ಪ್ರಯಾಗರಾಜ್(ಉತ್ತರ ಪ್ರದೇಶ): ಧ್ವನಿವರ್ಧಕಗಳಲ್ಲಿ ಆಜಾನ್ ಮೊಳಗಿಸುವುದು ಮೂಲಭೂತ ಹಕ್ಕಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ. ಉತ್ತರ ಪ್ರದೇಶದಲ್ಲಿರುವ ನೂರಿ ಮಸೀದಿಯಲ್ಲಿ ಧ್ವನಿವರ್ಧಕಗಳ ಮೂಲಕ ಆಜಾನ್ ಮೊಳಗಿಸಲು ಅನುಮತಿ ಕೋರಿ ಇರ್ಫಾನ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು ಈ ಹೇಳಿಕೆ ನೀಡಿದೆ.
ಮಸೀದಿಯಲ್ಲಿ ಧ್ವನಿವರ್ಧಕವನ್ನು ಬಳಸುವುದು ಮೂಲಭೂತ ಹಕ್ಕಲ್ಲ ಎಂಬ ಕಾನೂನನ್ನು ಈಗ ಇತ್ಯರ್ಥಗೊಳಿಸಲಾಗಿದೆ. ಅಜಾನ್ ಇಸ್ಲಾಂನ ಅವಿಭಾಜ್ಯ ಅಂಗವಾಗಿದ್ದರೂ ಅದನ್ನು ಧ್ವನಿವರ್ಧಕಗಳ ಮೂಲಕ ತಲುಪಿಸುವುದು ಧರ್ಮದ ಭಾಗವಲ್ಲ ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ಬಿ.ಕೆ.ವಿಡ್ಲಾ ಮತ್ತು ನ್ಯಾಯಮೂರ್ತಿ ವಿಕಾಸ್ ನೇತೃತ್ವದ ಪೀಠ ಈ ರೀತಿಯ ಹೇಳಿಕೆ ನೀಡಿದೆ.
ಅರ್ಜಿಯ ಕುರಿತು ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್‌ನ ದ್ವಿಸದಸ್ಯ ಪೀಠ, ಧ್ವನಿವರ್ಧಕದಲ್ಲಿ ಪ್ರಾರ್ಥನೆಗೆ ಕರೆ ನೀಡುವುದು ಮೂಲಭೂತ ಹಕ್ಕಲ್ಲ ಎಂದು ಈ ಹಿಂದೆಯೇ ನ್ಯಾಯಾಲಯಗಳು ಹಲವು ಬಾರಿ ತೀರ್ಪು ನೀಡಿವೆ ಎಂದು ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಚುನಾವಣೆ ಸುಳ್ಳು ಭರವಸೆಗಳ ಮರೆಮಾಚಲು ಸಿಎಎ ಮತ್ತೆ ಮುನ್ನೆಲೆಗೆ: ಅಮಿತ್ ಶಾ ವಿರುದ್ಧ ಸಿಪಿಐಎಂ ಕಿಡಿ