ETV Bharat / bharat

ಹಿಮಾಲಯಕ್ಕೆ ಬೆದರಿಕೆವೊಡ್ಡಿದ ಉತ್ತರಾಖಂಡ ಅರಣ್ಯದ ಬೆಂಕಿ: ಇದಕ್ಕೆಲ್ಲಾ ಕಾರಣ ಏನು?

ಹಿಮಾಲಯದ ಅಸ್ತಿತ್ವದ ಅಪಾಯದ ಸೂಚನೆಗಳು ವಿಜ್ಞಾನಿಗಳನ್ನು ದೀರ್ಘಕಾಲದಿಂದಲೂ ಕಾಡುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಬೇಡವಾದ ಕಪ್ಪು ಛಾಯೆಯು ಹಿಮಾಲಯದ ಬಿಳಿ ಶಿಖರಗಳನ್ನು ತಲುಪುವ ಮೂಲಕ ಪರಿಸರದಲ್ಲಿ ಕೆಲವು ಹೊಸ ಬದಲಾವಣೆಗಳನ್ನು ತರುವ ಸಾಧ್ಯತೆಯನ್ನು ಹೆಚ್ಚಿಸಿದೆ.

ಹಿಮಾಲಯಕ್ಕೆ ಬೆದರಿಕೆ ಒಡ್ಡಿದ ಉತ್ತರಾಖಂಡ ಅರಣ್ಯದ ಬೆಂಕಿ: ಇದಕ್ಕೆಲ್ಲಾ ಕಾರಣ ಏನು?

author img

By

Published : May 2, 2022, 8:56 PM IST

Updated : May 2, 2022, 9:26 PM IST

ಡೆಹ್ರಾಡೂನ್(ಉತ್ತರಾಖಂಡ): ಮಾನವನ ತಪ್ಪುಗಳು ಹಿಮಾಲಯದಲ್ಲಿ ಹೊಸ ಅಪಾಯವನ್ನು ಸೃಷ್ಟಿಸುತ್ತಿವೆ. ಇದರ ಅರಿವು ಯಾರಿಗೂ ಇಲ್ಲವೆಂದಲ್ಲ, ವಿಜ್ಞಾನಿಗಳು ಈ ಅಪಾಯವನ್ನು ಪದೇ ಪದೇ ಒತ್ತಿ ಹೇಳುತ್ತಿದ್ದಾರೆ. ಇದರ ನಡುವೆ ಉತ್ತರಾಖಂಡದ ಕಾಡುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಉರಿಯುತ್ತಿವೆ. ಪರ್ವತಗಳ ಮೇಲಿನ ಜ್ವಾಲೆಗಳು ಆಕಾಶವನ್ನು ತಲುಪುತ್ತಿವೆ. ಇದರಿಂದಾಗಿ ಸುತ್ತಲೂ ಹೊಗೆಯ ಮೋಡ ಆವರಿಸಿದ್ದು, ಪರಿಸರದಿಂದ ಹೊಸ ಬೆದರಿಕೆ ಪ್ರಾರಂಭವಾಗಿದೆ.

ಉತ್ತರಾಖಂಡದ ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಅರ್ಥ್ ಸೈನ್ಸ್​ನ ವಿಜ್ಞಾನಿಗಳು ಹಿಮಾಲಯದ ನಂಬರ್ ಒನ್ ಶತ್ರುವನ್ನು ಪತ್ತೆ ಮಾಡಿದ್ದಾರೆ. ಹಿಮಾಲಯ ಮತ್ತು ಅದರ ಹಿಮನದಿಗಳ ಬಗ್ಗೆ ದೀರ್ಘಕಾಲ ಸಂಶೋಧನೆ ನಡೆಸುತ್ತಿರುವ ವಿಜ್ಞಾನಿಗಳು, ಹಿಮಾಲಯದ ಬಿಳಿ ಶಿಖರಗಳ ಮೇಲೆ ಇಂಗಾಲವು ತನ್ನ ಹೆಜ್ಜೆಗಳನ್ನು ವಿಸ್ತಾರವಾಗಿ ಹರಡುತ್ತಿದೆ ಎಂದು ಹೇಳಿದ್ದಾರೆ. ಹಿಮಾಲಯದಲ್ಲಿನ ಇಂಗಾಲದ ಪ್ರಮಾಣವು ಎರಡೂವರೆ ಪಟ್ಟು 11,800 ನ್ಯಾನೊಗ್ರಾಮ್ / ಕ್ಯೂಬಿಕ್ ಮೀಟರ್‌ಗೆ ಏರಿದೆ. ಇದು ಹಿಮನದಿಯ ಮಂಜುಗಡ್ಡೆಯನ್ನು ಕರಗಿಸಲು ಬೆಂಕಿಯಲ್ಲಿ ತುಪ್ಪವನ್ನು ಸುರಿಯುವ ಕೆಲಸ ಮಾಡುತ್ತಿದೆ. ತಾಪಮಾನ ಏರಿಕೆಯಿಂದ ಇಡೀ ಹಿಮಾಲಯ ಪರಿಸರ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಂಡುಕೊಳ್ಳಲಾಗಿದೆ.

ಕಾರ್ಬನ್ ಕರಗುವ ಮಂಜುಗಡ್ಡೆ: ಇತ್ತೀಚಿನ ದಿನಗಳಲ್ಲಿ ಕಾಡುಗಳಲ್ಲಿನ ಬೆಂಕಿ ಹಿಮಾಲಯದ ಮೇಲೆ ಇಂಗಾಲವನ್ನು ಹೆಚ್ಚಿಸುತ್ತಿದೆ. ಈ ಹಿಂದೆ ವಾಡಿಯಾ ಜಿಯೋಸೈನ್ಸ್ ಸೆಂಟರ್ ಗಂಗೋತ್ರಿಯ ಚಿರ್ ಬಾಸಾ ಮತ್ತು ಭೋಜ್ ಬಾಸಾ ಪ್ರದೇಶಗಳಲ್ಲಿ ಇಂಗಾಲದ ಪ್ರಮಾಣವನ್ನು ಅಳೆಯಲು ಸಾಧನಗಳನ್ನು ಸ್ಥಾಪಿಸಿತ್ತು. ಇದರಲ್ಲಿ ಆಘಾತಕಾರಿ ಸಂಗತಿಗಳು ಮುನ್ನೆಲೆಗೆ ಬಂದಿದ್ದವು. ವಾಡಿಯಾ ಇನ್‌ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ಮಾಜಿ ವಿಜ್ಞಾನಿ ಡಾ. ಬಿ ಪಿ ದೋವಲ್ ಈ ಬಗ್ಗೆ ಮಾತನಾಡಿ, ಉತ್ತರಾಖಂಡದಲ್ಲಿನ ಕಾಳ್ಗಿಚ್ಚು ಹಿಮಾಲಯದಲ್ಲಿ ಇಂಗಾಲವನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ. ಇಲ್ಲಿ ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸುವ ಬದಲು, ಇಂಗಾಲವನ್ನು ಹೀರಿಕೊಳ್ಳಲಾಗುತ್ತದೆ. ಇದರಿಂದಾಗಿ ಹಿಮನದಿಗಳು ಕರಗುವ ಸಾಧ್ಯತೆ ಇನ್ನಷ್ಟು ವೇಗವಾಗಿ ಹೆಚ್ಚಾಗಿದೆ ಎಂದಿದ್ದಾರೆ.

ಇದನ್ನೂ ಓದಿ: ಜರ್ಮನಿಯಲ್ಲಿ ಮೋದಿ: ಐಜಿಸಿ ಸಮಾಲೋಚನೆ ನಡೆಸಿದ ಪ್ರಧಾನಿ, ಜರ್ಮನ್ ಚಾನ್ಸೆಲರ್

ಹಿಮಾಲಯ ಶ್ರೇಣಿಯಲ್ಲಿ ಹೆಚ್ಚುತ್ತಿರುವ ಇಂಗಾಲದ ಪ್ರಮಾಣ: ಹಿಮಾಲಯ ಶ್ರೇಣಿಯಲ್ಲಿ ಇಂಗಾಲದ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಇದರ ಪ್ರಮಾಣವನ್ನು 11,800 ನ್ಯಾನೊಗ್ರಾಂ/ಕ್ಯೂಬಿಕ್ ಮೀಟರ್ ಎಂದು ದಾಖಲಿಸಲಾಗಿದೆ. ಸಾಮಾನ್ಯವಾಗಿ ಈ ಪ್ರಮಾಣವು ಸುಮಾರು ಒಂದು ಸಾವಿರ ನ್ಯಾನೊಗ್ರಾಂಗಳಷ್ಟು ಇರಬೇಕು. ತಾಪಮಾನದ ಹೆಚ್ಚಳದೊಂದಿಗೆ, ಹಿಮನದಿಗಳಿಂದ ಮಂಜುಗಡ್ಡೆ ಕರಗುವ ಪ್ರಕ್ರಿಯೆಯು ಈಗಾಗಲೇ ನಡೆಯುತ್ತಿದೆ. ಇಂಗಾಲದ ಸೂಕ್ಷ್ಮ ಹಿಮನದಿಗಳಿಗೆ ಇದು ಹೆಚ್ಚು ಮಾರಕ ಎಂದು ಕಂಡುಕೊಳ್ಳಲಾಗಿದೆ. ಈ ಮೂಲಕ ಹಿಮಾಲಯವು ವಿಶ್ವದಲ್ಲಿ ಕ್ಷಿಪ್ರ ಹವಾಮಾನ ಬದಲಾವಣೆಯ ಅತಿದೊಡ್ಡ ಮತ್ತು ನೇರ ಪರಿಣಾಮವನ್ನು ಬೀರುತ್ತಿದೆ.

ಹಿಮಾಲಯಕ್ಕೆ ಬೆದರಿಕೆವೊಡ್ಡಿದ ಉತ್ತರಾಖಂಡ ಅರಣ್ಯದ ಬೆಂಕಿ: ಇದಕ್ಕೆಲ್ಲಾ ಕಾರಣ ಏನು?

ಸ್ಲೈಡಿಂಗ್ ಟ್ರೀ ಲೈನ್: ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮರದ ಸಾಲು ಕ್ರಮೇಣ ಕಡಿಮೆ ಆಗುತ್ತಿದೆ ಮತ್ತು ಪ್ರಾಣಿಗಳ ಅವಾಸ ಸ್ಥಾನಗಳು ಸಹ ನಶಿಸುತ್ತಿವೆ. ಉತ್ತರಾಖಂಡ ಎರಡು ಸಂಪತ್ತನ್ನು ಹೊಂದಿದೆ. ಮೊದಲನೆಯದು ಅರಣ್ಯ ಸಂಪತ್ತು ಮತ್ತು ಎರಡನೆಯದು ಹಿಮನದಿಗಳು. ಉತ್ತರಾಖಂಡದಲ್ಲಿ ನದಿಗಳ ರೂಪದಲ್ಲಿ ನೀರಿನ ಸಂಪತ್ತು ಇದೆ. ಆದರೆ, ಒಂದೆಡೆ ಕಾಡುಗಳು ಉರಿಯುತ್ತಿವೆ. ಅದರ ನೇರ ಪರಿಣಾಮ ಹಿಮನದಿಯ ಮೇಲೆ ಆಗುತ್ತಿದೆ ಎಂದಿದ್ದಾರೆ ವಿಜ್ಞಾನಿ ಬಿ ಪಿ ದೋವಲ್.

ಉತ್ತರಾಖಂಡಕ್ಕೆ ಬಿಕ್ಕಟ್ಟು: ಅರಣ್ಯದಲ್ಲಿ ಬೆಂಕಿಯ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆ ಉತ್ತರಾಖಂಡದಲ್ಲಿ ವಿವಿಧ ಅನಾಹುತಗಳು ಹೆಚ್ಚುತ್ತಿವೆ ಎಂದು ಡಾ. ದೋವಲ್ ಹೇಳುತ್ತಾರೆ. ಕರಗುತ್ತಿರುವ ಹಿಮನದಿಗಳು ಮತ್ತು ನಿರಂತರವಾಗಿ ಹೆಚ್ಚುತ್ತಿರುವ ತಾಪಮಾನಗಳು ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಸೂಚಿಸುತ್ತಿವೆ. ಹಿಮನದಿಗಳ ಕರಗುವಿಕೆಯ ಪ್ರಮಾಣ ಹೆಚ್ಚಳದೊಂದಿಗೆ ಹಿಮಾಲಯದಲ್ಲಿ ಹಿಮಕುಸಿತದ ಅಪಾಯವು ಹೆಚ್ಚಾಗುತ್ತದೆ. ಇದು ಪ್ರಮುಖ ಹಾನಿಯನ್ನುಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿಮಾಲಯದಲ್ಲಿ ಎಲ್ಲವೂ ಸರಿಯಾಗಿಲ್ಲ: ಗಂಗೋತ್ರಿ, ಮಿಲಂ, ಸುಂದರ್ ಧುಂಗ, ನಿಯೋಲಾ ಮತ್ತು ಚಿಪಾ ಹಿಮನದಿಗಳು ಕಡಿಮೆ ಎತ್ತರದಲ್ಲಿ ನೆಲೆಗೊಂಡಿರುವ ಕಾರಣ ಇಂಗಾಲದಿಂದ ಹೆಚ್ಚು ಅಪಾಯದಲ್ಲಿದೆ. ಈ ಎಲ್ಲಾ ಹಿಮನದಿಗಳು ಹೆಚ್ಚಿನ ನದಿಗಳ ಮೂಲಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ತೀರಾ ಹದಗೆಡಲಿದೆ. ಹಿಮಾಲಯದಲ್ಲಿ ಯಾವುದೂ ಸರಿಯಿಲ್ಲ ಎಂಬುದನ್ನು ನೀರ್ಗಲ್ಲುಗಳ ಕರಗುವಿಕೆಯ ವೇಗ ಹೇಳುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಎರಡು ರಾಜ್ಯಗಳಲ್ಲಿ ಇಂಗಾಲ ಹೊರಸೂಸುವಿಕೆಯ ಅಧ್ಯಯನ: ಭಾರತ ಸರ್ಕಾರವು ಎರಡು ರಾಜ್ಯಗಳಲ್ಲಿ ಇಂಗಾಲದ ಹೊರಸೂಸುವಿಕೆಯ ಅಧ್ಯಯನವನ್ನು ನಡೆಸುವ ಜವಾಬ್ದಾರಿಯನ್ನು ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಗೆ ವಹಿಸಿದೆ. ಉತ್ತರಾಖಂಡ ಮತ್ತು ಮಧ್ಯಪ್ರದೇಶ ಈ ಎರಡು ರಾಜ್ಯಗಳಲ್ಲಿ ಈ ಆಧ್ಯಯನ ನಡೆಸಲಾಗುತ್ತಿದೆ.

Last Updated : May 2, 2022, 9:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.