ಚಂಪಾವತ್ (ಉತ್ತರಾಖಂಡ್): ತಮ್ಮ ತವರು ಕ್ಷೇತ್ರವಾದ ಚಂಪಾವತ್ ನಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇಲ್ಲಿನ ಜನರೊಂದಿಗೆ ಬೆರೆತು ಅವರ ಕಷ್ಟ ಸುಖಗಳನ್ನು ಆಲಿಸಿದ್ದಾರೆ. ಇದೇ ವೇಳೆ ಅವರು ತಮ್ಮ ನೇತೃತ್ವದರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಸಂಬಂಧ ಅಭಿಪ್ರಾಯವನ್ನು ಪಡೆದಿದ್ದಾರೆ.
ಚಹಾ ಸವಿದು ಸಂಭಾಷಣೆ: ಗುರುವಾರ ಟೆಂಪಲ್ ರನ್ ನಡೆಸಿದ ಸಿಎಂ ಇಂದು ಮುಂಜಾನೆ ಚಂಪಾವತ್ನ ರಸ್ತೆಯಲ್ಲಿ ಮುಂಜಾನೆ ವಾಕ್ ಮಾಡುವ ಮೂಲಕ ಸ್ಥಳೀಯರಿಂದಿಗೆ ಸಂಭಾಷಣೆ ಇಳಿದಿದ್ದುರು. ಅವರ ಈ ವರ್ತನೆ ಕಂಡ ಅನೇಕ ಮಂದಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಹಿರಿ ಕಿರಿಯರೆನ್ನದೇ ಎಲ್ಲರನ್ನು ಪ್ರೀತಿಯಂದ ಮಾತನಾಡಿದ ಅವರ ಪರಿಗೆ ಜನರು ಕೂಡ ಹರ್ಷ ವ್ಯಕ್ತಪಡಿಸಿದರು. ಬೆಳಗಿನ ಸೂರ್ಯ ನಮಸ್ಕಾರದ ಬಳಿಕ ನಗರದ ರಸ್ತೆಯಲ್ಲಿ ವಾಕಿಂಗ್ ಆರಂಭಿಸಿದ ಅವರು, ಅಲ್ಲಿಯೇ ರಸ್ತೆ ಬದಿಯಲ್ಲಿದ್ದ ಟೀ ಅಂಗಡಿಗೆ ಹೋಗಿ ಚಹಾ ಸವಿದಿದ್ದಾರೆ. ನಗರದ ಬ್ಲಾಕ್ ರೋಡ್ನಲ್ಲಿದ್ದ ನಿತ್ಯಾನಂದ ಜೋಶಿ ಅವರ ಚಹಾದ ಅಂಗಡಿಗೆ ತೆರಳಿದ ಸಿಎಂ, ಚಹಾದಂಗಡಿ ನಡೆಸುತ್ತಿದ್ದ ಹಿರಿಯ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸಿ, ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಅವರ ಸಮಸ್ಯೆ ಆಲಿಸಿದ ಅವರು, ತಮ್ಮ ಸರ್ಕಾರದ ಕಲ್ಯಾಣ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಪ್ರತಿಕ್ರಿಯೆಯನ್ನು ಪಡೆದಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಧಾಮಿ, ಸಾರ್ವಜನಿಕರ ಮುಖದಲ್ಲಿ ಕಾಣುವ ಸಂತೃಪ್ತಿಯ ಭಾವವು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲು ನಮ್ಮನ್ನು ಪ್ರೇರೇಪಿಸುತ್ತದೆ ಎಂದಿದ್ದಾರೆ.
ಜನರ ಸಮಸ್ಯೆ ಆಲಿಸಿದ ಸಿಎಂ: ಇನ್ನು ಟೀ ಅಂಗಡಿಯಲ್ಲಿ ಅವರು ಸಂಭಾಷಣೆ ನಡೆಸುತ್ತಿದ್ದ ವೇಳೆ ತಮ್ಮನ್ನು ನೋಡುತ್ತಿದ್ದ ಪುಟ್ಟ, ಮುಗ್ದ ಬಾಲಕನನ್ನು ರಿಯಾಂಶ್ನನ್ನು ಕೂಡ ಅವರು ಮಾತನಾಡಿಸಿ, ಗಮನ ಸೆಳೆದರು. ಇದಾದ ಬಳಿಕ ಅವರು ನಾಗನಾಥ್ ವಾರ್ಡ್ಗೆ ಬಂದು ಅಲ್ಲಿ ಕುಡಿಯುವ ನೀರು ತುಂಬಿಸುತ್ತಿದ್ದ ಮಹಿಳೆಯರನ್ನು ಮಾತನಾಡಿಸಿದ್ದು, ನೀರಿನ ವ್ಯವಸ್ಥೆ ಕುರಿತು ಕೇಳಿದ್ದಾರೆ. ಈ ವೇಳೆ ಮಹಿಳೆಯರು ನೀರು ಪ್ರತಿನಿತ್ಯ ಸಿಗುತ್ತಿದ್ದು, ಯಾವುದೇ ಸಮಸ್ಯೆ ಎದುರಿಸುತ್ತಿಲ್ಲ ಎಂದಿದ್ದಾರೆ
ಇದಾದ ಬಳಿಕ ಗೊರಲ್ಗೊಂಡ್ ಮೈದಾನದ ಸಣ್ಣ ಮಾರುಕಟ್ಟೆಗೆ ಅವರು ಭೇಟಿ ನೀಡಿದರು. ಇಲ್ಲಿ ತರಕಾರಿ ಮಾರಾಟಗಾರರು ಮತ್ತು ಇತರೆ ಅಂಗಡಿ ಮಾಲೀಕರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದರು. ನಂತರ ಕೀಡಾ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದ ಯುವಕರನ್ನು ಭೇಟಿಯಾಗಿ ಅವರ ಭವಿಷ್ಯಕ್ಕೆ ಹಾರೈಸಿದರು.
ಗುರುವಾರ ಅವರು ಚಂಪಾವತ್‌ನಲ್ಲಿ ವಿವಿಧ ದೇಗುಲಗಳಿಗೆ ಭೇಟಿ ನೀಡಿದ್ದರು. ಶುಕ್ರ ವಾರ ಅವರು ಸಾರಿಗೆ ಇಲಾಖೆಯ ವಲಯ ಇನ್ಸ್ಪೆಕ್ಟರ್ ಕಚೇರಿಯನ್ನು ಉದ್ಘಾಟಿಸಿದರು. ಬಳಿಕ ಅವರು ನಕಲು ವಿರೋಧಿ ಕಾಯ್ದೆಯನ್ನು ಜಾರಿಗೆ ತಂದ ಹಿನ್ನಲೆ ಬಿಜೆಪಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಮತ್ತು ಅಬಾರ್ ಮೆರವಣಿಗೆಯಲ್ಲಿ ಭಾಗಿಯಾದರು. ಚಂಪಾವತ್‌ನಲ್ಲಿ ಜಿಐಸಿ ಚೌಕ್‌ನಿಂದ ಗೋರಲ್‌ಚೋಡ್ ಮೈದಾನದವರೆಗೆ ಈ ಮೆರವಣಿಗೆ ಸಾಗಿತು.
ಇದನ್ನೂ ಓದಿ: 140 ಸಿನಿಮಾಗಳಲ್ಲಿ ಅಭಿನಯ, 6 ಬಾರಿ ಸಿಎಂ ಹುದ್ದೆ!: ಜಯಲಲಿತಾ ವರ್ಣರಂಜಿತ ಬದುಕಿನ ಚಿತ್ರಣ