ಉತ್ತರಕಾಶಿ, ಉತ್ತರಾಖಂಡ್: ಟ್ರೆಕ್ಕಿಂಗ್ ಹೊರಟವರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರ ಮೃತದೇಹ ಪತ್ತೆಯಾಗಿದ್ದು, ಒಟ್ಟು ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗುರುವಾರವಷ್ಟೇ ಕಾಣೆಯಾಗಿದ್ದ ಇಬ್ಬರನ್ನು ರಕ್ಷಿಸಲಾಗಿದ್ದು, ಅವರಿಗೆ ಉತ್ತರಕಾಶಿ ಮತ್ತು ಹರ್ಷಿಲ್ಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೇ ದಿನವೇ ಐದು ಮಂದಿಯ ಮೃತದೇಹ ಪತ್ತೆಯಾಗಿದೆ.
ಇನ್ನಿಬ್ಬರು ಕಾಣೆಯಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆದಿದೆ. ಹೆಲಿಕಾಪ್ಟರ್ ಸಹಾಯದಿಂದ ಅವರನ್ನು ಹುಡುಕಲಾಗುತ್ತಿದೆ. ವಾತಾವರಣ ಕೂಡಾ ಶೋಧ ಕಾರ್ಯಕ್ಕೆ ಸಹಕರಿಸುತ್ತಿಲ್ಲ ಎಂದು ಬಿಹಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಎಂಟು ಮಂದಿಯಲ್ಲಿ ಓರ್ವ ದೆಹಲಿ ನಿವಾಸಿಯಾಗಿದ್ದು, ಇನ್ನುಳಿದವರು ಪಶ್ಚಿಮ ಬಂಗಾಳಕ್ಕೆ ಸೇರಿದವರಾಗಿದ್ದಾರೆ. ಇನ್ನುಳಿದ ಮೂವರು ಅಡುಗೆ ಕೆಲಸದವರಾಗಿದ್ದರು. ಅಕ್ಟೋಬರ್ 11ರಂದು ಉತ್ತರಕಾಶಿ ಜಿಲ್ಲೆಯ ಹರ್ಷಿಲ್ನಿಂದ ಇವರು ಟ್ರೆಕ್ಕಿಂಗ್ ಆರಂಭಿಸಿದ್ದರು.
ಟ್ರೆಕ್ಕಿಂಗ್ನಲ್ಲಿದ್ದವರು: ದೆಹಲಿಯ ಅನಿತಾ ರಾವತ್ (38), ಪಶ್ಚಿಮ ಬಂಗಾಳದ ಮಿಥುನ್ ದರಿ (31), ತನ್ಮಯ್ ತಿವಾರಿ (30), ವಿಕಾಶ್ ಮಕಲ್ (33), ಸೌರವ್ ಘೋಷ್ (34), ಸವಿಯನ್ ದಾಸ್ (28), ರಿಚರ್ಡ್ ಮಂಡಲ್ (30) ಮತ್ತು ಸುಕೆನ್ ಮಾಂಜಿ (43) ಮತ್ತು ಅಡುಗೆ ಸಿಬ್ಬಂದಿ ಉತ್ತರಕಾಶಿಯ ಪುರೋಲಾದ ದೇವೇಂದ್ರ (37), ಜ್ಞಾನ ಚಂದ್ರ (33) ಮತ್ತು ಉಪೇಂದ್ರ (32) ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ವಿದ್ಯಾಭ್ಯಾಸ ಮಾಡಲು ಹಣವಿಲ್ಲದೇ 17 ವರ್ಷದ ಬಾಲೆ ಆತ್ಮಹತ್ಯೆ?!