ರಾಂಚಿ: ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ ಮೂವರು ಯುವಕರು ಗೂಗಲ್ ಮ್ಯಾಪ್ನಲ್ಲಿ ಮಾರ್ಗ ಹುಡುಕಿ, ಅಪಾಯಕ್ಕೆ ಸಿಲುಕಿದ್ದಾರೆ. ಗೂಗಲ್ ಮ್ಯಾಪ್ ಸಹಾಯದಿಂದ ಹೋದ ಮೂವರಲ್ಲಿ ಇಬ್ಬರು ಕೊಚ್ಚಿಹೋದ ಘಟನೆ ನಡೆದಿದೆ.
ಈ ಮೂವರು ಯುವಕರು, ತಾವು ಅಂದುಕೊಂಡು ಸ್ಥಳಕ್ಕೆ ಹೋಗಲು ಗೂಗಲ್ ಮ್ಯಾಪ್ ಸಹಾಯ ಪಡೆದುಕೊಂಡಿದ್ದಾರೆ. ಆ ಮ್ಯಾಪ್ ನಿರ್ಮಾಣ ಹಂತದಲ್ಲಿರುವ ಸೇತುವೆಯ ಬಳಿಗೆ ಕರೆದೊಯ್ಯಿದಿದೆ. ಇನ್ನೇನು ದಾರಿ ತಪ್ಪಿ ಬಂದಿದ್ದೇವೆ ಎಂದು ಧುಮ್ಮಿಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಲು ಯುವಕರು ಪ್ರಯತ್ನಿಸುತ್ತಿದ್ದಾಗ ಇಬ್ಬರು ಯುವಕರು ನದಿಯ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ. ಒಬ್ಬ ಯುವಕ ಹೇಗೋ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ.
ಏನಿದು ಘಟನೆ?: ಭಾನುವಾರ ರಾತ್ರಿ ಹಜಾರಿಬಾಗ್‌ನ ಮೂವರು ಯುವಕರು, ಆನಂದ್ ಚೌರಾಸಿಯಾ, ಮನೀಶ್ ಮೆಹ್ತಾ ಮತ್ತು ಶಂಕರ್ ಮೆಹ್ತಾ ಎಂಬ ಸ್ನೇಹಿತರು ಬೆಂಗಾಬಾದ್‌ನಿಂದ ಗಿರಿಡಿಹ್‌ನಲ್ಲಿರುವ ತಮ್ಮ ಮನೆಗೆ ವಾಪಸ್ ಆಗುತ್ತಿದ್ದರು. ಮೂವರೂ ಯುವಕರು ತಮ್ಮ ಮನೆಗಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದು, ಗೂಗಲ್ ಮ್ಯಾಪ್‌ನ ಸಹಾಯ ಪಡೆದುಕೊಂಡಿದ್ದರು. ಗಿರಿಡಿಹ್ ಕಾಲೇಜು ನಂತರ, ಗೂಗಲ್ ಮ್ಯಾಪ್ ಎರಡು ಮಾರ್ಗಗಳನ್ನು ತೋರಿಸಿದೆ. ಮ್ಯಾಪ್‌ನ ಎರಡು ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡ ಮೂವರು, ಹಳೆಯ ಸೇತುವೆ ಇರುವ ಮಾರ್ಗಕ್ಕೆ ಬಂದಿದ್ದಾರೆ.
ಆದರೆ ಆ ಸೇತುವೆ ಕಾಮಗಾರಿ ನಡೆಯುತ್ತಿದೆ ಎಂಬುದು ಗೊತ್ತಾಗಿದೆ. ಇಲ್ಲಿಗೆ ಬರುವಾಗ ಮೂವರಿಗೂ ದಾರಿ ಅರ್ಥವಾಗಿಲ್ಲ. ಶಂಕರ್ ಎಂಬ ಯುವಕ ಬೈಕ್‌ನಿಂದ ಕೆಳಗಿಳಿದು, ನೀರಿನಲ್ಲಿ ಆ ಕಡೆಯ ದಡವನ್ನು ಮುಟ್ಟಲು ಯತ್ನಿಸಿ ನೀರಿಗೆ ಇಳಿದಿದ್ದಾನೆ. ಭಾರಿ ಮಳೆಯ ಹಿನ್ನೆಲೆ ಪ್ರವಾಹ ಬಂದಿದೆ ಎಂಬ ಅರಿವಿಲ್ಲದೇ ಅದರಲ್ಲಿ ಕೊಚ್ಚಿ ಹೋಗಿದ್ದಾನೆ. ಶಂಕರ್ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಇನ್ನಿಬ್ಬರು ಯುವಕರಾದ ಆನಂದ್ ಮತ್ತು ಮನೀಶ್, ಶಂಕರ್ ಕಾಪಾಡಲು ನದಿಗೆ ಇಳಿದಿದ್ದಾರೆ. ಆದರೆ ನದಿಯಲ್ಲಿ ಭಾರಿ ಪ್ರವಾಹ ಇರುವುದರಿಂದ ಈ ಇಬ್ಬರು ಸಹ ಕೊಚ್ಚಿಕೊಂಡು ಹೋಗಿದ್ದಾರೆ.
ಆದರೆ ಅಚ್ಚರಿ ಎಂದರೆ ಮೊದಲೇ ನೀರಿಗೆ ಇಳಿದ ಶಂಕರ್ ಪ್ರವಾಹದಲ್ಲಿ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಶಂಕರ್ ಬಳಿಕ ನೀರಿಗಿಳಿದ ಆನಂದ್ ಮತ್ತು ಮನೀಶ್ ಭಾರಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ.
ಪ್ರವಾಹದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕಿ ಬಂದ ಶಂಕರ್ ನೀಡಿದ ಮಾಹಿತಿಯಂತೆ, ಸೋಮವಾರ ಮುಳುಗುಗಾರರ ತಂಡವು ಆನಂದ್ ಮತ್ತು ಮನೀಶ್ ಮೆಹ್ತಾ ಅವರ ಮೃತದೇಹಗಳನ್ನು ಹೊರತೆಗೆದಿದೆ.
ಈ ಬಗ್ಗೆ ಮಾತನಾಡಿರುವ ಸದರ್ ಉಪವಿಭಾಗಾಧಿಕಾರಿ ವಿಶಾಲ್ದೀಪ್, ಕೆಲ ದಿನಗಳ ಹಿಂದೆ ಈ ಸೇತುವೆ ಮೇಲೆ ಅಪಘಾತವೊಂದು ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಉಸ್ರಿ ನದಿಗೆ ಕಟ್ಟಲಾಗಿದ್ದ ಹಳೆ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು. ಇದನ್ನು ತಿಳಿಯದ ಯುವಕರು, ಅಪಾಯಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.
ಇದನ್ನು ಓದಿ:Horrible Road Accident: ಪಲ್ಟಿಯಾಗಿ ಹೊತ್ತಿ ಉರಿದ ಬಸ್.. 25 ಜನ ಸಜೀವ ದಹನ, ಸಿಎಂ ಪರಿಹಾರ ಘೋಷಣೆ!