ETV Bharat / bharat

1 ಲಕ್ಷ+ ಕ್ಲಬ್​.. ಉತ್ತರಪ್ರದೇಶದಲ್ಲಿ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು ಬೀಗಿದವರು!

author img

By

Published : Mar 11, 2022, 4:26 PM IST

ಇಡೀ ದೇಶದ ಗಮನ ಸೆಳೆದಿದ್ದ ಉತ್ತರಪ್ರದೇಶ ಚುನಾವಣೆಯಲ್ಲಿ ಕೆಲ ಅಭ್ಯರ್ಥಿಗಳು ರಾರಾಜಿಸಿದರೆ, ಇನ್ನು ಕೆಲ ಘಟಾನುಘಟಿಗಳು ಮಣ್ಣು ಮುಕ್ಕಿದ್ದಾರೆ. 1 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಎದುರಾಳಿಗೆ ಗೆಲುವಿನ ಕನಸೂ ಬೀಳದಂತೆ ಮಾಡಿ ಏಕಸ್ವಾಮ್ಯ ಮೆರೆದಿದ್ದಾರೆ..

candidates
ಬೀಗಿದವರು

ನವದೆಹಲಿ : ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದು ಇತಿಹಾಸ ಬರೆದಿದೆ. ಈ ಚುನಾವಣೆಯಲ್ಲಿ ವಿವಿಧ ಪಕ್ಷಗಳ 10 ಅಭ್ಯರ್ಥಿಗಳು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಎದುರಾಳಿ ವಿರುದ್ಧ ಪಾರಮ್ಯ ಮೆರೆದಿದ್ದಾರೆ.

ಇದರಲ್ಲಿ ಬಿಜೆಪಿಯ ಸುನಿಲ್​ಕುಮಾರ್ ಶರ್ಮಾ ಅವರು ರಾಜ್ಯದಲ್ಲಿಯೇ ಅತ್ಯಧಿಕ ಅಂದರೆ 2.14 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ಅಲ್ಲದೇ, ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಇದೇ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಅಂತಹ 10 ಜನರ ಮಾಹಿತಿ ಇಲ್ಲಿದೆ.

1. ಬಿಜೆಪಿಯ ಸುನಿಲ್​ಕುಮಾರ್ ಶರ್ಮಾ ಅವರು ಸಾಹಿಬಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿ, ತಮ್ಮ ಎದುರಾಳಿ ಸಮಾಜವಾದಿ ಪಕ್ಷದ ಅಮರ್ಪಾಲ್ ಶರ್ಮಾ ಅವರನ್ನು 2.14 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದು ಉತ್ತರಪ್ರದೇಶದಲ್ಲಿ ಈವರೆಗಿನ ಭಾರೀ ಅಂತರದ ಗೆಲುವು ಎನ್ನಲಾಗಿದೆ.

2. ಬಿಜೆಪಿಯ ಪಂಕಜ್ ಸಿಂಗ್ ಅವರು ನೋಯ್ಡಾ ಕ್ಷೇತ್ರದಿಂದ ಕಣಕ್ಕಿಳಿದು 1.81 ಲಕ್ಷ ಮತಗಳ ಅಂತರದಿಂದ ಎಸ್​ಪಿಯ ಸುನೀಲ್ ಚೌಧರಿ ಅವರನ್ನು ಸೋಲಿಸಿದ್ದಾರೆ.

3. ಮೀರತ್ ಕೇಂದ್ರ ಕ್ಷೇತ್ರದಲ್ಲಿ ಅಮಿತ್ ಅಗರ್ವಾಲ್ ಅವರು 1.18 ಲಕ್ಷ ಮತಗಳ ಅಂತರದಿಂದ ಬಿಎಸ್​ಪಿಯ ಅಮಿತ್​ ಶರ್ಮಾ ಅವರ ವಿರುದ್ಧ ಗೆದ್ದು ಬಿಜೆಪಿಗೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

4. ಬಿಜೆಪಿಯ ಪುರುಷೋತ್ತಮ್ ಖಂಡೇಲ್ವಾಲ್ ಅವರು ಬಿಎಸ್​ಪಿಯ ಶಬ್ಬೀರ್​ ಅಬ್ಬಾಸ್​ ವಿರುದ್ಧ ಆಗ್ರಾ ಉತ್ತರದಲ್ಲಿ 1.12 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.

5. ಮೆಹ್ರೋನಿ ಕ್ಷೇತ್ರದಲ್ಲಿ ಮನೋಹರ್ ಲಾಲ್ 1.1 ಲಕ್ಷ ಮತಗಳಿಂದ ಗೆದ್ದಿದ್ದಾರೆ.

6. ಮಥುರಾದಿಂದ ಶ್ರೀಕಾಂತ್ ಶರ್ಮಾ 1.08 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

7. ಬಿಎಸ್‌ಪಿ ಅಭ್ಯರ್ಥಿಯ ವಿರುದ್ಧ ಲಲಿತ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ರಾಮರತನ್ ಕುಶ್ವಾಹ 1.07 ಮತಗಳ ಅಂತರದಿಂದ ಜಯ ಪಡೆದಿದ್ದಾರೆ.

8. ಬಿಜೆಪಿಯ ಅತುಲ್ ಗರ್ಗ್ ಘಾಜಿಯಾಬಾದ್‌ನಿಂದ 1.05 ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ.

9. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖ್‌ಪುರ ಕ್ಷೇತ್ರದಿಂದ 1.03 ಲಕ್ಷ ಮತಗಳಿಂದ ಗೆದ್ದಿದ್ದಾರೆ.

10. ಅಂಜುಲಾ ಸಿಂಗ್ ಮಹೂರ್ ಅವರು ಹಥ್ರಾಸ್‌ನಲ್ಲಿ ಬಿಎಸ್‌ಪಿಯ ಸಂಜೀವ್ ಕುಮಾರ್ ಅವರನ್ನು 1 ಲಕ್ಷ ಮತಗಳಿಂದ ಸೋಲಿಸಿದರು.

ಬೇರೆ ರಾಜ್ಯದಲ್ಲಿ ಅತಿ ಹೆಚ್ಚಿನ ಅಂತರದ ಗೆಲುವುಗಳು

ಗೋವಾ : ಬಿಜೆಪಿಯ ದೇವಿಯಾ ವಿಶ್ವಜಿತ್ ರಾಣೆ ಅವರು ಪೊರಿಯಮ್ ಅವರನ್ನು 13,943 ಮತಗಳಿಂದ ಗೆದ್ದಿದ್ದಾರೆ.

ಮಣಿಪುರ: ಎಸ್.ಎಸ್. ಒಲಿಶ್ 27,341 ಮತಗಳ ಅಂತರದಿಂದ ಬಿಜೆಪಿಗೆ ದೊಡ್ಡ ಗೆಲುವು ತಂದಿದ್ದಾರೆ.

ಉತ್ತರಾಖಂಡ: ದೋಯಿವಾಲಾ ಕ್ಷೇತ್ರದಲ್ಲಿ ಬಿಜೆಪಿಯ ಬ್ರಿಜ್ ಭೂಷಣ್ ಗೈರೋಲಾ ಅವರು 29,021 ಮತಗಳಿಂದ ಗೆದ್ದಿದ್ದಾರೆ.

ಪಂಜಾಬ್ : ಆಮ್ ಆದ್ಮಿ ಪಕ್ಷದ ಅಮನ್ ಅರೋರಾ ಅವರು ಸುನಮ್ ಕ್ಷೇತ್ರದಲ್ಲಿ 75, 227 ಮತಗಳಿಂದ ಗೆದ್ದಿದ್ದಾರೆ.

ಓದಿ: ಕೇಜ್ರಿವಾಲ್‌ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಪಂಜಾಬ್‌ ನಿಯೋಜಿತ ಸಿಎಂ ಭಗವಂತ್‌ ಮನ್‌!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.