ETV Bharat / bharat

ಲೈಂಗಿಕ ಶಕ್ತಿವರ್ಧಕ ಬಳಸುತ್ತಿದ್ದೀರಾ..ಹಾಗಾದ್ರೆ ಇರಲಿ ಎಚ್ಚರ..!

ಜಾಹೀರಾತುಗಳನ್ನ ನೋಡಿ ಅರ್ಧಂಬರ್ಧ ಜ್ಞಾನದೊಂದಿಗೆ ಲೈಂಗಿಕ ಶಕ್ತಿವರ್ಧನೆಯ ಔಷಧಗಳನ್ನು ಖರೀದಿಸಲು ಹೋಗುವ ಪುರುಷರು ಈ ವರದಿಯನ್ನ ಓದಲೇಬೇಕಿದೆ. ಲೈಂಗಿಕ ಜೀವನವನ್ನು ಸುಧಾರಿಸಲು ಬಳಸುವ ಕೆಲವು ಹಾನಿಕಾರಕವಾಗಬಲ್ಲ ಉತ್ಪನ್ನಗಳು ಮತ್ತು ಅಭ್ಯಾಸಗಳ ಬಗ್ಗೆ ಇಲ್ಲಿದೆ ಮಾಹಿತಿ.

ವೈದ್ಯಕೀಯ ಸಲಹೆ ಇಲ್ಲದೆ ಲೈಂಗಿಕ ಶಕ್ತಿವರ್ಧಕ ಬಳಸುವುದು ಮಾರಕ.

author img

By

Published : Oct 4, 2021, 5:08 PM IST

Updated : Oct 5, 2021, 3:13 PM IST

ಇಂದು ಮಾರುಕಟ್ಟೆಯಲ್ಲಿ ತರಹೇವಾರಿ ಲೈಂಗಿಕ ಶಕ್ತಿವರ್ಧಕಗಳು ಲಭ್ಯವಿದ್ದು, ಪುರುಷರು ಅದರತ್ತ ಹೆಚ್ಚು ಆಕರ್ಷಿತರಾಗಿದ್ದಾರೆ. ಈ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಕೂಡ ಅವುಗಳ ಸೇವನೆಯು ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಸರಿಯಾದ ವೈದ್ಯಕೀಯ ಸಲಹೆಯಿಲ್ಲದೆ ಅವುಗಳ ಸೇವನೆಯು ಮಾರಕವಾಗಬಹುದು.

ನೀವು ಟಿವಿ, ರೇಡಿಯೋ ಹಾಗೂ ಪತ್ರಿಕೆಗಳಲ್ಲಿ ಪುರುಷರನ್ನು ಆಕರ್ಷಿಸಲು ಲೈಂಗಿಕ ಶಕ್ತಿವರ್ಧಕಗಳ ಅದ್ಭುತ ಪ್ರಯೋಜನಗಳನ್ನು ಬಿಂಬಿಸುವ ತೋರಿಸುವ ಅನೇಕ ಜಾಹೀರಾತುಗಳನ್ನು ನೋಡಿರಬಹುದು. ಈ ಜಾಹೀರಾತುಗಳು ಲೈಂಗಿಕ ಜೀವನವನ್ನು ಸುಧಾರಿಸುವ ಬಗ್ಗೆ ಭರವಸೆ ನೀಡುತ್ತವೆ. ಆದರೆ ಲೈಂಗಿಕ ಜೀವನದಲ್ಲಿ ಸಮಸ್ಯೆ ಹೊಂದಿರುವ ಪುರುಷರು ವೈದ್ಯರ ಸಲಹೆ ಪಡೆಯಲು ನಿರಾಕರಿಸುತ್ತಾರೆ. ಜಾಹೀರಾತುಗಳನ್ನ ನೋಡಿ ಅರ್ಧಂಬರ್ಧ ಜ್ಞಾನದೊಂದಿಗೆ ಲೈಂಗಿಕ ಶಕ್ತಿವರ್ಧನೆಯ ಮಾತ್ರೆಗಳು ಅಥವಾ ಲೋಷನ್ ಅಥವಾ ಎಣ್ಣೆ ಇತ್ಯಾದಿಗಳನ್ನು ಖರೀದಿಸಲು ಮುಂದಾಗುತ್ತಾರೆ. ಆದರೆ ಅವುಗಳ ದುಷ್ಪರಿಣಾಮಗಳ ಬಗ್ಗೆ ಕಿಂಚಿತ್ತೂ ಆಲೋಚನೆ ಮಾಡುವುದಿಲ್ಲ.

ಇದನ್ನೂ ಓದಿ: ಲೂಬ್ರಿಕಂಟ್‌ ಬಳಕೆಯಿಂದ ಆಹ್ಲಾದಕರ-ಸುಖಕರ ಸಂಭೋಗ ಸಾಧ್ಯ ; ಇಲ್ಲಿದೆ ಸರಳ ಸೂತ್ರ

ಪುರುಷರು ಸಾಮಾನ್ಯವಾಗಿ ತಮ್ಮ ಲೈಂಗಿಕ ಜೀವನವನ್ನು ಸುಧಾರಿಸಲು ಬಳಸುವ ಕೆಲವು ಹಾನಿಕಾರಕವಾಗಬಲ್ಲ ಉತ್ಪನ್ನಗಳು ಮತ್ತು ಅಭ್ಯಾಸಗಳು ಇಲ್ಲಿವೆ..

ಜಾಹೀರಾತುಗಳು

ಹರಿದ್ವಾರ ಮೂಲದ ಆಂಡ್ರಾಲಜಿಸ್ಟ್ ಡಾ. ವಿಪಿನ್ ಸಿಂಗ್ ಹೇಳುವ ಪ್ರಕಾರ, ಸಾಮಾಜಿಕ ಜಾಲತಾಣಗಳು, ಟಿವಿ ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗುವ ಔಷಧಿಗಳು ಮತ್ತು ತೈಲಗಳ ಜಾಹೀರಾತುಗಳು ಜನರನ್ನು ಗೊಂದಲಕ್ಕೀಡುಮಾಡುತ್ತವೆ. ಜನರೂ ಕೂಡ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಅವುಗಳನ್ನು ಬಳಸುತ್ತಾರೆ. ಈ ಲೈಂಗಿಕ ಶಕ್ತಿವರ್ಧಕಗಳು ಅವರ ಲೈಂಗಿಕ ಶಕ್ತಿಯನ್ನು ವೃದ್ಧಿಸದೇ ಇರಬಹುದು. ಅದರೆ ಅವರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಮಾತ್ರ ಹೆಚ್ಚಿರುತ್ತದೆ.

'ಕ್ವಾಕ್ಸ್' ನೀಡುವ ತಂತ್ರಗಳು ಮತ್ತು ಔಷಧಗಳು

ಡಾಕ್ಟರ್‌ಗಳಂತೆ, ಅನೇಕ ವಿಷಯಗಳಲ್ಲಿ ವಿಶೇಷವಾಗಿ ಔಷಧಿಗಳ ಬಗ್ಗೆ ತಮಗೆ ಅಪಾರ ಜ್ಞಾನವಿರುವಂತೆ ನಟಿಸುವ ಜನರನ್ನು ಕ್ವಾಕ್ಸ್ ಎಂದು ಕರೆಯುತ್ತಾರೆ. ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ಅಥವಾ ಲೈಂಗಿಕ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತವೆ ಎಂದು ರಸ್ತೆಬದಿಯಲ್ಲಿ ಪುಡಿಮಾಡಿದ ಔಷಧಿಗಳನ್ನು, ಮಾತ್ರೆಗಳನ್ನು ಮಾರಾಟ ಮಾಡುವ ಇಂತಹ ಜನರನ್ನು ನೀವು ನೋಡಿರಬಹುದು. ಇಂತಹವರನ್ನು ಯಾವುದೇ ಕಾರಣಕ್ಕೂ ನಂಬಬೇಡಿ ಎನ್ನುತ್ತಾರೆ ವೈದ್ಯರು.

ಮದ್ಯ ಮತ್ತು ಮಾದಕ ವ್ಯಸನ

ಮದ್ಯ ಅಥವಾ ಮಾದಕ ವಸ್ತುಗಳ ಸೇವನೆಯು ಲೈಂಗಿಕ ಅನುಭವವನ್ನು ಸುಧಾರಿಸಬಹುದು ಎಂದು ಭಾವಿಸುವ ಜನರೂ ಇದ್ದಾರೆ. ಆದರೆ ಇದು ಸಂಪೂರ್ಣವಾಗಿ ನಿಜವಲ್ಲ. ಏಕೆಂದರೆ ಈ ಅಭ್ಯಾಸವು ಸ್ವಲ್ಪ ಸಮಯದವರೆಗೆ ಕೆಲಸ ಮಾಡಬಹುದು. ಆದರೆ ಆಲ್ಕೋಹಾಲ್ ಮತ್ತು ಡ್ರಗ್ ಅಡಿಕ್ಷನ್ ಆರೋಗ್ಯಕ್ಕೆ ಹೆಚ್ಚು ಹಾನಿಯುಂಟುಮಾಡುತ್ತದೆ. ನಿರಂತರ ಸೇವನೆಯು ಪುರುಷರಲ್ಲಿ ದುರ್ಬಲತೆಗೆ ಕಾರಣವಾಗಬಹುದು ಎಂದು ಹೇಳುತ್ತಾರೆ ಡಾ. ವಿಪಿನ್ ಸಿಂಗ್.

ಇದನ್ನೂ ಓದಿ: ಲೈಂಗಿಕ ಕ್ರಿಯೆ ನಿಲ್ಲಿಸಿದರೆ ಆರೋಗ್ಯದ ಮೇಲೆ ಉಂಟಾಗುವ ಅಡ್ಡ ಪರಿಣಾಮಗಳೇನು ಗೊತ್ತಾ?

ವೈದ್ಯಕೀಯ ಸಲಹೆಯಿಲ್ಲದೆ ವಯಾಗ್ರ ಬಳಕೆ

ಸಾಮಾನ್ಯವಾಗಿ, ಹೆಚ್ಚಿನ ರಸಾಯನಶಾಸ್ತ್ರಜ್ಞರು ಯಾವುದೇ ವೈದ್ಯರ ಶಿಫಾರಸು ಇಲ್ಲದೆ ವಯಾಗ್ರ ಮಾತ್ರೆಗಳನ್ನು ಮಾರಾಟ ಮಾಡುತ್ತಾರೆ. ಆದರೆ ಸರಿಯಾದ ವೈದ್ಯಕೀಯ ಸಲಹೆಯಿಲ್ಲ. ಇದರ ಬಳಕೆಯು ದುರ್ಬಲತೆ ಮತ್ತು ಲೈಂಗಿಕತೆಗೆ ಅಸಮರ್ಥತೆಯನ್ನು ಉಂಟುಮಾಡಬಹುದು. ಇದಲ್ಲದೇ, ಮಾರುಕಟ್ಟೆಯಲ್ಲಿ ಕಂಡುಬರುವ ವಿವಿಧ ರೀತಿಯ ತೈಲಗಳು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು.

ಮದ್ಯದೊಂದಿಗೆ ಲೈಂಗಿಕ ಶಕ್ತಿವರ್ಧಕ ಔಷಧ ಸೇವನೆ

ಲೈಂಗಿಕ ಸಾಮರ್ಥ್ಯ ಹೆಚ್ಚಿಸಲು ಅನೇಕ ಬಾರಿ ಜನರು ಲೈಂಗಿಕ ಶರ್ಕಿವರ್ಧಕ ಮಾತ್ರೆಯಂತಹ ಔಷಧಿಗಳನ್ನು ಮದ್ಯದೊಂದಿಗೆ ಸೇವಿಸುತ್ತಾರೆ. ಆದರೆ, ಇದು ದೇಹದ ಮೇಲೆ ತುಂಬಾ ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

Last Updated : Oct 5, 2021, 3:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.