ನೈನಿತಾಲ್: ಉತ್ತರಾಖಂಡದಲ್ಲಿನ ರಣಭೀಕರ ಮಳೆಯಿಂದಾಗಿ ಸುಮಾರು 45ಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಅಪಾರ ಪ್ರಮಾಣದ ನಷ್ಟವಾಗಿದೆ. ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಅನೇಕ ಮನೆಗಳು ಧರೆಗೆ ಉರುಳಿವೆ. ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಇದರ ಮಧ್ಯೆ ಮುಖ್ಯಮಂತ್ರಿ ಪರಿಹಾರ ಘೋಷಣೆ ಮಾಡಿದ್ದಾರೆ.
ವಿವಿಧ ಪ್ರವಾಹ ಪೀಡಿತ ಸ್ಥಳಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ತದನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಲಭ್ಯವಾಗಿರುವ ಮಾಹಿತಿ ಪ್ರಕಾರ ಇಲ್ಲಿಯವರೆಗೂ 34 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದು, ಐವರು ನಾಪತ್ತೆಯಾಗಿದ್ದಾರೆಂಬ ಮಾಹಿತಿ ನೀಡಿದ್ದಾರೆ.
-
Uttarakhand CM Pushkar Singh Dhami chairs a review meeting in Haldwani over situation in the city and state alike, in the wake of heavy rains pic.twitter.com/MnuyU5M6q3
— ANI (@ANI) October 19, 2021 " class="align-text-top noRightClick twitterSection" data="
">Uttarakhand CM Pushkar Singh Dhami chairs a review meeting in Haldwani over situation in the city and state alike, in the wake of heavy rains pic.twitter.com/MnuyU5M6q3
— ANI (@ANI) October 19, 2021Uttarakhand CM Pushkar Singh Dhami chairs a review meeting in Haldwani over situation in the city and state alike, in the wake of heavy rains pic.twitter.com/MnuyU5M6q3
— ANI (@ANI) October 19, 2021
ಮಳೆಯಿಂದಾಗಿ ಮನೆ ಕಳೆದುಕೊಂಡಿರುವವರಿಗೆ 1,09,000 ಲಕ್ಷ ರೂ ಹಾಗೂ ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ನೀಡುವುದಾಗಿ ಸಿಎಂ ಘೋಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಎಲ್ಲ ರೀತಿಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
-
#WATCH | IAF has inducted 3 x Dhruv helicopters at Pantnagar for flood relief efforts. 25 people marooned at 3 locations near Sunder Khal village were airlifted to safer areas by these helicopters.
— ANI (@ANI) October 19, 2021 " class="align-text-top noRightClick twitterSection" data="
(Video Source: IAF)#uttarakhandrains pic.twitter.com/s9rjjaOaFt
">#WATCH | IAF has inducted 3 x Dhruv helicopters at Pantnagar for flood relief efforts. 25 people marooned at 3 locations near Sunder Khal village were airlifted to safer areas by these helicopters.
— ANI (@ANI) October 19, 2021
(Video Source: IAF)#uttarakhandrains pic.twitter.com/s9rjjaOaFt#WATCH | IAF has inducted 3 x Dhruv helicopters at Pantnagar for flood relief efforts. 25 people marooned at 3 locations near Sunder Khal village were airlifted to safer areas by these helicopters.
— ANI (@ANI) October 19, 2021
(Video Source: IAF)#uttarakhandrains pic.twitter.com/s9rjjaOaFt
ಇದನ್ನೂ ಓದಿರಿ: ಉತ್ತರಾಖಂಡದಲ್ಲಿ ಮಳೆಯಾರ್ಭಟಕ್ಕೆ 40 ಸಾವು: ನೈನಿತಾಲ್ ಸಂಪರ್ಕ ಕಡಿತ, ಪ್ರವಾಹ ಪರಿಸ್ಥಿತಿ ನಿರ್ಮಾಣ
ಉತ್ತರಾಖಂಡದ ವಿವಿಧ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡವರ ರಕ್ಷಣಾ ಕಾರ್ಯ ಮುಂದುವರೆದಿದ್ದು, ಇಲ್ಲಿಯವರೆಗೆ ಎನ್ಡಿಆರ್ಫ್ 300 ಮಂದಿ ರಕ್ಷಣೆ ಮಾಡಿದೆ. ಉತ್ತರಾಖಂಡದಲ್ಲಿನ ಭೀಕರ ಮಳೆಯಲ್ಲಿ ಪ್ರಾಣ ಕಳೆದುಕೊಂಡಿರುವ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಕೇಂದ್ರದಿಂದ ಅಗತ್ಯ ನೆರವು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ.