ETV Bharat / bharat

ಕುಂಭಮೇಳಕ್ಕೆ ಕ್ಯಾಮೆರಾ ಕಣ್ಗಾವಲು; ಜನಸಂದಣಿ ಮಿತಿ ಮೀರಿದರೆ ಎಚ್ಚರಿಸುವ ‘ಹೆಡ್-ಕೌಂಟ್’ ಸಾಫ್ಟ್‌ವೇರ್ - ಗಂಗಾ ಘಟ್ಟದಲ್ಲಿ ಹೆಡ್-ಕೌಂಟ್ ಸಾಫ್ಟ್‌ವೇರ್ ಹೊಂದಿರುವ ಕ್ಯಾಮೆರಾ ಅಳವಡಿಕೆ

107 ಗಂಗಾ ಘಟ್ಟದಲ್ಲಿ ಒಂದು ಸಮಯದಲ್ಲಿ 1.09 ಲಕ್ಷ ಜನರಿಗೆ ಅವಕಾಶವಿದೆ ಎಂದು ಪೊಲೀಸರು ನಿರ್ಧರಿಸಿದ್ದಾರೆ. ಅದರಲ್ಲಿ 20,000 ಭಕ್ತರು ಹರ್ ಕಿ ಪೌಡಿಯಲ್ಲಿ ಮತ್ತು 10,000 ಸುಬಾಶ್ ಘಾಟ್‌ನಲ್ಲಿ ಪವಿತ್ರ ಸ್ನಾನ ಮಾಡಲು ಸಾಧ್ಯವಾಗುತ್ತದೆ. ಕುಂಭಮೇಳ ಆಡಳಿತವು ಗಂಗಾ ಘಟ್ಟದಲ್ಲಿ ಹೆಡ್-ಕೌಂಟ್ ಸಾಫ್ಟ್‌ವೇರ್ ಹೊಂದಿರುವ ಕ್ಯಾಮೆರಾಗಳನ್ನು ಅಳವಡಿಸಿದೆ.

ಕುಂಭಮೇಳಕ್ಕೆ ಕ್ಯಾಮೆರಾ ಕಣ್ಗಾವಲು
ಕುಂಭಮೇಳಕ್ಕೆ ಕ್ಯಾಮೆರಾ ಕಣ್ಗಾವಲು
author img

By

Published : Feb 6, 2021, 3:41 PM IST

ಡೆಹ್ರಾಡೂನ್ (ಉತ್ತರಾಖಂಡ): ಜನಸಮೂಹದ ಮೇಲೆ ಕಣ್ಣಿಡಲು ಕುಂಭಮೇಳ ಆಡಳಿತವು ಗಂಗಾ ಘಟ್ಟದಲ್ಲಿ ಹೆಡ್-ಕೌಂಟ್ ಸಾಫ್ಟ್‌ವೇರ್ ಹೊಂದಿರುವ ಕ್ಯಾಮೆರಾಗಳನ್ನು ಅಳವಡಿಸಿದೆ.

ಜನಸಂದಣಿ ಮಿತಿ ಮೀರಿದರೆ ಕ್ಯಾಮೆರಾಗಳು ತಕ್ಷಣ ಪೊಲೀಸರನ್ನು ಎಚ್ಚರಿಸುತ್ತವೆ. ಕುಂಭಮೇಳದ ಇನ್ಸ್‌ಪೆಕ್ಟರ್ ಜನರಲ್ ಸಂಜಯ್ ಗುಂಜ್ಯಾಲ್ ಮಾತನಾಡಿ, ಇಡೀ 107 ಘಾಟ್‌ಗಳ ಅಳತೆಯನ್ನು ತೆಗೆದುಕೊಳ್ಳಲಾಗಿದೆ. ಅದಕ್ಕೆ ಅನುಗುಣವಾಗಿ ಭಕ್ತರ ಸಂಖ್ಯೆಯ ಮಿತಿಯನ್ನು ನಿಗದಿಪಡಿಸಲಾಗಿದೆ ಎಂದರು.

107 ಗಂಗಾ ಘಟ್ಟಗಳ ಸಂಪೂರ್ಣ ಅಳತೆ ಮಾಡಲಾಗಿದೆ. ಅದರ ಪ್ರಕಾರ ಭಕ್ತರ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ. ಸಾಮಾಜಿಕ ದೂರು ಅನುಸರಿಸುವ ದೃಷ್ಟಿಯಿಂದ, ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದ್ದರಿಂದ ನಿಗದಿತ ಸಂಖ್ಯೆಗಿಂತ ಹೆಚ್ಚಿನ ದಟ್ಟಣೆ ಇದ್ದರೆ, ನಮಗೆ ತಕ್ಷಣದ ಮಾಹಿತಿ ಸಿಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ರೈತರೊಂದಿಗೆ ಊಟ ಮಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ

107 ಗಂಗಾ ಘಟ್ಟದಲ್ಲಿ ಒಂದು ಸಮಯದಲ್ಲಿ 1.09 ಲಕ್ಷ ಜನರಿಗೆ ಅವಕಾಶವಿದೆ ಎಂದು ಪೊಲೀಸರು ನಿರ್ಧರಿಸಿದ್ದಾರೆ. ಅದರಲ್ಲಿ 20,000 ಭಕ್ತರು ಹರ್ ಕಿ ಪೌಡಿಯಲ್ಲಿ ಮತ್ತು 10,000 ಸುಬಾಶ್ ಘಾಟ್‌ನಲ್ಲಿ ಪವಿತ್ರ ಸ್ನಾನ ಮಾಡಲು ಸಾಧ್ಯವಾಗುತ್ತದೆ.

'ಹರಿದ್ವಾರ ಕುಂಭಮೇಳ'ಕ್ಕೆ ಬರುವ ಭಕ್ತರಿಗೆ ಕೋವಿಡ್ -19 ಪರೀಕ್ಷೆಯನ್ನು ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರ ಉತ್ತರಾಖಂಡ ಸರ್ಕಾರಕ್ಕೆ ಸೂಚನೆ ನೀಡಿದೆ.

ಅಪ್ರತಿಮ 'ಕುಂಭಮೇಳ' ಜನವರಿ 15 ರಂದು ಹರಿದ್ವಾರದಲ್ಲಿ ಪ್ರಾರಂಭವಾಗಿದ್ದು, ಏಪ್ರಿಲ್ 27 ರಂದು ಮುಕ್ತಾಯಗೊಳ್ಳಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.