ಗೋರಖ್‌ಪುರ, ಉತ್ತರಪ್ರದೇಶ: ಚೀನಾದ ಇಬ್ಬರು ಯುವಕರು ಯುಪಿಐ ಮೂಲಕ ಗೋರಖ್‌ಪುರದ ವ್ಯಕ್ತಿಯೊಬ್ಬರ ಖಾತೆಯಿಂದ ವಾರದಲ್ಲಿ 1.52 ಕೋಟಿ ರೂ. ವ್ಯವಹಾರ ನಡೆಸಿದ್ದಾರೆ. ಕೇರಳದ ಸುಮಾರು 1000 ಖಾತೆಗಳಿಗೆ ಚೀನಾದ ಯುವಕರು ಹಣ ಕಳುಹಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.
ಶಾಂತಿಪುರಂ ನಿವಾಸಿ ಸಚ್ಚಿದಾನಂದ ದುಬೆ ಅವರು ಎಸ್‌ಎಸ್‌ಪಿ ಗೌರವ್ ಗ್ರೋವರ್‌ಗೆ ದೂರು ಪತ್ರ ಮತ್ತು ಖಾತೆಯ 200 ಪುಟಗಳ ವ್ಯವಹಾರದ ದಾಖಲೆಗಳನ್ನು ಸಲ್ಲಿಸಿದ್ದಾರೆ. ಕೆಲವರು ತಮ್ಮ ಖಾತೆಯೊಂದಿಗೆ ತಪ್ಪು ವಹಿವಾಟು ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೂನ್ 2022 ರಲ್ಲಿ ಸಂಬಂಧಿಕರೊಬ್ಬರು ಖಾಸಗಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದಿದ್ದರು. ಬಳಿಕ ಆತ ಬ್ಯಾಂಕ್‌ಗೆ ಕರೆದೊಯ್ದು ಮಹಿಳಾ ಉದ್ಯೋಗಿಯೊಬ್ಬರನ್ನು ಪರಿಚಯಿಸಿದ್ದರು. ಖಾತೆ ತೆರೆದ ಬಳಿಕ ನಾನು ಯಾವುದೇ ವಹಿವಾಟು ನಡೆಸಿಲ್ಲ ಎಂದು ಸಚ್ಚಿದಾನಂದ ಹೇಳಿದ್ದಾರೆ.
ಸಚ್ಚಿದಾನಂದ ಅವರ ಖಾತೆಯಲ್ಲಿ ಇನ್ನೊಬ್ಬರ ಮೊಬೈಲ್ ನಂಬರ್ ನಮೂದಿಸಿ ಇಂಟರ್‌ನೆಟ್ ಬ್ಯಾಂಕಿಂಗ್ ಮಾಡಿರುವುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಚೀನಾದ ನಿಕೋಲಸ್ ಮತ್ತು ಕಾಯಿಲ್ಸ್ ಸಚ್ಚಿದಾನಂದ ಖಾತೆಯಿಂದ ಈ ವಹಿವಾಟು ನಡೆಸಿರುವುದು ಬೆಳಕಿಗೆ ಬಂದಿದೆ. ಸಚ್ಚಿದಾನಂದ್ ಅವರ ಸಂಬಂಧಿ ಬಳಿ ಅವರ ಬಗ್ಗೆ ನಿಖರ ಮಾಹಿತಿ ಇಲ್ಲ.
ಚೀನಾದ ಯುವಕರ ಹೆಸರು ಮಾತ್ರ ಅವರು ತಿಳಿದಿದ್ದರು. ಅವರನ್ನು ಯಾವತ್ತೂ ಭೇಟಿ ಮಾಡಿಲ್ಲ. ಚೀನಾದ ಯುವಕರಿಬ್ಬರೂ ಇಲ್ಲಿನ ಕಂಪನಿಯೊಂದರಲ್ಲಿ ಸಂಬಂಧ ಹೊಂದಿದ್ದಾರೆ ಎಂಬುದು ಸೇರಿ ಪೊಲೀಸರು ತನಿಖೆ ಮೂಲಕ ಅನೇಕ ವಿಷಯಗಳನ್ನು ಕಲೆ ಹಾಕಿದ್ದಾರೆ. ಸಿಒ ಗೋರಖನಾಥ್ ರತ್ನೇಶ್ ಸಿಂಗ್ ಅವರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ ಎಂದು ನಗರ ಎಸ್ಪಿ ಕೃಷ್ಣ ಕುಮಾರ್ ವಿಷ್ಣೋಯ್ ತಿಳಿಸಿದ್ದಾರೆ.
ಓದಿ: ಎಟಿಎಸ್ ಭರ್ಜರಿ ಕಾರ್ಯಾಚರಣೆ.. ಉಗ್ರರ ಜೊತೆ ನಂಟು ಆರೋಪ, ಎಂಟು ಶಂಕಿತರ ಬಂಧನ