗಿ ಮಿಶ್ರಾ ತಿಳಿಸಿದ್ದಾರೆ.

ಬಿನಾ ಕನಸಿನ ಕೂಸು ಈ ಗ್ರಾಮ: ಉತ್ತರಾ ಖಂಡ್​ನ ಅಗಸ್ತ್ಯಮುನಿಯ ಮಣಿಗುಹ್ ಗ್ರಂಥಾಲಯದ ಗ್ರಾಮ ಬಂಜಗಡ್ಡುನ ಬಿನಾ ನೆಗಿ ಮಿಶ್ರಾ ಅವರ ಪರಿಕಲ್ಪನೆ ಆಗಿದೆ. ಎಂಬಿಎ ಮುಗಿದ ಬಳಿಕ ಬಿನಾ, ದೆಹಲಿಯ ಮಲ್ಟಿನ್ಯಾಷನಲ್​ ಕಂಪನಿಯಲ್ಲಿ ಸೀನಿಯರ್​ ಮ್ಯಾನೇಜರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಆಕೆ ತಮ್ಮ ಗ್ರಾಮವನ್ನು ಮರೆಯಲಿಲ್ಲ. ಇದೆ ಕಾರಣಕ್ಕಾಗಿ ತಮ್ಮ ಗ್ರಾಮಕ್ಕೆ ಏನಾದರೂ ಮಾಡಬೇಕು ಎಂದು ಅವರು ತುಡಿಯುತ್ತಿದ್ದರು.

ಈ ಹಿನ್ನೆಲೆ ಕೆಲಸವನ್ನು ತೊರೆದು ಗ್ರಾಮಕ್ಕೆ ಮರಳಿದರು. ಆಕೆಯ ಗಂಡ ಸುಮನ್​ ಮಿಶ್ರಾ ಕೂಡ ಇದಕ್ಕೆ ಬೆಂಬಲಿಸಿದರು. ಆಕೆಯ ಪತಿ ಸುಮನ್​ ಸುಫಿನಮ ಪತ್ರಿಕೆ ಸಂಪಾದಕರಾಗಿದ್ದುಮ ರೆಖ್ತಾ ಫೌಂಡೆಷನ್​ ಜವಾಬ್ದಾರಿಯನ್ನು ಹೊಂದಿದ್ದಾರೆ. ಬಿನಾ ತಮ್ಮ ಮೂವರು ಸಹೋದ್ಯೋಗಿಗಳ ಜೊತೆ ಸೇರಿದ ಗ್ರಾಮದ ಮಾದರಿ ಅಭಿವೃದ್ದಿಗಾಗಿ ಹಮರಾ ಗಾವ್​ ಘಟ್​ ಫೌಂಡೆಷನ್​ ಅನ್ನು ಸ್ಥಾಪಿಸಿದರು. ಈ ಮೂಲಕ ಅಭಿವೃದ್ಧಿ ಹೊಂದಿದ ನಗರಗಳಿಂದ ಜಾಗೃತ ಜನರನ್ನು ಆಕರ್ಷಿಸುವ ಮೂಲಕ ಉದ್ಯೋಗ ಮತ್ತು ಶಿಕ್ಷಣವನ್ನು ರಚಿಸಬಹುದು.

ರಾಜ್ಯದ ಮೊದಲ ಗ್ರಂಥಾಲಯ ಗ್ರಾಮವಾಗಿ ಮಾಡಿದರು. ಇದರ ಹೊರತಾಗಿ ಇಲ್ಲಿ ಸೆಂಟ್ರಲ್​ ಲೈಬ್ರರಿ ಇಲ್ಲಿದೆ. ಇಲ್ಲಿ ಅನೇಕ ಕಡೆ ಓದಲು ವ್ಯವಸ್ಥೆ ಮಾಡಲಾಗಿದೆ. ವಿರಳ ಪುಸ್ತಕಗಳು ಇಲ್ಲಿನ ಸೆಂಟ್ರಲ್​ ಲೈಬ್ರರಿಯಲ್ಲಿ ಸಿಗಲಿದೆ. ಪ್ರತಿ ಗ್ರಾಮದಲ್ಲೂ ಅವಶ್ಯಕವಾಗಿ ಪುಸ್ತಕವಾಗಿದೆ. ಸ್ಮಾರ್ಟ್​ ಕ್ಲಾಸಸ್​ ಹೊರತಾಗಿ, ಮಕ್ಕಳಿಗೆ ಕಂಪ್ಯೂಟರ್​ ಶಿಕ್ಷಣವನ್ನು ನೀಡಲಾಗಿದೆ. ಅನೇಕ ವಿಷಯಗಳ ಆಧಾರಿತ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ಹಲವು ಪುಸ್ತಕಗಳು ಸಿಗಲಿದೆ.

ಉತ್ತರಾಖಂಡವು ಯಾತ್ರಾಸ್ಥಳಕ್ಕೆ ಹೆಸರಾಗಿದ್ದು, ಇಲ್ಲಿ ಯುವಕರು, ಗ್ರಾಮದಲ್ಲಿ ಗ್ರಂಥಾಲಯವನ್ನು ಮನೆ ಮನೆಗೆ ತೆಗೆದುಕೊಂಡು ಹೋಗಿ ನೀಡುವ ಪುಸ್ತಕ ದೇವಾಲಯಗಳನ್ನು ಸಹ ಯೋಜಿಸಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಸುಖೋಯ್​-30, ಮಿರಾಜ್​-2000 ಯುದ್ಧ ವಿಮಾನಗಳು ಪತನ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.