ಹೈದರಾಬಾದ್: ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ಅವಳಿ ಮಕ್ಕಳ ತಂದೆಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿಕೊಳ್ಳುವುದರ ಮೂಲಕ ಹೊರಹಾಕಿದ್ದಾರೆ.
ವಿಶ್ವ ಅಪ್ಪಂದಿರ ದಿನವಾದ ನಿನ್ನೆ ಈ ಫೋಟೋ ಹಂಚಿಕೊಂಡಿರುವ ಉಸೇನ್ ಬೋಲ್ಟ್, ಮಕ್ಕಳಿಗೂ ವಿಚಿತ್ರವಾಗಿ ನಾಮಕರಣ ಮಾಡಿದ್ದಾರೆ. ನವಜಾತ ಶಿಶುಗಳಿಗೆ ಥಂಡರ್ ಬೋಲ್ಟ್ ಮತ್ತು ಸೇಂಟ್ ಲಿಯೋ ಬೋಲ್ಟ್ ಎಂದು ಹೆಸರಿಡಲಾಗಿದೆ. ಉಸೇನ್ ಬೋಲ್ಟ್ಗೆ ಈಗಾಗಲೇ ಹೆಣ್ಣು ಮಗುವಿದ್ದು, 2019ರಲ್ಲಿ ಜನಿಸಿದೆ. ಮಗುವಿಗೆ ಒಲಿಂಪಿಯಾ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿರಿ: ಪತ್ನಿ ಹುಟ್ಟಿದ ದಿನವೇ ಮಗಳಿಗೆ ಹೆಸರಿಟ್ಟು ಜತೆಗೆ ಫೋಟೋ ಶೇರ್ ಮಾಡಿದ ಬೋಲ್ಟ್!!
ವಿಶ್ವದ ವೇಗದ ಓಟಗಾರನಾಗಿರುವ ಉಸೇನ್ ಬೋಲ್ಟ್ 2008, 2012, 2016ರ ಒಲಿಂಪಿಕ್ ಕ್ರೀಡಾಕೂಟಗಳಲ್ಲಿ 100 ಹಾಗೂ 200 ಮೀಟರ್ ಓಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 2019ರಲ್ಲಿ ಅವರು ಕ್ರೀಡೆಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ತನ್ನ ವೃತ್ತಿ ಜೀವನದ ವೇಳೆ ಬೋಲ್ಟ್ ಒಟ್ಟು 23 ಚಿನ್ನದ ಪದಕ ಗೆದ್ದಿದ್ದು, ಯಾರು ಸಹ ನಿರ್ಮಾಣ ಮಾಡದಂತಹ ದಾಖಲೆ ಬರೆದಿದ್ದಾರೆ.